ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ ನನ್ನ ಟೆಸ್ಟ್ ಬ್ಯಾಟ್ಸ್‌ಮನ್, ಏಕದಿನ ಬ್ಯಾಟ್ಸ್‌ಮನ್ ಹಾಗೂ ಟಿ20 ಬ್ಯಾಟ್ಸ್‌ಮನ್': ಕನ್ನಡಿಗನನ್ನು ಹೊಗಳಿದ ಲಾರಾ

IPL 2020: Brian Lara heaps praise on India cricketer KL Rahul

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಬ್ರ್ಯಾನ್ ಲಾರಾ ಭಾರತೀಯ ಕ್ರಿಕೆಟಿಗನೋರ್ವನ ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದಾರೆ. ಟೆಸ್ಟ್ ಏಕದಿನ ಹಾಗೂ ಟಿ20 ಈ ಎಲ್ಲಾ ಮಾದರಿಯಲ್ಲೂ ಆತ ಶ್ರೇಷ್ಠ ಕ್ರಿಕೆಟಿಗ ಎಂಬ ಅಭಿಪ್ರಾಯವನ್ನು ಲಾರಾ ವ್ಯಕ್ತಪಡಿಸಿದ್ದಾರೆ. ಈ ಆಟಗಾರ ಕನ್ನಡಿಗ ಬ್ಯಾಟ್ಸ್‌ಮನ್ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ.

ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿರುವ ಬ್ರ್ಯಾನ್ ಲಾರಾ ಈ ರೀತಿ ಹೊಗಳಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಬಗ್ಗೆ. ಕೆಎಲ್ ರಾಹುಲ್ ಈ ಟೂರ್ನಿಯಲ್ಲಿ 500 ರನ್ ಪೂರೈಸುವ ಮೂಲಕ ಸತತ ಮೂರು ಆವೃತ್ತಿಯಲ್ಲಿ 500+ ರನ್‌ಗಳಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದುಕೊಂಡರು.

ಐಪಿಎಲ್ 2020: ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದಿಷ್ಟು!ಐಪಿಎಲ್ 2020: ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದಿಷ್ಟು!

ಈ ಬಾರಿಯ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ರಾಹುಲ್ 525 ರನ್ ಗಳಿಸಿದ್ದಾರೆ. 75ರ ಸರಾಸರಿಯಲ್ಲಿ 135.65ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಐದು ಅರ್ಧ ಶತಕ ಹಾಗೂ 1 ಶತಕವನ್ನು ಗಳಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಆರೆಂಜ್ ಕ್ಯಾಪ್ ಧರಿಸಿಕೊಂಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಲಾರಾ ಕೆಎಲ್ ರಾಹುಲ್ ಕುರಿತು "ಆತ ನನ್ನ ಟೆಸ್ಟ್ ಬ್ಯಾಟ್ಸ್‌ಮನ್, ಆತ ನನ್ನ 50 ಓವರ್‌ಗಳ ಬ್ಯಾಟ್ಸ್‌ಮನ್, ಆತ ನನ್ನ ಟಿ20 ಬ್ಯಾಟ್ಸ್‌ಮನ್' ಎಂದು ಹೇಳಿದ್ದಾರೆ. ನಾಯಕನಾಗಿ ಆತ ಅದ್ಭುತವಾಗಿ ಮುನ್ನಡೆಸುತ್ತಿದ್ದಾನೆ. ಆತ ಬ್ಯಾಟ್ ಮಾಡುವ ರೀತಿ ನನಗಿಷ್ಟ, ಆತ ತಂಡವನ್ನು ಜೊತೆಯಾಗಿ ಮುನ್ನಡೆಸುವ ರೀತಿ ನನಗಿಷ್ಟ. ಹೌದು ಆರಂಭದಲ್ಲಿ ಆತ ಪಂದ್ಯವನ್ನು ಫಿನಿಷ್ ಮಾಡಲು ವಿಫಲನಾಗಿರುತ್ತಿದ್ದ. ಆದರೆ ಈಗ ಅದರಲ್ಲೂ ಸುಧಾರಣೆ ಕಾಣುತ್ತಿದೆ" ಎಂದು ಬ್ರ್ಯಾನ್ ಲಾರಾ ಹೇಳಿದ್ದಾರೆ.

ಕ್ರಿಕೆಟ್ ಮರೆತಂತೆ ಆಡುವ ಜಾಧವ್ ತಂಡಕ್ಕೆ ಆಯ್ಕೆ ಮಾಡಿದ್ದೇಕೆ?ಕ್ರಿಕೆಟ್ ಮರೆತಂತೆ ಆಡುವ ಜಾಧವ್ ತಂಡಕ್ಕೆ ಆಯ್ಕೆ ಮಾಡಿದ್ದೇಕೆ?

ಮುಂಬೈ ಇಂಡಿಯನ್ಸ್ ವಿರುದ್ದದ ರೋಚಕ ಹಣಾಹಣಿಯ ಬಳಿಕ ಬ್ರ್ಯಾನ್ ಲಾರಾ ಈ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಪಂದ್ಯದಲ್ಲಿ ರಾಹುಲ್ 51 ಎಸೆತಗಳಲ್ಲಿ 77 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು.

Story first published: Wednesday, October 21, 2020, 10:28 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X