ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀ

ಮುಂಬೈ, ಸೆಪ್ಟೆಂಬರ್ 26: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಸೆ. 24ರಂದು ಮುಂಬೈನಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. 59 ವರ್ಷದ ಡೀನ್ ಜೋನ್ಸ್, ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗೆ ಐಪಿಎಲ್ 2020 ಕ್ರಿಕೆಟ್ ಟೂರ್ನಿಯ ವೀಕ್ಷಕ ವಿವರಣೆ ನೀಡಲು ಭಾರತಕ್ಕೆ ಬಂದಿದ್ದರು. ಮುಂಬೈ ಹೋಟೆಲ್‌ನ ಲಾಬಿಯಲ್ಲಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಆ ಸಂದರ್ಭದಲ್ಲಿ ಡೀನ್ ಜೋನ್ಸ್ ಜತೆಗಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹರಸಾಹಸಪಟ್ಟಿದ್ದರು ಎನ್ನುವುದು ಬಹಿರಂಗವಾಗಿದೆ. ಬ್ರೆಟ್ ಲೀ ಜತೆಗೆ ಹೋಟೆಲ್ ಲಾಬಿಯೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಡೀನ್ ಜೋನ್ಸ್ ಕುಸಿದುಬಿದ್ದರು. ಆಗ ಬ್ರೆಟ್ ಲೀ ಅವರಿಗೆ ಕೃತಕ ಉಸಿರಾಟ ನೀಡುವ ಮೂಲಕ ಜೀವ ಉಳಿಸಲು ಪ್ರಯತ್ನಿಸಿದ್ದರು ಎಂದು ಆಸ್ಟ್ರೇಲಿಯಾದ ಡೇಲಿ ಮೇಲ್ ವರದಿ ಮಾಡಿದೆ. ಮುಂದೆ ಓದಿ.

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ನಿಧನ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ನಿಧನ

ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದರು

ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದರು

ಡೀನ್ ಜೋನ್ಸ್ ಕುಸಿದುಬಿದ್ದುದ್ದನ್ನು ನೋಡಿದ ಬ್ರೆಟ್ ಲೀ, ಕೂಡಲೇ ಇದು ಹೃದಯಾಘಾತ ಎಂಬುದನ್ನು ಅರಿತು ಅವರಿಗೆ ತುರ್ತು ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸುಸ್ಕಿಟೇಷನ್) ಅನುಸರಿಸಿದ್ದರು. ಜೋನ್ಸ್ ಅವರ ಎದೆಯ ಭಾಗವನ್ನು ಒತ್ತುವ ಮೂಲಕ ಎರಡು ಬಾರಿ ಹೃದಯ ಬಡಿತವನ್ನು ಸರಿಪಡಿಸಿದ್ದರು. ಜತೆಗೆ ಅವರ ಬಾಯಿಗೆ ಬಾಯಿಟ್ಟು ಉಸಿರು ಕೂಡ ನೀಡಿದ್ದರು.

ಪ್ರಯತ್ನ ವಿಫಲ

ಪ್ರಯತ್ನ ವಿಫಲ

ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಆಗಮಿಸುವವರೆಗೂ ಡೀನ್ ಜೋನ್ಸ್ ಅವರ ಉಸಿರಾಟ ಹಾಗೂ ಎದೆ ಬಡಿತ ನಿಲ್ಲದಂತೆ ಹೋಟೆಲ್‌ನಲ್ಲಿ ಬ್ರೆಟ್ ಲೀ ಸತತ ಪ್ರಯತ್ನ ನಡೆಸಿದ್ದರು. ಆಂಬುಲೆನ್ಸ್ ಬಂದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಜೋನ್ಸ್ ಬದುಕುಳಿಯಲಿಲ್ಲ.

ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಡೀನ್ ಜೋನ್ಸ್ ನಿಧನಕ್ಕೆ ಕ್ರಿಕೆಟಿಗರ ಸಂತಾಪ

ಎರಡನೆಯ ಬಾರಿ ಜೀವ ಉಳಿಸಿದ್ದರು

ಎರಡನೆಯ ಬಾರಿ ಜೀವ ಉಳಿಸಿದ್ದರು

ಜೋನ್ಸ್ ಎದೆ ನೋವಿನಿಂದ ಕುಸಿದು ಬೀಳುವಾಗ ಬ್ರೆಟ್ ಅವರಿಂದ 20 ಅಡಿಗಳಷ್ಟು ದೂರದಲ್ಲಿದ್ದರು. ಜೋನ್ಸ್ ಅವರಲ್ಲಿ ನಾಡಿ ಮಿಡಿತ ಇರಲಿಲ್ಲ. ಕೂಡಲೇ ಅವರ ಬಾಯಿಗೆ ಬಾಯಿ ಇರಿಸಿ ಉಸಿರು ನೀಡಿದರು. ಇದರಿಂದ ಅವರ ನಾಡಿ ಮಿಡಿತ ಪುನಃ ಆರಂಭವಾಗಿತ್ತು. ಆಂಬುಲೆನ್ಸ್ ಬರುವ ವೇಳೆ ಜೋನ್ಸ್ ನಾಡಿ ಮಿಡಿತ ಮತ್ತೆ ನಿಂತುಹೋಯಿತು. ಆಗ ಬ್ರೆಟ್ ಲೀ ಸಿಪಿಆರ್ ನಡೆಸಿ ಎರಡನೆಯ ಬಾರಿ ಅವರ ಜೀವ ಮರುಕಳಿಸುವಂತೆ ಮಾಡಿದ್ದರು.

ಬಿಕ್ಕಿ ಬಿಕ್ಕಿ ಅತ್ತಿದ್ದ ಬ್ರೆಟ್ ಲೀ

ಬಿಕ್ಕಿ ಬಿಕ್ಕಿ ಅತ್ತಿದ್ದ ಬ್ರೆಟ್ ಲೀ

ಜೋನ್ಸ್ ಯಾವಾಗಲೂ ಬ್ರೆಟ್ ಲೀ ಜತೆಗೆ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಕ್ಕೆ ತೆರಳುತ್ತಿದ್ದರು. 'ಸೆಲೆಕ್ಟ್ ಡಗೌಟ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಆಘಾತಕಾರಿ ಸಾವಿನ ಗಂಟೆಗಳ ಬಳಿಕ ಬ್ರೆಟ್ ಲೀ ಒಬ್ಬರೇ ಟಿವಿ ಸ್ಟುಡಿಯೋಕ್ಕೆ ತೆರಳಿದ್ದರು. ಅಂದು ರಾತ್ರಿ ಬ್ರೆಟ್ ಲೀ ಬಿಕ್ಕಿ ಬಿಕ್ಕಿ ಅತ್ತಿದ್ದರು. ಡೀನ್ ಜೀವ ಉಳಿಸಲು ಬ್ರೆಟ್ ಲೀ ನಡೆಸಿದ ಪ್ರಯತ್ನಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಡೀನ್ ಪತ್ನಿ ಜೇನ್ ಜೋನ್ಸ್ ಹೇಳಿದ್ದಾರೆ.

Story first published: Saturday, September 26, 2020, 15:38 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X