ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್‌ಗೆ ಅತ್ಯಮೂಲ್ಯ ಸಲಹೆ ನೀಡಿದ ದಿಗ್ಗಜ ಬ್ರಿಯಾನ್ ಲಾರಾ

ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್, ಇನ್ನಿಂಗ್ಸ್ ಆರಂಭಿಸುವುದರ ಜತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಹ ನಿಭಾಯಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಾತ್ರ ಅವರು ನಿಕೊಲಸ್ ಪೂರನ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿದ್ದರು.

ರಾಷ್ಟ್ರೀಯ ತಂಡದಲ್ಲಿ ಎಂಎಸ್ ಧೋನಿ ಅವರಿಂದ ತೆರವಾದ ವಿಕೆಟ್ ಕೀಪಿಂಗ್ ಜಾಗಕ್ಕೆ ಕೆಎಲ್ ರಾಹುಲ್ ಅವರೇ ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ರಾಹುಲ್ ಕೀಪಿಂಗ್ ಹೊಣೆ ಹೊತ್ತುಕೊಂಡರೆ ಮತ್ತೊಬ್ಬ ಆಟಗಾರನನ್ನು ಆಡಿಸಲು ಅವಕಾಶವಾಗುತ್ತದೆ. ಅಲ್ಲದೆ, ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸ್ವತಃ ರಾಹುಲ್ ಅವರಿಗೂ ವಿಕೆಟ್ ಕೀಪಿಂಗ್ ಅನಿವಾರ್ಯವಾಗುತ್ತಿದೆ. ಧೋನಿಯಷ್ಟು ನಿಖರತೆ ಮತ್ತು ಚುರುಕುತನ ಇಲ್ಲದಿದ್ದರೂ ಕೆಎಲ್ ರಾಹುಲ್ ತಂಡಕ್ಕೆ ಅಗತ್ಯವಾದ ಕೆಲಸವನ್ನು ರಾಹುಲ್ ನಿಭಾಯಿಸಬಲ್ಲರು ಎಂಬ ವಿಶ್ವಾಸ ಮೂಡಿದೆ.

12 ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ವಿವರ12 ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ವಿವರ

ಆದರೆ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಅವರು ತಮ್ಮ ಬ್ಯಾಟಿಂಗ್ ಬಗ್ಗೆಯೇ ಗಮನಹರಿಸಬೇಕು ಎಂದು ಕ್ರಿಕೆಟ್ ದಿಗ್ಗಜ, ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಹೇಳಿದ್ದಾರೆ. ಮುಂದೆ ಓದಿ.

ವಿಕೆಟ್ ಕೀಪಿಂಗ್ ಯೋಚನೆ ಬೇಡ

ವಿಕೆಟ್ ಕೀಪಿಂಗ್ ಯೋಚನೆ ಬೇಡ

'ನಾನು ಮೊದಲನೆಯದಾಗಿ ಹೇಳುವುದಾದರೆ ಭಾರತೀಯ ತಂಡದ ವಿಚಾರಕ್ಕೆ ಬಂದಾಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ವಿಚಾರದಲ್ಲಿ ತೀರಾ ಯೋಚನೆ ಮಾಡಬೇಕಾದ ಅಗತ್ಯವೇ ಇಲ್ಲ' ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ.

ಬ್ಯಾಟಿಂಗ್‌ನತ್ತ ಗಮನ ಹರಿಸಲಿ

ಬ್ಯಾಟಿಂಗ್‌ನತ್ತ ಗಮನ ಹರಿಸಲಿ

'ಕೆಎಲ್ ರಾಹುಲ್ ಅದ್ಭುತ ಬ್ಯಾಟ್ಸ್‌ಮನ್. ಅವರು ಬ್ಯಾಟಿಂಗ್ ಬಗ್ಗೆಯೇ ಹೆಚ್ಚು ಗಮನ ಹರಿಸಬೇಕು. ತಂಡ ಸ್ಕೋರ್ ಬೋರ್ಡ್‌ನಲ್ಲಿ ಹೆಚ್ಚು ರನ್ ಪೇರಿಸುವುದಕ್ಕೆ ಆದ್ಯತೆ ನೀಡಬೇಕು' ಎಂದು ರಾಹುಲ್ ಬ್ಯಾಟಿಂಗ್ ವೈಖರಿಯನ್ನು ಶ್ಲಾಘಿಸಿರುವ ಲಾರಾ, ಅವರು ಅದರತ್ತಲೇ ಗಮನ ನೀಡಿದರೆ ಒಳಿತು ಎಂದು ಸಲಹೆ ನೀಡಿದ್ದಾರೆ.

