ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ಜೈವಿಕ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಏನು?

ಜೈವಿಕ ಸುರಕ್ಷತಾ ಪ್ರದೇಶದ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಕೆ.ಎಂ. ಆಸಿಫ್ ಸುದ್ದಿಯಾಗಿದ್ದಾರೆ. ಅವರು ತಮ್ಮ ಹೋಟೆಲ್ ಕೊಠಡಿಯ ಕೀ ಕಳೆದುಕೊಂಡಿದ್ದರಿಂದ ಬದಲಿ ಕೀ ಪಡೆಯಲು ರಿಸೆಪ್ಷನ್‌ಗೆ ತೆರಳಿದ್ದರು ಎಂದು ಹೇಳಲಾಗಿದೆ.

ಆದರೆ ವಿವಾದವನ್ನು ಅಲ್ಲಗಳೆದಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ತಂಡದ ಸಿಬ್ಬಂದಿಯನ್ನು ಸಾಮಾನ್ಯವಾಗ ಕೋವಿಡ್ ಪರೀಕ್ಷೆಗೆ ಒಳಪಡಿಸುವ, ಆಟಗಾರರಿಗೆ ಆಹಾರ ಪೂರೈಕೆ ಮಾಡುವ ಲಾಬ್ಬಿಯ ಪ್ರತ್ಯೇಕ ಪ್ರದೇಶಕ್ಕೆ ಆಸಿಫ್ ತೆರಳಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಕೊಹ್ಲಿ-ಎಬಿ ಡಿವಿಲಿಯರ್ಸ್ ಗೆಳೆತನ ಎಷ್ಟು ಗಾಢ ಗೊತ್ತೇ?ಕೊಹ್ಲಿ-ಎಬಿ ಡಿವಿಲಿಯರ್ಸ್ ಗೆಳೆತನ ಎಷ್ಟು ಗಾಢ ಗೊತ್ತೇ?

ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಐಪಿಎಲ್ ಆಯೋಜನೆ ಮಾಡಿರುವುದರಿಂದ ಆಟಗಾರರು ಹಾಗೂ ತಂಡಗಳ ಸಿಬ್ಬಂದಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ತಂಡದ ಮ್ಯಾನೇಜ್ಮೆಂಟ್ ಗಮನಕ್ಕೆ ಬಾರದೆ ಅವರು ಹೋಟೆಲ್ ಕೊಠಡಿ ಬಿಟ್ಟು ಎಲ್ಲಿಯೂ ತೆರಳುವಂತಿಲ್ಲ. ಹೋಟೆಲ್‌ನ ರಿಸೆಪ್ಷನ್ ಕೇಂದ್ರಕ್ಕೂ ಹೋಗುವಂತಿಲ್ಲ. ಮುಂದೆ ಓದಿ.

ಆರು ದಿನಗಳ ಕ್ವಾರೆಂಟೈನ್

ಆರು ದಿನಗಳ ಕ್ವಾರೆಂಟೈನ್

ಒಂದು ವೇಳೆ ಯಾವುದೇ ತಂಡದ ಆಟಗಾರ ಜೈವಿಕ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅದು ಆಯೋಜಕರಿಗೆ ದುಬಾರಿಯಾಗಿ ಪರಿಣಮಿಸಲಿದೆ. ಹೀಗಾಗಿ ಎಲ್ಲ ಎಂಟು ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ ಹೊರಡಿಸಿದ್ದು, ಜೈವಿಕ ಸುರಕ್ಷತಾ ವಲಯದಿಂದ ಅನಧಿಕೃತವಾಗಿ ಹೊರ ಹೋದ ಆಟಗಾರರು ಆರು ದಿನಗಳ ಕ್ವಾರೆಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಒಂದು ಕೋಟಿ ರೂ ದಂಡ

ಒಂದು ಕೋಟಿ ರೂ ದಂಡ

ಐಪಿಎಲ್‌ಗಾಗಿ ನಿಗದಿಪಡಿಸಿರುವ ಜೈವಿಕ ಸುರಕ್ಷತೆಯ ನಿಯಮವನ್ನು ಉಲ್ಲಂಘನೆ ಮಾಡಿದ ಆಟಗಾರನ ತಂಡ ಒಂದು ಕೋಟಿ ರೂ.ದಷ್ಟು ಭಾರಿ ದಂಡ ಎದುರಿಸಬೇಕಾಗುತ್ತದೆ. ಜತೆಗೆ ತಂಡದ ಪಾಯಿಂಟ್‌ಗಳನ್ನು ಸಹ ಕಡಿತಗೊಳಿಸಲಾಗುತ್ತದೆ.

