ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಯ ಅದ್ಭುತ ಗುಣವನ್ನು ಕೊಂಡಾಡಿದ ಬ್ರೆಟ್ ಲೀ

IPL 2020: Brett Lee Hails MS Dhoni For Backing Shane Watson

ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷೆ ತಲೆಕೆಳಗಾಗಿಸಿದ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು. ಎಂಎಸ್ ಧೋನಿ ನೇತೃತ್ವದಲ್ಲಿ ಹಿರಿಯ ಆಟಗಾರರೇ ಹೆಚ್ಚಿರುವ ಸಿಎಸ್‌ಕೆ 'ಡ್ಯಾಡ್ಸ್ ಆರ್ಮಿ' ಎಂದೇ ಹೆಸರಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಸಿಎಸ್‌ಕೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಭರ್ಜರಿ ಗೆಲುವಿನ ಮೂಲಕ ಪುಟಿದೇಳುವ ಸೂಚನೆ ನೀಡಿದೆ.

ಮೊದಲ ನಾಲ್ಕು ಪಂದ್ಯಗಳಲ್ಲಿ 108.33ರ ಸ್ಟ್ರೈಕ್ ರೇಟ್‌ ಮತ್ತು ಕೇವಲ 13ರ ಸರಾಸರಿಯಲ್ಲಿ 52 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವಾಟ್ಸನ್ ಅವರನ್ನು ತಂಡದಿಂದ ಕೈಬಿಡುವಂತೆ ಅನೇಕರು ಆಗ್ರಹಿಸಿದ್ದರು. ಆದರೆ ವಾಟ್ಸನ್ ಮೇಲೆ ನಂಬಿಕೆ ಇರಿಸಿದ್ದ ಧೋನಿ, ಅವರನ್ನು ತಂಡದಲ್ಲಿ ಉಳಿಸಿಕೊಂಡರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಾಟ್ಸನ್ 53 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿದರು. ಅವರ ಜತೆಗೂಡಿ ಔಟಾಗದೆ 87 ರನ್ ಗಳಿಸಿದ ಫಾಫ್ ಡು ಪ್ಲೆಸಿಸ್, ಸಿಎಸ್‌ಕೆಗೆ 10 ವಿಕೆಟ್ ಗೆಲುವು ತಂದುಕೊಟ್ಟಿದ್ದರು.

ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್

ವಾಟ್ಸನ್ ಅವರಿಗೆ ಬೆಂಬಲ ನೀಡಿದ ಎಂಎಸ್ ಧೋನಿ ಅವರನ್ನು ಸಿಎಸ್‌ಕೆ ಗೆಲುವಿನ ಬಳಿಕ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಶ್ಲಾಘಿಸಿದ್ದಾರೆ. 'ಎಂಎಸ್ ಧೋನಿ ಅವರ ಅದ್ಭುತ ವಿಷಯವೆಂದರೆ ಅವರು ತಮ್ಮ ಆಟಗಾರರನ್ನು ನಂಬುತ್ತಾರೆ. ಆಡುವ ಹನ್ನೊಂದರ ಬಳಗಕ್ಕೆ ಬದ್ಧರಾಗಿರುತ್ತಾರೆ. ಯಾರಾದರೂ ಗಾಯಗೊಂಡರೆ 13-14 ಮಂದಿಯನ್ನೂ ಬೆಂಬಲಿಸುತ್ತಾರೆ. ಅವರು ನಂಬುವ 11 ಮಂದಿ ತಂಡಕ್ಕೆ ಬದ್ಧರಾಗಿರುತ್ತಾರೆ' ಎಂದು ಹೇಳಿದ್ದಾರೆ.

ಐಪಿಎಲ್ 2020: ಐಪಿಎಲ್ 2020: "ಇದೇ ಮೊದಲು ಇದೇ ಕೊನೆ": ಮಂಕಡಿಂಗ್ ಆರ್‌ ಅಶ್ವಿನ್ ಬಹಿರಂಗ ಎಚ್ಚರಿಕೆ

ವಾಟ್ಸನ್ ಅವರಿಗೆ ಅವಕಾಶ ನೀಡಿದ್ದಕ್ಕೆ ಮತ್ತು ತಮ್ಮ ತಂಡದ ಆಟಗಾರನನ್ನು ಬೆಂಬಲಿಸಿದ್ದಕ್ಕೆ ಎಂಎಸ್‌ ಧೋನಿಗೆ ಹ್ಯಾಟ್ಸಾಫ್. ವ್ಯಾಟೋ ಅಂದು ಸಂಪೂರ್ಣ ಪ್ರಾಬಲ್ಯ ಮೆರೆದರು. ಕಳೆದ ಕೆಲವು ಪಂದ್ಯಗಳಲ್ಲಿ ಅವರು ಚೆಂಡಿ ಗತಿಗೆ ತಕ್ಕಂತೆ ಆಡುವ ಬದಲು ಅಡ್ಡ ಬೀಸುತ್ತಿದ್ದರು. ಆದರೆ ಈ ಬಾರಿ ಚೆಂಡಿನ ದಿಕ್ಕಿಗೆ ಸರಿಯಾಗಿ ಆಡಿದರು ಎಂದು ವಾಟ್ಸನ್ ಆಟವನ್ನು ಹೊಗಳಿದ್ದಾರೆ.

Story first published: Tuesday, October 6, 2020, 15:47 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X