ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯ

ಯಾವ ಆಟಗಾರನ ಬೆಲೆ ಎಷ್ಟು ಕೋಟಿ ಇದೆ ಗೊತ್ತಾ..? | IPL AUCTION | IPL 2020
IPL 2020 auction: Final list, base price of players, Indian cricketers, auction date & time

ಬೆಂಗಳೂರು, ಡಿಸೆಂಬರ್ 13: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಜ್ಜಾಗಿದ್ದು, ಡಿಸೆಂಬರ್ 13ರಂದು ಐಪಿಎಲ್ 2020 ಹರಾಜು ಪ್ರಕ್ರಿಯೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

ಡಿಸೆಂಬರ್19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಬಹುತೇಕ ಎಲ್ಲಾ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಗೆ ಸಜ್ಜಾಗಿವೆ. ಐಪಿಎಲ್‌ನ 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರವೇ ಖಾಲಿಯಾಗಿದ್ದು. ಸ್ಥಾನಗಳನ್ನಷ್ಟೇ ಭರ್ತಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಈ ಸ್ಥಾನಕ್ಕೆ ಬರೊಬ್ಬರಿ 971 ಆಟಗಾರರು ಪೈಪೋಟಿ ಇದ್ದರು. ಆದರೆ ಈಗ ಪಟ್ಟಿ ಬದಲಾಗಿದೆ.

ಐಪಿಎಲ್-2020 : ಅತಿ ಹೆಚ್ಚು ಲಾಭ-ನಷ್ಟದ ತಂಡಗಳು ಯಾವುವು?ಐಪಿಎಲ್-2020 : ಅತಿ ಹೆಚ್ಚು ಲಾಭ-ನಷ್ಟದ ತಂಡಗಳು ಯಾವುವು?

ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು, ಅಂತಾರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 196 ಕ್ರಿಕೆಟಿಗರು, ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ 60 ವಿದೇಶಿ ಕ್ರಿಕೆಟಿಗರು ಕೂಡ ಈ ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟು 971 ಆಟಗಾರರು ಹರಾಜಿಗೆ

ಒಟ್ಟು 971 ಆಟಗಾರರು ಹರಾಜಿಗೆ

ಈ ಬಾರಿಯ ಐಪಿಎಲ್​ನಲ್ಲಿ ಆಡಲು ಒಟ್ಟು 991ಆಟಗಾರರಿಂದ ಅರ್ಜಿ ಬಂದಿತ್ತು. 332 ಆಟಗಾರರನ್ನು ಫೈನಲ್ ಮಾಡಿ, 8 ಫ್ರಾಂಚೈಸಿಗಳು ಅಂತಿಮ ಪಟ್ಟಿ ನೀಡಿವೆ. 73 ಸ್ಥಾನಗಳನ್ನು ತುಂಬಬೇಕಿತ್ತು. ಇದಕ್ಕಾಗಿ 332 ಆಟಗಾರರು ಹರಾಜಿನಲ್ಲಿದ್ದಾರೆ. 29 ವಿದೇಶಿಯರಿದ್ದಾರೆ. ಚೆನ್ನೈ ಹಾಗೂ ಮುಂಬೈ ಬಜೆಟ್ ಕಡಿಮೆ ಹೊಂದಿವೆ. ಪಂಜಾಬ್, ಕೆಕೆಆರ್ ಹೆಚ್ಚು ಮೊತ್ತ ಹೊಂದಿದ್ದು, ಹೆಚ್ಚು ಮಂದಿಯನ್ನು ಖರೀದಿಸಲಿವೆ.

ಮೂಲ ಬೆಲೆ ಎಷ್ಟಿದೆ?

ಮೂಲ ಬೆಲೆ ಎಷ್ಟಿದೆ?

7 ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ಪ್ರಕಟಿಸಲಾಗಿದೆ. ಪ್ಯಾಟ್ ಕುಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಜೋಶ್ ಹೇಜಲ್ ವುಡ್, ಕ್ರಿಸ್ ಲಿನ್, ಡೇಲ್ ಸ್ಟೇನ್ ಏಂಜೆಲೋ ಮ್ಯಾಥ್ಯೂಸ್ ಹಾಗೂ ಮಿಚೆಲ್ ಮಾರ್ಷ್.

ಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ
1.5 ಕೋಟಿ ರು ಮೂಲ ಬೆಲೆ ಆಟಗಾರ
9 ಆಟಗಾರರು 1.5 ಕೋಟಿ ರು ಮೂಲ ಬೆಲೆ ಹೊಂದಿದ್ದು, ರಾಬಿನ್ ಉತ್ತಪ್ಪ ಈ ಗುಂಪಿನಲ್ಲಿರುವ ಪ್ರಮುಖ ಆಟಗಾರರೆನಿಸಿದ್ದಾರೆ.ಈ ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌ ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಾಟ್ ಈ ಪಟ್ಟಿಯಲ್ಲಿರುವ ಸ್ಟಾರ್‌ ಆಟಗಾರರಾಗಿದ್ದಾರೆ.

1 ಕೋಟಿ ರು ಮೂಲ ಬೆಲೆ

1 ಕೋಟಿ ರು ಮೂಲ ಬೆಲೆ

1 ಕೋಟಿ ರು ಮೂಲ ಬೆಲೆಯಲ್ಲಿ ಭಾರತೀಯ ಆಟಗಾರರಾದ ಪಿಯೂಷ್ ಚಾವ್ಲಾ, ಜಯದೇವ್ ಉನದ್ಕತ್ ಹಾಗೂ ಯೂಸುಫ್ ಪಠಾಣ್ ಇದ್ದಾರೆ. 9 ಆಟಗಾರರು 50 ಲಕ್ಷ ಮೂಲ ಬೆಲೆ ಕೆಟಗೆರಿಯಲ್ಲಿದ್ದಾರೆ. 13 ಮಂದಿ ಮೊದಲ ಬಾರಿ ಆಡುವ ಆಟಗಾರರಿದ್ದಾರೆ.

ಅಂತಿಮ ಪಟ್ಟಿ ಹೀಗಿದೆ

ಅಂತಿಮ ಪಟ್ಟಿ ಹೀಗಿದೆ

capped: 186 ಭಾರತೀಯ ಆಟಗಾರರು
un capped: 167 ಆಟಗಾರರು(20 ಲಕ್ಷ ರು ಮೂಲ ಬೆಲೆ)
143: ವಿದೇಶಿ ಆಟಗಾರರು
3: ಅಸೋಸಿಯೇಟ್ ದೇಶಗಳ ಆಟಗಾರರು
332: ಒಟ್ಟಾರೆ ಹರಾಜಾಗಿರುವ ಆಟಗಾರರು.
ಡಿಸೆಂಬರ್ 19: ಹರಾಜಿನ ದಿನಾಂಕ
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಹಾಟ್ ಸ್ಟಾರ್
ಸಮಯ: 3.30 pm IST.

Story first published: Friday, December 13, 2019, 18:41 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X