ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

IPL 2020: Ben Stokes’ folded finger to tribute his father Ged Stokes

ಅಬುಧಾಬಿ: ಅಕ್ಟೋಬರ್ 25ರ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್‌ನ ಆಲ್ ರೌಂಡರ್, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಐಪಿಎಲ್‌ ಸೀಸನ್‌ನಲ್ಲಿ ಸ್ಟೋಕ್ಸ್ ನೀಡಿದ ಅತ್ಯುತ್ತಮ ಪ್ರದರ್ಶನವದು. ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮತ್ತು ಜೋಫ್ರಾ ಆರ್ಚರ್-ಶ್ರೇಯಸ್ ಗೋಪಾಲ್ ಬೌಲಿಂಗ್ ಬಲದಿಂದ ರಾಜಸ್ಥಾನ್ ತಂಡ ಸೋಲುವ ಪಂದ್ಯವನ್ನು ಗೆದ್ದುಕೊಂಡಿತ್ತು.

'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಬಂದಿದ್ದ ಬೆನ್ ಸ್ಟೋಕ್ಸ್ 60 ಎಸೆತಗಳಲ್ಲಿ 107 ರನ್ ಬಾರಿಸಿದ್ದರು. ಇನ್ನು ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 51 ರನ್ ಕೊಡುಗೆ ನೀಡಿದ್ದರು. ಪರಿಣಾಮ ಸ್ಟೀವ್ ಸ್ಮಿತ್ ನಾಯಕತ್ವದ ಆರ್‌ಆರ್‌ ತಂಡ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಗಳಿಸಿತ್ತು.

ಸಿಎಸ್‌ಕೆ ಸೋಲಿಗೆ ಮನ ಕರಗುವ ಕವಿತೆ ಪೋಸ್ಟ್ ಮಾಡಿದ ಸಾಕ್ಷಿ ಧೋನಿಸಿಎಸ್‌ಕೆ ಸೋಲಿಗೆ ಮನ ಕರಗುವ ಕವಿತೆ ಪೋಸ್ಟ್ ಮಾಡಿದ ಸಾಕ್ಷಿ ಧೋನಿ

ಅದ್ಭುತ ಪ್ರದರ್ಶನ ನೀಡಿದ ಬಳಿಕ ಬೆನ್ ಸ್ಟೋಕ್ಸ್ ತನ್ನ ಕೈಯ ನಡು ಬೆರಳನ್ನು ಮಡಚಿ ಪೋಸ್ ಕೊಟ್ಟಿದ್ದರು. ಇದರ ಹಿಂದೊಂದು ಕುತೂಹಲಕಾರಿ ಕಾರಣವಿದೆ.

ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್

ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್

ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. 21 ಎಸೆತಗಳಿಗೆ 60 ರನ್ ಬಾರಿಸಿದ್ದರು. ಇಶಾನ್ ಕಿಶನ್ 37, ಸೂರ್ಯಕುಮಾರ್ ಯಾದವ್ 40, ಸೌರಭ್ ತಿವಾರಿ 34 ರನ್‌ ಕೊಡುಗೆಯೊಂದಿಗೆ ಮುಂಬೈ 20 ಓವರ್‌ಗೆ 5 ವಿಕೆಟ್ ಕಳೆದು 195 ರನ್ ಗಳಿಸಿತ್ತು. ಆದರೆ ಆರ್‌ಆರ್ ಇದನ್ನು ಚೇಸ್ ಮಾಡಿತ್ತು.

ಸ್ಟೋಕ್ಸ್ ಬೆರಳು ಮಡಚಿದ್ದೇಕೆ?

ಸ್ಟೋಕ್ಸ್ ಬೆರಳು ಮಡಚಿದ್ದೇಕೆ?

ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದ ಬಳಿಕ ಬೆನ್ ಸ್ಟೋಕ್ಸ್ ತನ್ನ ಕೈಯ ನಡು ಬೆರಳನ್ನು ಮಡಚಿ ಪೋಸ್ ಕೊಟ್ಟಿದ್ದರು. ಸ್ಟೋಕ್ಸ್ ಹೀಗೆ ಪೋಸ್ ನೀಡಿದ್ದಿದ್ದು ಇದೇ ಮೊದಲಲ್ಲ. ಹಿಂದೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ವೇಳೆಯೂ ಹೀಗೆ ಪೋಸ್ ಕೊಟ್ಟಿದ್ದರು. ಇದಕ್ಕೆ ಕಾರಣವಿದೆ. ತನ್ನ ತಂದೆಯನ್ನು ನೆನೆದು ಸ್ಟೋಕ್ಸ್ ಹೀಗೆ ಮಾಡುತ್ತಿದ್ದಾರೆ.

ಗೆಡ್ ಸ್ಟೋಕ್ಸ್‌ಗೆ ಬೆರಳಿಲ್ಲ

ಗೆಡ್ ಸ್ಟೋಕ್ಸ್‌ಗೆ ಬೆರಳಿಲ್ಲ

ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್‌ಗೆ ಎಡಗೈಯ ನಡು ಬೆರಳಿಲ್ಲ. ರಗ್ಬೀ ಆಟಗಾರರಾಗಿದ್ದ ಗೆಡ್, ಅನೇಕ ಬಾರಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಹಳಷ್ಟು ಸಾರಿ ಬೆರಳಿಗೆ ಶಸ್ತ್ರ ಚಿಕಿತ್ಸೆಯೂ ಮಾಡಿಕೊಂಡಿದ್ದರು. ಆದರೆ ಚಿಕಿತ್ಸೆಗಳು ವಿಫಲವಾಗಿದ್ದರಿಂದ ನಡು ಬೆರಳನ್ನು ತೆಗೆಸಬೇಕಾಗಿ ಬಂದಿತ್ತು.

ಬ್ರೇನ್ ಕ್ಯಾನ್ಸರ್ ಬೇರೆ!

ಬ್ರೇನ್ ಕ್ಯಾನ್ಸರ್ ಬೇರೆ!

ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್‌ಗೆ ಬ್ರೇನ್ ಕ್ಯಾನ್ಸರ್ ಕೂಡ ಇದೆ. ಐಪಿಎಲ್‌ಗೆ ಸ್ಟೋಕ್ಸ್ ತಡವಾಗಿ ಎಂಟ್ರಿ ಕೊಟ್ಟಿದ್ದು ಇದೇ ಕಾರಣಕ್ಕೆ. ನ್ಯೂಜಿಲೆಂಡ್ ಆಸ್ಪತ್ರೆಯಲ್ಲಿ ಗೆಡ್ ಚಿಕಿತ್ಸೆ ಪಡೆಯುತ್ತಿದ್ದರಿಂದ ಸ್ಟೋಕ್ಸ್ ಅಲ್ಲಿಗೆ ತೆರಳಿ ಸ್ವಲ್ಪ ಕಾಲ ತಂದೆಯ ಜೊತೆಗಿದ್ದರು. ಮುಂಬೈ ವಿರುದ್ಧದ ಶತಕವನ್ನೂ ಸ್ಟೋಕ್ಸ್ ತನ್ನ ತಂದೆಗೆ ಅರ್ಪಿಸಿದ್ದಾರೆ.

Story first published: Monday, October 26, 2020, 13:29 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X