ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

100 ಎಸೆತ ಎದುರಿಸಿದರೂ ದಾಖಲಾಗಿಲ್ಲ ಕನಿಷ್ಠ ಒಂದು ಸಿಕ್ಸರ್: ಮುಂದುವರಿದ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ

IPL 2020: Australia star Glenn Maxwell struggling, yet to hit a six this season

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲೂ ಮ್ಯಾಕ್ಸ್‌ವೆಲ್ 12 ರನ್‌ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ವಿಕೆಟ್ ಕಲೆದುಕೊಂಡ ನಂತರ ಕಣಕ್ಕಿಳಿದರು. 11ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಕಣಕ್ಕಿಳಿದಾಗ ಕಿಂಗ್ಸ್ 66 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಎಲ್ಲರೂ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲಾದರೂ ತಮ್ಮ ಪಾರ್ಮ್ ಕಂಡುಕೊಂಡು ಉತ್ತಮ ಮೊತ್ತ ದಾಖಲಾಗಲು ಕಾರಣರಾಗಬಹುದು ಎಂದುಕೊಂಡಿದ್ದರು.

IPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆIPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆ

ಆದರೆ ಮ್ಯಾಕ್ಸ್‌ವೆಲ್ 12 ರನ್‌ಗಳಿಸಿದ್ದಾಗ ಲಾಂಗ್‌ಆನ್‌ ಕಡೆಗೆ ಚೆಂಡನ್ನು ಬೀಸಿ ಹೊಡೆದರು. ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಉತ್ತಮ ಕ್ಯಾಚ್ ಹಿಡಿಯುವ ಮೂಲಕ ಇಂದಿನ ಪಂದ್ಯದಲ್ಲೂ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನವನ್ನು ನೀಡಿದರು.

ಸಿಕ್ಸ್ ಬಾರಿಸಲು ತಿಣುಕಾಡುತ್ತಿರುವ ದುಬಾರಿ ಕ್ರಿಕೆಟರ್ ಸ್ಟೋಕ್ಸ್ಸಿಕ್ಸ್ ಬಾರಿಸಲು ತಿಣುಕಾಡುತ್ತಿರುವ ದುಬಾರಿ ಕ್ರಿಕೆಟರ್ ಸ್ಟೋಕ್ಸ್

ಪ್ರಸ್ತುತ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ 11 ಪಂದ್ಯಗಳಲ್ಲೂ ಪಂಜಾಬ್ ಪರ ಕಣಕ್ಕಿಳಿದಿದ್ದಾರೆ. 14.57ರ ಸರಾಸರಿಯಲ್ಲಿ ಮ್ಯಾಕ್ಸ್‌ವೆಲ್ ಗಳಿಸಿದ್ದು ಕೇವಲ 102 ರನ್‌ಗಳನ್ನು ಮಾತ್ರ. ಅದಕ್ಕೂ ಆಶ್ಚರ್ಯದ ವಿಚಾವೆಂದರೆ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ಮ್ಯಾಕ್ಸ್‌ವೆಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ಈವರೆಗೂ ಸಾಧ್ಯವಾಗಿಲ್ಲ.

ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ 100 ಎಸೆತಗಳನ್ನು ಎದುರಿಸಿದ್ದಾರೆ. ಆದರೆ 30 ರನ್‌ಗಳ ಗಡಿಯನ್ನು ದಾಟಲು ಸಾದ್ಯವಾಗಿದ್ದು ಕೇವಲ 1 ಬಾರಿ ಮಾತ್ರ. ಕಳೆದ ಇನ್ನಿಂಗ್ಸ್‌ಗಳಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ಹೀಗಿದೆ. 12, 32, 0, 19*, ಹಾಗೂ 7. ಈ ಕೆಟ್ಟ ಪ್ರದರ್ಶನ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಿಗೆ ಅತ್ಯಂತ ದುಬಾರಿಯಾಗಿದೆ.

Story first published: Sunday, October 25, 2020, 0:18 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X