ದುಬೈ: ಗುರುವಾರ (ಅಕ್ಟೋಬರ್ 8) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 22ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ 69 ರನ್ಗಳ ಗೆಲುವು ದಾಖಲಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಜಾನಿ ಬೇರ್ಸ್ಟೋವ್ ಮತ್ತು ಡೇವಿಡ್ ವಾರ್ನರ್ ಅವರ ಸ್ಫೋಟಕ ಅರ್ಧ ಶತಕದಿಂದ ಎಸ್ಆರ್ಎಚ್ ಟೂರ್ನಿಯ 3ನೇ ಗೆಲುವು ಕಂಡಿತ್ತು.
ಕುಂಬ್ಳೆಯ ಹೇಳಿಕೆಯಿಂದ ಮ್ಯಾಕ್ಸ್ವೆಲ್ ಭವಿಷ್ಯ ಸ್ಪಷ್ಟವಾಗಿದೆ: ಪ್ರಗ್ಯಾನ್ ಓಝಾ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ನಿಂದ ಜಾನಿ ಬೇರ್ಸ್ಟೋವ್ 97 (55 ಎಸೆತ), ಡೇವಿಡ್ ವಾರ್ನರ್ 52 (40), ಕೇನ್ ವಿಲಿಯಮ್ಸನ್ 20 ರನ್ನೊಂದಿಗೆ 201 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ XI ಪಂಜಾಬ್ 132 ರನ್ ಬಾರಿಸಿ ಶರಣಾಗಿತ್ತು.
ದಿನೇಶ್ ಕಾರ್ತಿಕ್ ಹಾಗೂ ಕೋಚ್ ಮೆಕ್ಕಲಮ್ ಕರ್ತವ್ಯದ ಬಗ್ಗೆ ಇಯಾನ್ ಮಾರ್ಗನ್ ಹೇಳಿಕೆ
ಸನ್ ರೈಸರ್ಸ್ ಹೈದಾರಾಬಾದ್ ತಂಡ ಅತೀ ಹೆಚ್ಚು ರನ್ ಗೆಲುವಿನ ದಾಖಲೆ ನಿರ್ಮಿಸಿದ್ದು ಕಳೆದ ವರ್ಷ. ಹೈದರಾಬಾದ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 118 ರನ್ಗಳ ಗೆಲುವು ದಾಖಲಿಸಿತ್ತು. ಇದು ಆರ್ಆರ್ ಪಾಲಿನ ಅತೀ ದೊಡ್ಡ ಗೆಲುವೆನಿಸಿದೆ.
ಐಪಿಎಲ್ ಮಧ್ಯದಲ್ಲೇ 5 ಸ್ಟಾರ್ ಭಾರತೀಯ ಕ್ರಿಕೆಟರ್ ವರ್ಗಾವಣೆ ಸಾಧ್ಯತೆ
ಇನ್ನು 2016ರಲ್ಲಿ ವಿಶಾಖಪಟ್ಟಣದಲ್ಲಿ ನಡೆದಿದ್ದ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 85 ರನ್ಗಳ ಜಯ ಗಳಿಸಿತ್ತು. ಈ ಎರಡು ಗೆಲುವುಗಳಲ್ಲದೆ 2020ರಲ್ಲಿ ಅಂದರೆ ಅಕ್ಟೋಬರ್ 8ರಂದು ಕಿಂಗ್ಸ್ XI ಪಂಜಾಬ್ ವಿರುದ್ಧ ದಾಖಲಿಸಿದ 69 ರನ್ ಗೆಲುವು ಮೂರನೇ ಅತೀ ಹೆಚ್ಚು ರನ್ಗಳ ಗೆಲುವಾಗಿ ಗುರುತಿಸಲ್ಪಟ್ಟಿದೆ.