ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸಿಎಸ್‌ಕೆ ವೈಫಲ್ಯಕ್ಕೆ ಕಾರಣ ಹೇಳಿದ ಬ್ರಿಯಾನ್ ಲಾರಾ

IPL 2020: Brian Lara explains why CSK failed in this season

ಪ್ರತಿ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಐಪಿಎಲ್ ಇತಿಹಾಸದ ಅತ್ಯುತ್ತಮ ತಂಡಗಳಲ್ಲಿ ಒಂದೆನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದೆ. ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವೆಂಬ ಹಣೆಪಟ್ಟಿಯ ಜೊತೆಗೆ ಅಂಕಪಟ್ಟಿಯಲ್ಲೂ ಕೊನೆಯ ಸ್ಥಾನದ ಅವಮಾನಕ್ಕೆ ಗುರಿಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಪ್ರಮಾಣದಲ್ಲಿ ವೈಫಲ್ಯವನ್ನು ಅನುಭವಿಸಲು ಕಾರಣವೇನೆಂಬುದನ್ನು ಬ್ರಿಯಾನ್ ಲಾರಾ ಹೇಳಿಕೊಂಡಿದ್ದಾರೆ. ಚೆನ್ನೈ ತಂಡ ಸತತವಾಗಿ ಮಾಡಿಕೊಂಡ ಬಂದ ಒಂದು ತಪ್ಪು ನಿರ್ಧಾರವೇ ಅದರ ಈ ಸ್ಥಿತಿಗೆ ಕಾರಣ ಎಂದು ಲಾರಾ ಬಹಿರಂಗ ಪಡಿಸಿದ್ದಾರೆ.

ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್

ಹಿರಿಯ ಆಟಗಾರರಿಗೆ ಬೆಂಬಲ

ಹಿರಿಯ ಆಟಗಾರರಿಗೆ ಬೆಂಬಲ

ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಯುವ ಆಟಗಾರರ ಬದಲಿಗೆ ಹಿರಿಯ ಆಟಗಾರರ ಬೆಂಬಲಕ್ಕೆ ನಿಂತುಕೊಂಡಿತು. ಇದುವೇ ಚೆನ್ನೈ ತಂಡದ ಇಷ್ಟು ದೊಡ್ಡ ಪ್ರಮಾಣದ ವೈಫಲ್ಯಕ್ಕೆ ಕಾರಣವಾಯಿತು ಎಂದು ವಿಶ್ಲೇಷಣೆ ಮಾಡಿದ್ದಾರೆ.

ನಂಬಲು ಅಸಾಧ್ಯವಾದ ಆವೃತ್ತಿ

ನಂಬಲು ಅಸಾಧ್ಯವಾದ ಆವೃತ್ತಿ

"ಸಿಎಸ್‌ಕೆ ತಂಡ ಸಾಕಷ್ಟು ಹಿರಿಯ ಆಟಗಾರರನ್ನು ಹೊಂದಿದೆ. ಅವರ ಲೈನ್‌ಅಪ್‌ನಲ್ಲಿ ಯುವ ಆಟಗಾರರೇ ಇರುತ್ತಿರಲಿಲ್ಲ. ವಿದೇಶಿ ಆಟಗಾರರು ಕೂಡ ಸುದೀರ್ಘ ಕಾಲದಿಂದ ತಂಡದಲ್ಲಿದ್ದಾರೆ. ಹಾಗಾಗಿ ಅವರು ಯುವಕ ಬದಲಾಗಿ ಅನುಭವಿಗಳಿಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು. ಇದೇ ಸಂಗತಿ ಮೇಲಿದ್ದವರನ್ನು ಕೆಳಕ್ಕೆ ಬರುವಂತೆ ಮಾಡಿತು. ಅವರಿಗೆ ಇದು ನಂಬಲು ಅಸಾಧ್ಯವಾದ ಆವೃತ್ತಿ" ಎಂದು ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.

ನಿರೀಕ್ಷೆ ವಿಫಲ

ನಿರೀಕ್ಷೆ ವಿಫಲ

"ಪ್ರತಿ ಬಾರಿ ಅವರು ಕಣಕ್ಕಿಳಿಯುವಾಗಲೂ ಅವರು ಇದರಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು ಎಂದು ನಿರೀಕ್ಷಿಸುತ್ತಿದ್ದೆವು. ಎರಡು ಮೂರು ಪಂದ್ಯಗಳ ಹಿಂದೆ ಗೆಲುವುಗಳನ್ನು ಕಾಣಲು ಆರಂಭಿಸಿತು. ಈ ಸಂದರ್ಭದಲ್ಲಿ ನಾಯಕ ಧೋನಿ ತಂಡದಲ್ಲಿ ಬದಲಾವಣೆಯನ್ನು ತರಲು ಸೂಕ್ತ ಸಂದರ್ಭ ಎಂದು ಬಾವಿಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ಕೆಲವೇ ಪಂದ್ಯಗಳಲ್ಲಿ ಯುವ ಆಟಗಾರರ ಜೊತೆ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದಕ್ಕೆ ಕಾದು ನೋಡಬೇಕಿದೆ" ಎಂದಿದ್ದಾರೆ ಬ್ರಿಯಾನ್ ಲಾರಾ.

Story first published: Thursday, October 29, 2020, 17:31 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X