ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020, ಖ್ಯಾತ ಜ್ಯೋತಿಷಿಯ ಭವಿಷ್ಯ: ಪ್ರಶಸ್ತಿ ಸುತ್ತಿಗೆ ಈ 4 ತಂಡಗಳ ಮಧ್ಯೆ ಫೈಟ್

Four Teams To Fight For IPL 2020, 13th Edition: Noted Astrologer Jaganath Guruji Prediction

ಇಂಡಿಯನ್ ಪ್ರೀಮಿಯರ್ ಲೀಗ್ ನ ಹದಿಮೂರನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ನಾಲ್ಕು ಪಂದ್ಯಗಳು ಮುಕ್ತಾಯಗೊಂಡಿದೆ. ಟಿವಿ ಮತ್ತು ಇತರ ಫಾರ್ಮ್ಯಾಟ್ ಮೂಲಕ ರೇಟಿಂಗ್ ನಲ್ಲಿ ಐಪಿಎಲ್ ವೀಕ್ಷಣೆ ಮಂಚೂಣಿಯಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಹೊರತು ಪಡಿಸಿ ಉಳಿದ ಏಳು ತಂಡಗಳು ಈಗಾಗಲೇ ಐಪಿಎಲ್ ಸರಣಿಯನ್ನು ಆರಂಭಿಸಿದೆ. ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಜೊತೆಗೆ ಬುಧವಾರ (ಸೆ 23) ಅಬುಧಾಬಿಯಲ್ಲಿ ಆಡಲಿದೆ.

ಐಪಿಎಲ್: ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತಐಪಿಎಲ್: ಆರಂಭಿಕ ಹಂತದಲ್ಲಿ ಪಂದ್ಯ ಸೋತರೆ ಈ ನಾಯಕನ ತಲೆದಂಡ ನಿಶ್ಚಿತ

ಘಟಾನುಗಟಿ ಆಟಗಾರಾರು ಇದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಮ್ಮೆಯೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿಲ್ಲ. ಮೂರು ಬಾರಿ ರನ್ನರ್ - ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದೇ ಆರ್ಸಿಬಿ ಸಾಧನೆ.

ಕೊಹ್ಲಿ ಬ್ಯಾಕ್ ಇನ್ ಆಕ್ಷನ್: ಮೈದಾನದಲ್ಲಿ ಮತ್ತದೇ ರಾಗ, ಅದೇ ಹಾಡುಕೊಹ್ಲಿ ಬ್ಯಾಕ್ ಇನ್ ಆಕ್ಷನ್: ಮೈದಾನದಲ್ಲಿ ಮತ್ತದೇ ರಾಗ, ಅದೇ ಹಾಡು

ಇನ್ನು, 2008ರಿಂದ ಇದುವರೆಗೆ ಅತಿಹೆಚ್ಚು ಬಾರಿ ಚಾಂಪಿಯನ್ ಆಗಿದ್ದು ಮುಂಬೈ ಇಂಡಿಯನ್ಸ್. ನಾಲ್ಕು ಬಾರಿ ಮುಂಬೈ ತಂಡ ಪ್ರಶಸ್ತಿಯನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಹಾಗಿದ್ದರೆ, ಈ ಎರಡು ತಂಡಕ್ಕೆ ಈ ಬಾರಿಯ ಪ್ರಶಸ್ತಿಯ ಲಭಿಸಲಿದೆಯಾ, ಈ ತಂಡಗಳು ಪ್ರಶಸ್ತಿ ಸುತ್ತಿಗೆ ಬರಲಿದೆಯಾ, ಭವಿಷ್ಯ ಹೀಗಿದೆ. ಮುಂದೆ ಓದಿ...

