ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅಶ್ವಿನ್ ಲಭ್ಯತೆ ಬಗ್ಗೆ ಮಾಹಿತಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಕೋಚ್

Ipl 2020: Ashwin May Be Available For Selection Tomorrow, Says Harris

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಂತೆಯೇ ಗಾಯಗೊಂಡು ಹೊರನಡೆದಿದ್ದರು. ಕಳೆದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಆರ್ ಅಶ್ವಿನ್ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಮಾಹಿತಿಯನ್ನು ನೀಡಿದ್ದಾರೆ. ಮುಂದಿನ ಪಂದ್ಯಕ್ಕೆ ಆರ್ ಅಶ್ವಿನ್ ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೋಚ್ ಹ್ಯಾರಿಸ್ ಮಾಹಿತಿಯನ್ನು ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆರ್ ಅಶ್ವಿನ್ ಆಡಲು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ರಿಯಾನ್ ಹ್ಯಾರಿಸ್ ಮಾಹಿತಿ ನೀಡಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆರ್ ಅಶ್ವಿನ್ ಭುಜದ ನೋವಿಗೆ ಒಳಗಾಗಿದ್ದರು. ಈಗ ಅಶ್ವಿನ್ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ ಎಂದು ಹ್ಯಾರಿಸ್ ತಿಳಿಸಿದ್ದಾರೆ.

ಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳುಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳು

ಆರ್‌ ಅಶ್ವಿನ್ ತುಂಬಾ ಚೆನ್ನಾಗಿ ಚೇತರಿಕೆ ಕಂಡಿದ್ದಾರೆ. ಕಳೆದ ರಾತ್ರಿ ಅಶ್ವಿನ್ ಅಭ್ಯಾಸದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ಅಭ್ಯಾಸವನ್ನು ನಡೆಸಿದ್ದಾರೆ. ಮುಂದಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ನಮ್ಮ ವೈದ್ಯಕೀಯ ತಂಡದಿಂದ ಖಚಿತತೆಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಿದೆ ಎಂದು ಹ್ಯಾರಿಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಮೂರು ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವನ್ನು ಕಂಡಿದ್ದು ಒಂದರಲ್ಲಿ ಸೋಲು ಅನುಭವಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಅನುಭವಿಸಿದ ಡೆಲ್ಲಿ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ರನ್‌ಗಳ ಅಂತರದಿಂದ ಸೋಲು ಕಂಡಿದೆ.

ಐಪಿಎಲ್ 2020: ಕನ್ನಡಿಗರೇ ತುಂಬಿರುವ ಕಿಂಗ್ಸ್ ‍XI ಪಂಜಾಬ್ ತಂಡಕ್ಕೆ ಕಾಡುತ್ತಿದೆ 'ಆರ್‌ಸಿಬಿ'ಯ ಸಮಸ್ಯೆ!ಐಪಿಎಲ್ 2020: ಕನ್ನಡಿಗರೇ ತುಂಬಿರುವ ಕಿಂಗ್ಸ್ ‍XI ಪಂಜಾಬ್ ತಂಡಕ್ಕೆ ಕಾಡುತ್ತಿದೆ 'ಆರ್‌ಸಿಬಿ'ಯ ಸಮಸ್ಯೆ!

ಈ ಸೋಲಿನ ಬಗ್ಗೆಯೂ ಹ್ಯಾರಿಸ್ ಪ್ರತಿಕ್ರಿಯಿಸಿದರು. ಡೆಲ್ಲಿ ಆಟಗಾರರಿಂದ ಅತ್ಯುನ್ನತ ಪ್ರದರ್ಶನ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಬಂದಿರಲಿಲ್ಲ. ಆದರೂ ಆತಂಕಪಡುವ ವಿಚಾರವಿಲ್ಲ ಎಂದಿದ್ದಾರೆ. ಕೆಕೆಆರ್ ವಿರುದ್ಧದ ಮುಂದಿನ ಪಂದ್ಯದ ಮೂಲಕ ಶಾರ್ಜಾದಲ್ಲಿ ಮೊದಲ ಬಾರಿಗೆ ಡೆಲ್ಲಿ ಆಡಲಿದೆ. ಇದು ದೊಡ್ಡ ಮೊತ್ತದ ಪಂದ್ಯವಾಗಿರಲಿದೆ ಎಂದು ಹ್ಯಾರಿಸ್ ಅಭಿಪ್ರಾಯಪಟ್ಟಿದ್ದಾರೆ.

Story first published: Saturday, October 3, 2020, 9:25 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X