ಕೈ ಕೊಟ್ಟ ರೈನಾ, ಬಜ್ಜಿಗೆ ಬೈ ಬೈ ಹೇಳಲು ಮುಂದಾದ ಸಿಎಸ್‌ಕೆ

ಬದಲಿ ಆಟಗಾರನಿಲ್ಲ

ಬದಲಿ ಆಟಗಾರನಿಲ್ಲ

ಎರಡನೆ ಬಾರಿ ತಪ್ಪು ಮರುಕಳಿಸಿದರೆ ಆಟಗಾರನನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗುತ್ತದೆ. ಹಾಗೆಯೇ ಮೂರನೇ ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಟೂರ್ನಿಯಿಂದಲೇ ಆಟಗಾರನನ್ನು ಹೊರಹಾಕಲಾಗುತ್ತದೆ. ಅಲ್ಲದೆ, ಆತನ ಬದಲು ಬೇರೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲ.

60,000 ರೂ. ದಂಡ

60,000 ರೂ. ದಂಡ

ದೈನಂದಿನ ಆರೋಗ್ಯ ತಪಾಸಣೆಯನ್ನು ಪೂರ್ಣಗೊಳಿಸದ, ಜಿಪಿಎಸ್ ಟ್ರ್ಯಾಕರ್ ಧರಿಸದ ಮತ್ತು ನಿಗದಿತ ಕೋವಿಡ್ ಪರೀಕ್ಷೆಗೆ ಒಳಪಡದೆ ತಪ್ಪಿಸಿಕೊಳ್ಳುವ ಆಟಗಾರರಿಗೆ ಅಂದಾಜು 60,000 ರೂ. ದಂಡ ವಿಧಿಸಲಾಗುತ್ತದೆ. ಇದೇ ರೀತಿಯ ನಿಯಮ ತಂಡದ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೂ ಅನ್ವಯವಾಗಲಿದೆ.

ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಉಲ್ಲಂಘನೆಗೆ ಶಿಕ್ಷೆ ಏನು?

ಉಲ್ಲಂಘನೆಗೆ ಶಿಕ್ಷೆ ಏನು?

ಎಲ್ಲ ಆಟಗಾರರು ಹಾಗೂ ತಂಡದ ಸಿಬ್ಬಂದಿ ಯುಎಇಯಲ್ಲಿನ ಟೂರ್ನಿಯಲ್ಲಿ ಪ್ರತಿ ಐದನೇ ದಿನ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಕಠಿಣವಾದ ಜೈವಿಕ ಸುರಕ್ಷತಾ ನಿಯಮಗಳನ್ನು ಮೀರದಂತೆ ಕಟ್ಟೆಚ್ಚರ ವಹಿಸುವ ಜವಾಬ್ದಾರಿ ತಂಡದ ಅಧಿಕಾರಿಗಳ ಮೇಲೆ ಇರುತ್ತದೆ. ಆಟಗಾರ ಅಥವಾ ಸಿಬ್ಬಂದಿಯನ್ನು ಭೇಟಿ ಮಾಡಲು ಯಾವುದೇ ವ್ಯಕ್ತಿ ಜೈವುಕ ಸುರಕ್ಷತಾ ಸ್ಥಳದ ಒಳಗೆ ಪ್ರವೇಶಿಸಲು ಫ್ರಾಂಚೈಸಿ ಅವಕಾಶ ನೀಡಿದರೆ ಅದು ಮೊದಲ ಬಾರಿಯ ತಪ್ಪಿಗೆ 1 ಕೋಟಿ ರೂ. ದಂಡ ಪಾವತಿಸಬೇಕು. ಎರಡನೆಯ ಅಪರಾಧಕ್ಕೆ ತಂಡದ ಒಂದು ಪಾಯಿಂಟ್ ಕಡಿತಗೊಳಿಸಲಾಗುತ್ತದೆ. ಮೂರನೇ ಉಲ್ಲಂಘನೆಗೆ ಒಂದು ಗೆಲುವಿಗೆ ಸಮವಾದ ಎರಡು ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗುತ್ತದೆ.

ಆಟಗಾರನಿಲ್ಲದೆ ಹೋದರೆ ಮುಂದೇನು?

ಆಟಗಾರನಿಲ್ಲದೆ ಹೋದರೆ ಮುಂದೇನು?

ಒಂದು ವೇಳೆ ತಂಡವೊಂದಕ್ಕೆ ಕಾರಣಾಂತರಗಳಿಂದ 11 ಆಟಗಾರರ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಹೋದರೆ, ಬಿಸಿಸಿಐ ಪಂದ್ಯವನ್ನು ಬೇರೆ ದಿನ ನಿಯೋಜಿಸುತ್ತದೆ. ಮರು ನಿಯೋಜನೆ ಸಾಧ್ಯವಾಗದೆ ಹೋದರೆ ಆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಸಿಎಸ್‌ಕೆ ತಂಡದ 13 ಸದಸ್ಯರ ಪೈಕಿ ಇಬ್ಬರು ಆಟಗಾರರು ಆರಂಭದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಬಳಿಕ ಇದುವರೆಗೂ ಯಾವುದೇ ಆಟಗಾರನಲ್ಲಿ ಸೋಂಕು ಕಾಣಿಸಿಕೊಂಡಿಲ್ಲ.

Story first published: Thursday, October 1, 2020, 22:56 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X