ಐಪಿಎಲ್ ಕ್ರೀಡಾಕೂಟ

ಐಪಿಎಲ್ ಕ್ರೀಡಾಕೂಟ

ಒಮ್ಮೆಯೂ ಪ್ರಶಸ್ತಿಯನ್ನು ಪಡೆಯದ ತಂಡಗಳೆಂದರೆ ಕಿಂಗ್ಸ್ ಇಲೆವನ್ ಪಂಜಾಬ್, ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್ಸ್. ಇನ್ನು ಕೆಕೆಆರ್ ಎರಡು ಬಾರಿ, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡ ಒಮ್ಮೆ ಪ್ರಶಸ್ತಿಯನ್ನು ಗೆದ್ದಿವೆ್. ಹಾಗಿದ್ದರೆ, ಈ ಬಾರಿ ವಿನ್ನರ್ಸ್ ಮತ್ತು ರನ್ನರ್ಸ್ ಯಾರಾಗಬಹುದು? ಭವಿಷ್ಯ ಏನು ಹೇಳುತ್ತೆ?

ಬೆಂಗಳೂರು ಮೂಲದ ಪಂಡಿತ್ ಜಗನ್ನಾಥ್ ಗುರೂಜಿ

ಬೆಂಗಳೂರು ಮೂಲದ ಪಂಡಿತ್ ಜಗನ್ನಾಥ್ ಗುರೂಜಿ

ಬೆಂಗಳೂರು ಮೂಲದ ಪಂಡಿತ್ ಜಗನ್ನಾಥ್ ಗುರೂಜಿ ಈ ಬಾರಿಯ ಪ್ರಶಸ್ತಿ ಸುತ್ತಿಗೆ ಯಾವ ತಂಡ ಹೋಗಬಹುದು ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಗುರೂಜಿ ಯಾವ ತಂಡ ಪ್ರಶಸ್ತಿಯನ್ನು ಗೆಲ್ಲುತ್ತದೆ ಎನ್ನುವುದಕ್ಕೆ ಈ ಎರಡು ತಂಡಗಳಲ್ಲಿ ಯಾವುದಾದರೂ ಒಂದು ಪ್ರಶಸ್ತಿ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ.

ಪ್ರಶಸ್ತಿ ಸುತ್ತಿಗೆ ನಾಲ್ಕು ತಂಡಗಳಿರಲಿವೆ

ಪ್ರಶಸ್ತಿ ಸುತ್ತಿಗೆ ನಾಲ್ಕು ತಂಡಗಳಿರಲಿವೆ

ಪಂಡಿತ್ ಜಗನ್ನಾಥ್ ಗುರೂಜಿ ಪ್ರಕಾರ ಈ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಥವಾ ಚೆನ್ನೈ ಸೂಪರ್ ಕಿಂಗ್ಸ್. ಆದರೆ, ರನ್ನರ್ ಅಪ್ ಸ್ಥಾನಕ್ಕೆ ಗುರೂಜಿ ಮತ್ತೆರಡು ತಂಡವನ್ನು ಗುರುತಿಸಿದ್ದು ಅವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್. ಆ ಮೂಲಕ, ಪ್ರಶಸ್ತಿ ಸುತ್ತಿಗೆ ಈ ನಾಲ್ಕು ತಂಡಗಳಿರಲಿವೆ ಎನ್ನುವ ಭವಿಷ್ಯವನ್ನು ಗುರೂಜಿ ನುಡಿದಿದ್ದಾರೆ.

ಸರಣಿಯ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಡಲಾಗುತ್ತಿದೆ

ಸರಣಿಯ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಡಲಾಗುತ್ತಿದೆ

ಕೊರೊನಾ ಹಾವಳಿಯಿಂದ ಐಪಿಎಲ್ ಹಾಲೀ ಸರಣಿಯ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ಆಡಲಾಗುತ್ತಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯ ನಗರದ ಪಿಚ್ ಗಳಲ್ಲಿ ಪಂದ್ಯ ನಡೆಯುತ್ತಿದೆ. ನವೆಂಬರ್ ಹತ್ತರಂದು ಈ ಸರಣಿಯ ಫೈನಲ್ ಪಂದ್ಯ ನಡೆಯಲಿದೆ.

Story first published: Wednesday, September 23, 2020, 15:42 [IST]
Other articles published on Sep 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X