ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಷ್ಟ ಮನಸ್ಸಿನಿಂದ ಬೌಲಿಂಗ್ ಮಾಡೋದು ನನ್ನ ಶಕ್ತಿ: ರಶೀದ್ ಖಾನ್

IPL 2020: bowling with a clear mind is my biggest strength, says Rashid Khan

ದುಬೈ: ವಿಶ್ವದ ಅಪಾಯಕಾರಿ ಸ್ಪಿನ್ನರ್‌ಗಳಲ್ಲಿ ಗುರುತಿಸಿಕೊಂಡವರು ಅಫ್ಘಾನಿಸ್ತಾನ್‌ನ ರಶೀದ್ ಖಾನ್. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲೂ ರಶೀದ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರಶೀದ್ ಬೌಲಿಂಗ್ ಬೆಂಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ 88 ರನ್‌ಗಳ ಭರ್ಜರಿ ಜಯ ಗಳಿಸಿತ್ತು.

ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!

ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರಶೀದ್, ಡೆಲ್ಲಿ ಕ್ಯಾಪಿಟಲ್ಸ್‌ನ 3 ಪ್ರಮುಖ ವಿಕೆಟ್‌ಗಳನ್ನು ಕೆಡವಿ ಸೋಲಿಗೆ ಕಾರಣರಾಗಿದ್ದರು. 4 ಓವರ್‌ಗಳನ್ನು ಎಸೆದಿದ್ದ ರಶೀದ್, 7 ರನ್‌ ನೀಡಿ ಅಜಿಂಕ್ಯ ರಹಾನೆ, ಶಿಮ್ರನ್ ಹೆಟ್ಮೈಯರ್, ಅಕ್ಸರ್ ಪಟೇಲ್ ವಿಕೆಟ್ ಮುರಿದ್ದರು.

ಪಂದ್ಯದ ಬಳಿಕ ಮಾತನಾಡಿದ ರಶೀದ್, 'ನಾನು ಸ್ಪಷ್ಟ ಮನಸ್ಸಿನಿಂದ ಹೋಗಿ ಬೌಲಿಂಗ್ ಮಾಡುತ್ತೇನೆ. ಸಂದರ್ಭ ಏನೇ ಇರಲಿ, ನಾನು ಒಳ್ಳೆಯ ಲೈನ್ ಮತ್ತು ಲೆಂತ್‌ನೊಂದಿಗೆ ಬೌಲಿಂಗ್ ಮಾಡಲು ಬಯಸುತ್ತೇನೆ. ಲೈನ್ ಮತ್ತು ಲೆಂತ್ ಅನ್ನು ಮಿಶ್ರಣ ಮಾಡಿ ನೀವು ಬ್ಯಾಟ್ಸ್‌ಮನ್‌ಗಳ ಮನಸ್ಸಿನಲ್ಲಿ ನೀವು ಆಡಬೇಕು. ಬ್ಯಾಟ್ಸ್‌ಮನ್‌ಗಳ ಶಕ್ತಿ ಮತ್ತು ದೌರ್ಬಲ್ಯವನ್ನು ನೀವು ಗಮನಿಸಬೇಕು,' ಎಂದಿದ್ದಾರೆ.

ಐಪಿಎಲ್ 2020: ಆರ್‌ಸಿಬಿ ತಂಡಕ್ಕೆ ಹಿನ್ನಡೆ, ಪ್ರಮುಖ ಬೌಲರ್‌ಗೆ ಗಾಯಐಪಿಎಲ್ 2020: ಆರ್‌ಸಿಬಿ ತಂಡಕ್ಕೆ ಹಿನ್ನಡೆ, ಪ್ರಮುಖ ಬೌಲರ್‌ಗೆ ಗಾಯ

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್, ಡೇವಿಡ್ ವಾರ್ನರ್ 66 (34 ಎಸೆತ), ವೃದ್ಧಿಮಾನ್ ಸಾಹ 87 (45 ಎಸೆತ), ಮನೀಶ್ ಪಾಂಡೆ 44 (31) ರನ್‌ನೊಂದಿಗೆ 20 ಓವರ್‌ಗೆ 2 ವಿಕೆಟ್ ಕಳೆದು 219 ರನ್ ಗಳಿಸಿತು. ಡೆಲ್ಲಿ ತಂಡ, ಅಜಿಂಕ್ಯ ರಹಾನೆ 16, ಶಿಮ್ರನ್ ಹೆಟ್ಮೈಯರ್ 16, ರಿಷಭ್ ಪಂತ್ 36, ತುಷಾರ್ ದೇಶಪಾಂಡೆ 20 ರನ್‌ನೊಂದಿಗೆ 19 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 131 ರನ್ ಬಾರಿಸಿತು.

Story first published: Wednesday, October 28, 2020, 10:48 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X