ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬಿಸಿಸಿಐನ ಹಿರಿಯ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ವೈರಸ್ ದೃಢ

Ipl 2020: Bcci Medical Team Member Tests Positive For Coronavirus

ಐಪಿಎಲ್‌ ಪಾಳಯದಲ್ಲಿ ಮತ್ತೆ ಕೊರೊನಾ ವೈರಸ್ ಸದ್ದು ಮಾಡಿದೆ. ಸಿಎಸ್‌ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೊನಾ ವೈರಸ್‌ಗೆ ತುತ್ತಾದ ಬಳಿಕ ಇದೀಗ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ವೈರಸ್ ವಕ್ಕರಿಸಿದೆ.

ಬಿಸಿಸಿಐನ ಮೂಲಗಳೇ ಈ ಬಗ್ಗೆ ಖಚಿತ ಪಡಿಸಿದ್ದು ಯುಎಇನಲ್ಲಿ ಐಪಿಎಲ್‌ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಪಾಲ್ಗೊಂಡಿರುವ ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಚೆನ್ನೈ ತಂಡದ 13 ಮಂದಿ ಕೊರೊನಾ ವೈರಸ್‌ಗೆ ತುತ್ತಾದ ಸುದ್ದಿ ಬಂದ ಕೆಲ ದಿನಗಳ ಅಂತರದಲ್ಲೇ ಈ ಸುದ್ದಿ ಹೊರ ಬಿದ್ದಿದೆ.

ಐಪಿಎಲ್‌ನಲ್ಲಿ ಲಸಿತ್ ಮಾಲಿಂಗ ಆಡಲ್ಲ, ಮುಂಬೈಗೆ ಜೇಮ್ಸ್ ಪ್ಯಾಟಿನ್ಸನ್ ಸೇರ್ಪಡೆಐಪಿಎಲ್‌ನಲ್ಲಿ ಲಸಿತ್ ಮಾಲಿಂಗ ಆಡಲ್ಲ, ಮುಂಬೈಗೆ ಜೇಮ್ಸ್ ಪ್ಯಾಟಿನ್ಸನ್ ಸೇರ್ಪಡೆ

"ಹಿರಿಯ ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್‌ಗೆ ತುತ್ತಾಗಿರವುದು ನಿಜ. ಆದರೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲದಿರುವುದರಿಂದ ಆತಂಕಗೊಳ್ಳಬೇಕಿಲ್ಲ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯುಎಇಗೆ ಪ್ರಯಾಣಿಸುವ ವೇಲೆಯಲ್ಲಿ ಅವರು ಯಾರ ಜೊತೆಗೂ ಸಂಪರ್ಕವನ್ನು ಹೊಂದಿಲ್ಲ. ಅವರನ್ನು ನಿಗಾದಲ್ಲಿ ಇರಸಲಾಗಿದ್ದು ಮುಂದಿನ ಪರೀಕ್ಷೆಯಲ್ಲಿ ನೆಗೆಟಿನ್ ವರದಿ ಬರುವ ನಿರೀಕ್ಷೆಯಿದೆ" ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

WWE ತಾರೆ ಡ್ವೇಯ್ನ್ 'ದಿ ರಾಕ್' ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್WWE ತಾರೆ ಡ್ವೇಯ್ನ್ 'ದಿ ರಾಕ್' ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್

ಕಳೆದ ಆಗಸ್ಟ್ 29 ರಂದು ಬಿಸಿಸಿಐ ಇಬ್ಬರು ಆಟಗಾರರ ಸಹಿತ 13 ಸಿಬ್ಬಂದಿಗಳು ಕೊರೊನಾ ವೈರಸ್‌ಗೆ ತುತ್ತಾಗಿರುವುದನ್ನು ಖಚಿತಪಡಿಸಿತ್ತು. ಆದರೆ ಈ ಸಂದರ್ಭದಲ್ಲಿ ಬಿಸಿಸಿಐ ಯಾವ ತಂಡ ಎಂಬುದಾಗಲಿ ಯಾವ ಆಟಗಾರರು ಎಂಬ ವಿಚಾರವನ್ನು ಬಿಸಿಸಿಐ ಅಧಿಕೃತವಾಗಿ ಬಹಿರಂಗ ಪಡಿಸಿರಲಿಲ್ಲ. ಆದರೆ ಅದು ಸಿಎಸ್‌ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳು ಎಂಬುದು ಬಹಿರಂಗಗೊಂಡಿತ್ತು.

ಸಿಎಸ್‌ಕೆ ತಮಡ ಹೊರತು ಪಡಿಸಿ ಉಳಿದ ಎಲ್ಲಾ ತಂಡಗಳು ತಮ್ಮ ಅಭ್ಯಾಸವನ್ನು ಆರಂಭಿಸಿದೆ. ನೆಟ್ ಪ್ರ್ಯಾಕ್ಟೀಸ್ ಸೇರಿದಂತೆ 'ಬಯೋ ಬಬಲ್‌'ನಲ್ಲಿ ಎಲ್ಲಾ ಆಟಗಾರರು ಐಪಿಎಲ್‌ನ 13ನೇ ಆವೃತ್ತಿಗೆ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ.

Story first published: Thursday, September 3, 2020, 15:38 [IST]
Other articles published on Sep 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X