ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿ

IPL 2020: BCCI president Sourav Ganguly identifies six young talents

ದುಬೈ: ಗಾಯಕ್ಕೀಡಾಗಿರುವ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ತಂಡದಿಂದ ಕೈಬಿಡಲಾಗಿತ್ತು. ಈ ಬಗ್ಗೆ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು ಕಳವಳ ತೋರಿಕೊಂಡಿದ್ದರು. ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದ ರೋಹಿತ್ ಅವರನ್ನು ಆಸೀಸ್ ಸರಣಿಗಾಗಿ ಪ್ರಕಟಿಸಲಾದ ತಂಡಗಳಲ್ಲಿ ಹೆಸರಿಸಿರಲಿಲ್ಲ. ರೋಹಿತ್ ಬಿಟ್ಟರೆ ಹೆಚ್ಚು ಚರ್ಚೆಗೀಡಾಗಿದ್ದ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್.

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಆಡುವ ಸೂರ್ಯಕುಮಾರ್ ಯಾದವ್ ಕೂಡ ಆಸ್ಟ್ರೇಲಿಯಾ-ಭಾರತ ಸರಣಿಗಾಗಿ ಪ್ರಕಟಿಸಲಾಗಿದ್ದ ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಐಪಿಎಲ್‌ನಲ್ಲಿ ಯಾದವ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದರೂ ಆತ ನಿರ್ಲಕ್ಷ್ಯಕ್ಕೊಳಗಾಗಿರುವ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋ

ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಗಾಗಿ ಸೂರ್ಯಕುಮಾರ್ ಹೆಸರಿಸಿಲ್ಲವಾದರೂ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಯಾದವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ 6 ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ್ದಾರೆ.

ಆತನ ಸಮಯ ಬರುತ್ತದೆ

ಆತನ ಸಮಯ ಬರುತ್ತದೆ

ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, 'ಸೂರ್ಯಕುಮಾರ್ ಒಬ್ಬ ಒಳ್ಳೆಯ ಆಟಗಾರ. ಆತನ ಸಮಯ ಬರುತ್ತದೆ. ಕೊಂಚ ಕಾಯಲಿ,' ಎಂದಿದ್ದಾರೆ. ಸೂರ್ಯಕುಮಾರ್ ಯಾದವ್ ಐಪಿಎಲ್‌ ಮತ್ತು ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರಿಗೆ ಭಾರತ ತಂಡದಲ್ಲಿ ಇನ್ನೂ ಸ್ಥಾನ ಲಭಿಸಿಲ್ಲ.

ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ

ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ

2020ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. 84 ಐಪಿಎಲ್‌ ಇನ್ನಿಂಗ್ಸ್‌ಗಳನ್ನಾಡಿರುವ ಯಾದವ್ 30.06ರ ಸರಾಸರಿಯಲ್ಲಿ 1954 ರನ್ ಬಾರಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕಗಳು ಸೇರಿವೆ.

3 ಸೀಸನ್‌ಗಳಲ್ಲಿ 400+ ರನ್

3 ಸೀಸನ್‌ಗಳಲ್ಲಿ 400+ ರನ್

ದೇಸಿ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುವ ಸೂರ್ಯಕುಮಾರ್, 2018ರಲ್ಲಿ 14 ಪಂದ್ಯಗಳಲ್ಲಿ 512 ರನ್ ಬಾರಿಸಿದ್ದರು. ಕಳೆದ ಸೀಸನ್‌ನಲ್ಲಿ 16 ಪಂದ್ಯಗಳಲ್ಲಿ 424 ರನ್ ಕಲೆ ಹಾಕಿದ್ದರು. ಈ ಸೀಸನ್‌ನಲ್ಲಿ 14 ಪಂದ್ಯಗಳನ್ನಾಡಿರುವ ಯಾದವ್ ಈಗಾಗಲೇ 410 ರನ್ ಬಾರಿಸಿದ್ದಾರೆ.

6 ಪ್ರತಿಭಾವಂತ ಆಟಗಾರರು

6 ಪ್ರತಿಭಾವಂತ ಆಟಗಾರರು

ಸಂದರ್ಶನದ ವೇಳೆ ಗಂಗೂಲಿ ಬರೀ ಸೂರ್ಯಕುಮಾರ್ ಯಾದವ್ ಒಬ್ಬರನ್ನೇ ಮೆಚ್ಚಿ ಮಾತನಾಡಿಲ್ಲ. ಅಲ್ಲದೆ ಇನ್ನು 5 ಯುವ ಆಟಗಾರರನ್ನೂ ಹೆಸರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್, ಕೋಲ್ಕತ್ತಾ ನೈಟ್ ರೈಡರ್ಸ್‌ನ ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶುಬ್‌ಮನ್ ಗಿಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೇವದತ್ ಪಡಿಕ್ಕಲ್ ಬಗ್ಗೆಯೂ ದಾದಾ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

Story first published: Thursday, November 5, 2020, 9:38 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X