ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಶ್ರೇಷ್ಠ ತಂಡ ಹೆಸರಿಸಿದ ಹಾಗ್, ಕೊಹ್ಲಿ, ರಾಹುಲ್ ಇಲ್ಲ

IPL 2020: Brad Hoggs best XI doesn t include No KL Rahul, Virat Kohli

ಐಪಿಎಲ್ 2020ರ ಲೀಗ್ ಹಂತ ಮುಗಿದಿದ್ದು, ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ತನಕದ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿ ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್ ತಮ್ಮ ಶ್ರೇಷ್ಠ ಹನ್ನೊಂದು ಮಂದಿ ತಂಡ ಪ್ರಕಟಿಸುವುದು ಮಾಮೂಲಿ.

ಅದರಂತೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು ತಮ್ಮ ಆಯ್ಕೆಯ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಹಾಗ್ ತಂಡದಲ್ಲಿ ಪಂಜಾಬ್ ನಾಯಕ ಕೆಎಲ್ ರಾಹುಲ್ ಆಗಲಿ, ಆರ್ ಸಿಬಿ ನಾಯಕ ಕೊಹ್ಲಿಯಾಗಲಿ ಸ್ಥಾನ ಪಡೆದಿಲ್ಲ. ಆರೆಂಜ್ ಕ್ಯಾಪ್ ಗೆಲ್ಲುವ ರೇಸಿನಲ್ಲಿ ಎಲ್ಲರಿಗಿಂತ ಮುಂದಿರುವ ರಾಹುಲ್ ಅವರು ಅತಿ ಹೆಚ್ಚುರನ್ ಚೆಚ್ಚಿದ್ದರೂ ಸ್ಟ್ರೈಕ್ ರೇಟ್ ದೃಷ್ಟಿಯಿಂದ ಆಯ್ಕೆ ಮಾಡಿಲ್ಲ. ಕೊಹ್ಲಿ ಆಯ್ಕೆಯಾಗದಿರುವುದಕ್ಕೂ ಇದೇ ಕಾರಣ ಎಂದಿದ್ದಾರೆ.

ಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿ

ಪ್ಲೇ ಆಫ್ ಹಂತಕ್ಕೆ ನಾಲ್ಕು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಸೇರಿದರೆ, ನಂತರ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಸೇರ್ಪಡೆಗೊಂಡವು. ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಸೋಲಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡಾ ಅರ್ಹತೆ ಗಳಿಸಿದೆ.

ಹಾಗ್ ಅವರು ತಮ್ಮ ತಂಡದ ಆರಂಭಿಕರಾಗಿ ಮಯಾಂಕ್ ಅಗರವಾಲ್ ಹಾಗೂ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದ್ದಾರೆ. ಮಯಾಂಕ್ 156.4 ಸ್ಟ್ರೈಕ್ ರೇಟ್ ನಂತೆ 424ರನ್ ಚೆಚ್ಚಿದರೆ, ಧವನ್ ಅವರು ಶತಕ ಸೇರಿದಂತೆ 145 ಸ್ಟ್ರೈಕ್ ರೇಟ್ ನಲ್ಲಿ 525ರನ್ ಗಳಿಸಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಮುಂಬೈನ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆರ್ ಸಿಬಿಯ ಎಬಿ ಡಿ ವಿಲಿಯರ್ಸ್, ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಇದ್ದಾರೆ. ತಂಡಕ್ಕೆ ಮಾರ್ಗನ್ ಅವರನ್ನು ನಾಯಕರನ್ನಾಗಿಸಲಾಗಿದೆ.

ಐಪಿಎಲ್ ಪ್ಲೇ ಆಫ್: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ವೇಳಾಪಟ್ಟಿ ಐಪಿಎಲ್ ಪ್ಲೇ ಆಫ್: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ವೇಳಾಪಟ್ಟಿ

ಐಪಿಎಲ್ ನಲ್ಲಿ ಬೌಲಿಂಗ್ ಮಾಡದಿದ್ದರೂ ಮುಂಬೈನ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಲ್ ರೌಂಡರ್ ಆಗಿ ಸೇರಿಸಿಕೊಳ್ಳಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಮುಂಬೈನ ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಸ್ಪಿನ್ನರ್ ಗಳಾದ ರಶೀದ್ ಖಾನ್, ಯುಜುವೇಂದ್ರ ಚಾಹಲ್ ಇದ್ದಾರೆ.

ಬ್ರಾಡ್ ಹಾಗ್ ಅವರ ಆಯ್ಕೆಯ ಶ್ರೇಷ್ಠ XI 2020
ಶಿಖರ್ ಧವನ್, ಮಯಾಂಕ್ ಅಗರವಾಲ್, ಸೂರ್ಯ ಕುಮಾರ್ ಯಾದವ್, ಎಬಿ ಡಿ ವಿಲಿಯರ್ಸ್, ಇಯಾನ್ ಮಾರ್ಗನ್, ಹಾರ್ದಿಕ್ ಪಾಂಡ್ಯ, ಜೋಫ್ರಾ ಆರ್ಚರ್, ರಶೀದ್ ಖಾನ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್.

Story first published: Thursday, November 5, 2020, 19:34 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X