ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ದುಬೈ ತಲುಪಿದ್ದಾರೆ ಬುಕಿಗಳು, ಆದರೆ...

IPL 2020: BCCI ACU Chief Said Bookies Have Reached Dubai

ಐಪಿಎಲ್‌ನ 13ನೇ ಆವೃತ್ತಿ ಯುಎಇದಲ್ಲಿ ನಡೆಯುತ್ತಿದೆ. ಕೊರೊನಾ ವೈರಸ್ ಭೀತಿಯ ನಡುವೆ ಸರಾಗವಾಗಿ ಆಯೋಜನೆಯಾಗುತ್ತಿದೆ. ಪಂದ್ಯದ ಸ್ಪಾಟ್ ಫಿಕ್ಸಿಂಗ್‌ಗೆ ಪ್ರತಿ ಬಾರಿಯೂ ಬುಕಿಗಳು ಪ್ರಯತ್ನ ಮಾಡುವುದು ನಡೆದೇ ಇರುತ್ತದೆ. ಆದರೆ ಈ ಬಾರಿಯೂ ಬೆಟ್ಟಿಂಗ್ ಭೂತ ಐಪಿಎಲ್‌ಅನ್ನು ಮುಕ್ತವಾಗಿರಿಸಿಲ್ಲ. ಈಗಾಗಲೇ ಅನೇಕ ಬುಕಿಗಳು ದುಬೈ ತಲುಪಿದ್ದಾರೆ. ಆದರೆ ಅವರಿಗೆ ತಮ್ಮ ಉದ್ದೇಶಿತ ಕಾರ್ಯ ನಡೆಯಲು ಸಾಧ್ಯವಾಗಿಲ್ಲ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ.

ಬುಕಿಗಳು ದುಬೈಗೆ ತಲುಪಿರುವುದರ ಮಾಹಿತಿ ನಮಗೆ ಇದೆ. ಆದರೆ ಅವರಿಗೆ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಇದುವರೆಗೂ ಎಲ್ಲವೂ ಸರಾಗವಾಗಿ ಮತ್ತು ಉದ್ದೇಶಿತ ರೀತಿಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ನಾವು ಎಮಿರೇಟ್ಸ್ ಕ್ರಿಕೆಟ್ ಕ್ಲಬ್ (ಇಸಿಬಿ) ಜತೆಗೆ ಮಾತ್ರವಲ್ಲದೆ, ಸ್ಥಳೀಯ ಪೊಲೀಸರ ಜತೆಗೂ ಸಂಪರ್ಕ ಇರಿಸಿಕೊಂಡು ಗಮನಿಸುತ್ತಿದ್ದೇವೆ. ಅವರು ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಫ್ಯಾಂಟಸಿ ಕ್ರಿಕೆಟ್ ಲೀಗ್ ಫ್ಯಾನ್ಸ್ ಗಳಿಗೆ ಆಘಾತ, ಡ್ರೀಮ್ಸ್11 ನಿರ್ಬಂಧಫ್ಯಾಂಟಸಿ ಕ್ರಿಕೆಟ್ ಲೀಗ್ ಫ್ಯಾನ್ಸ್ ಗಳಿಗೆ ಆಘಾತ, ಡ್ರೀಮ್ಸ್11 ನಿರ್ಬಂಧ

ದುಬೈನಲ್ಲಿ ಜೈವಿಕ ಸುರಕ್ಷತಾ ವಲಯ ನಿಯಮಗಳಿರುವುದರಿಂದ ತನಿಖಾ ತಂಡ ಅಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆಗೆ, ಅಲ್ಲಿ ಕ್ರಿಕೆಟ್ ನಡೆಯುವ ಮೂರು ಸ್ಥಳಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅವರು ಪ್ರತಿಯೊಂದನ್ನೂ ಪರಿಶೀಲಿಸುತ್ತಾರೆ. ನಾವು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದು, ಸ್ಥಳೀಯ ಅಧಿಕಾರಿಗಳು ನಮಗೆ ಅಗತ್ಯವಾದಾಗಲೆಲ್ಲ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಭಾರತದಲ್ಲಿ ಪ್ರತಿ ಬಾರಿಯೂ ಬೆಟ್ಟಿಂಗ್ ಚಟುವಟಿಕೆಗಳನ್ನು ನಿಯಂತ್ರಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ. ದುಬೈನಲ್ಲಿನ ಚಟುವಟಿಕೆಗಳ ಬಗ್ಗೆ ಭಾರತದ ಪೊಲೀಸರಿಗೆ ಮಾಹಿತಿ ಒದಗಿಸಲಾಗುತ್ತಿರುತ್ತದೆ. ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಕಠಿಣ ಕಾನೂನಿನ ಅಗತ್ಯವಿದೆ. ಆಗ ಮಾತ್ರ ಇದನ್ನು ತಡೆಯಲು ಸಾಧ್ಯವಾಗುತ್ತದೆ. ಈಗ ಇರುವ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಕಾನೂನಿನ ಅಗತ್ಯವಿದೆ ಎಂದಿದ್ದಾರೆ.

Story first published: Thursday, October 1, 2020, 18:04 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X