ಫೇಕ್ ಐಪಿಎಲ್ ವೇಳಾಪಟ್ಟಿ ವೈರಲ್: ಆರಂಭ, ಅಂತ್ಯದ ದಿನಾಂಕ ರೀಲಾ?!

ಬೆಂಗಳೂರು: 13ನೇ ಆವೃತ್ತಿಯ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ನಗದು ಶ್ರೀಮಂತ ಟಿ20 ಟೂರ್ನಿ ನವೆಂಬರ್ 8ರಂದು ಕೊನೆಗೊಳ್ಳಲಿದೆ ಎಂದು ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ ಈ ದಿನಾಂಕಗಳು ರೀಲಾ, ರಿಯಲ್ಲಾ? ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ. ಕೆಲವೊಂದು ವರದಿಗಳ ಪ್ರಕಾರ ಐಪಿಎಲ್ ಆರಂಭ-ಅಂತ್ಯದ ದಿನಾಂಕಗಳು ಫೇಕ್ ಎನ್ನಲಾಗುತ್ತಿದೆ.

ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

ಈಗ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಐಪಿಎಲ್ ಆರಂಭ, ಅಂತ್ಯದ ದಿನಾಂಕಗಳು ಸತ್ಯವೋ-ಸುಳ್ಳೋ ಎಂಬ ಚರ್ಚೆಗಳು ಶುರುವಾಗಿದ್ದು ಯಾಕೆಂದರೆ, ವರದಿಯೊಂದರ ಪ್ರಕಾರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಇನ್ನೂ ಅಧಿಕೃತವಾಗಿ ಐಪಿಎಲ್ ವೇಳಾಪಟ್ಟು ಪ್ರಕಟಿಸಲ್ಲ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ದಾಖಲೆ ನಿರ್ಮಿಸಲಿದ್ದಾರೆ ಸ್ಟುವರ್ಟ್ ಬ್ರಾಡ್

ಹಾಗಾದರೆ ಐಪಿಎಲ್ ಆರಂಭ ಯಾವಾಗ? ಈಗ ಪ್ರಕಟವಾಗಿರುವ ಐಪಿಎಲ್ ವೇಳಾಪಟ್ಟಿಯ ಅಸಲಿಯತ್ತು ಏನು? ಇಲ್ಲಿದೆ ವಿವರಣೆ.

ವೈರಲ್ ಆಗಿದ್ದ ದಿನಾಂಕಗಳು

ವೈರಲ್ ಆಗಿದ್ದ ದಿನಾಂಕಗಳು

'ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು (ಶನಿವಾರ) ಆರಂಭಗೊಳ್ಳೋದು ಬಹುತೇಕ ಪಕ್ಕಾ ಆಗಿದೆ. ಫೈನಲ್ ಪಂದ್ಯ ನವೆಂಬರ್ 8ರಂದು (ಭಾನುವಾರ) ನಡೆಯಲಿದೆ. ಒಟ್ಟು 51 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಇದು ಫ್ರಾಂಚೈಸಿಗಳಿಗೆ, ಪ್ರಸಾರಕರಿಗೆ ಮತ್ತು ಮಧ್ಯಸ್ಥಗಾರರಿಗೆ ಹೊಂದಿಕೆಯಾಗಿದೆ,' ಎಂದು ಬಿಸಿಸಿಐ ಮೂಲವೊಂದು ಹೇಳಿತ್ತು.

ಖಾತರಿ ಪಡಿಸಿದ್ದ ಬ್ರಿಜೇಶ್ ಪಟೇಲ್

ಖಾತರಿ ಪಡಿಸಿದ್ದ ಬ್ರಿಜೇಶ್ ಪಟೇಲ್

ಬಿಸಿಸಿಐ ಮೂಲವೊಂದು ಐಪಿಎಲ್ ಆರಂಭ, ಅಂತ್ಯದ ದಿನಾಂಕ ತಿಳಿಸಿದ ಬೆನ್ನಲ್ಲೇ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಕೂಡ ಇದೇ ದಿನಾಂಕಗಳನ್ನು ಖಾತರಿಪಡಿಸಿದ್ದರು. 'ಈ ಬಾರಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಯಲಿದೆ. 51 ದಿನಗಳ ಪಂದ್ಯ ಇದಾಗಿರಲಿದೆ,' ಎಂದು ಬ್ರಿಜೇಶ್ ಹೇಳಿದ್ದರು.

ಫೇಕ್ ಪಿಡಿಎಫ್ ವೈರಲ್?

ಫೇಕ್ ಪಿಡಿಎಫ್ ವೈರಲ್?

ಅಬುಧಾಬಿ, ದುಬೈ ಮತ್ತು ಶಾರ್ಜಾ ತಾಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಪಂದ್ಯಗಳು ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿವೆ. ಪಂದ್ಯಗಳು ಭಾರತೀಯ ಕಾಲಮಾನ 3:30 ಮತ್ತು 7:30 pmರಂತೆ ಆರಂಭವಾಗಲಿವೆ ಎಂದು ಮೂಲವೊಂದು ಹೇಳಿತ್ತು. ಆದರೆ ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿದ್ದ ಫೇಕ್ ಪಿಡಿಎಫ್‌ ವೇಳಾಪಟ್ಟಿಯಲ್ಲಿ ಪಂದ್ಯಗಳು 4 pm ಮತ್ತು 8 pmಗೆ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ ಐಪಿಎಲ್ ವೇಳಾಪಟ್ಟಿ ಬಗ್ಗೆ ಅನುಮಾನ ಶುರುವಾಗಿದೆ.

ಅಧಿಕೃತ ಘೋಷಣೆ ಆಗಬೇಕಷ್ಟೇ

ಅಧಿಕೃತ ಘೋಷಣೆ ಆಗಬೇಕಷ್ಟೇ

'ಐಪಿಎಲ್ 2020' ವೇಳಾಪಟ್ಟಿ ಈಗ ವೈರಲ್ ಆಗಿರುವ ರೀತಿಯಲ್ಲೇ ಇರಬಹುದು. ಅಥವಾ ಬದಲಾಗಿಯೂ ಇರಬಹುದು. ಆದರೆ ಸದ್ಯಕ್ಕಂತೂ ಐಪಿಎಲ್‌ ಬಗ್ಗೆ ನಿಖರ ಮಾಹಿತಿ ನೀಡುವ ಬಿಸಿಸಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐನಿಂದ ಐಪಿಎಲ್‌ ಬಗ್ಗೆ ಅಧಿಕೃತ ಘೋಷಣೆ ಬರುವವರೆಗೂ ತಾಳ್ಮೆಯಿಂದ ಕಾಯಬೇಕಾಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, July 25, 2020, 18:29 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X