'ನಿಮಗೆ ಶಾರ್ಜಾವೊಂದೇ ಗತಿ': ಸತತ ಸೋಲಿನ ಬಳಿಕ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್

ಪ್ರೌಢಿಮೆ ಬೆಳೆಸಿಕೊಂಡ ಪಂತ್

ಪ್ರೌಢಿಮೆ ಬೆಳೆಸಿಕೊಂಡ ಪಂತ್

ಜತೆಗೆ ರಿಷಬ್ ಪಂತ್ ಅವರಲ್ಲಿ ಹೆಚ್ಚು ಪ್ರೌಢಿಮೆ ಕಂಡುಬರುತ್ತಿದೆ ಎಂದು ಲಾರಾ ಮೆಚ್ಚುಗೆ ಮಾತನ್ನಾಡಿದ್ದಾರೆ. 'ಒಂದು ವರ್ಷದ ಹಿಂದೆಯಾಗಿದ್ದರೆ ರಿಷಬ್ ಪಂತ್ ಬೇಡ ಎನ್ನುತ್ತಿದ್ದೆ. ಬ್ಯಾಟ್ಸ್‌ಮನ್ ಆಗಿ ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಿದ್ದಾರೆ' ಎಂದು ಲಾರಾ ಹೇಳಿದ್ದಾರೆ.

ನಂಬರ್ ಒನ್ ಆಗುತ್ತಾರೆ

ನಂಬರ್ ಒನ್ ಆಗುತ್ತಾರೆ

'ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಹೇಗೆ ಆಡುತ್ತಿದ್ದಾರೆ ನೋಡಿ. ಅವರಿಗೆ ಆ ಜವಾಬ್ದಾರಿ ಬೇಕು ಎನಿಸುತ್ತಿದೆ. ರನ್ ಬಾರಿಸಲು, ಇನ್ನಿಂಗ್ಸ್ ಕಟ್ಟಲು ಮತ್ತು ದೊಡ್ಡ ರನ್‌ಗಳನ್ನು ಗಳಿಸಲು ಅವರು ಜವಾಬ್ದಾರಿ ಬಯಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಅವರು ನಂಬರ್ 1 ಆಗಲೇಬೇಕು' ಎಂದು ಹೊಗಳಿದ್ದಾರೆ.

'ಕ್ರೀಡಾ ಸ್ಫೂರ್ತಿ' ಮರೆತ ಧೋನಿ ಫೋಟೊ ಹಾಕಿ ರಿಕಿ ಪಾಂಟಿಂಗ್ ಕಾಲೆಳೆದ ಐಸ್‌ಲ್ಯಾಂಡ್

ತಾಂತ್ರಿಕತೆಯಲ್ಲಿ ಸ್ಯಾಮ್ಸನ್ ಹಿಂದೆ

ತಾಂತ್ರಿಕತೆಯಲ್ಲಿ ಸ್ಯಾಮ್ಸನ್ ಹಿಂದೆ

'ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೀಪಿಂಗ್ ಮಾಡುತ್ತಿಲ್ಲ. ಆದರೆ ಆತ ಕೀಪಿಂಗ್ ಮಾಡಬಲ್ಲ ಎನ್ನುವುದು ನನಗೆ ಗೊತ್ತಿದೆ. ಅದು ಆತನ ಮುಖ್ಯ ಕೆಲಸಗಳಲ್ಲಿ ಒಂದಲ್ಲವೇ? ಆತ ಬಹಳ ಕ್ಲಾಸಿ ಪ್ಲೇಯರ್. ಶಾರ್ಜಾದಲ್ಲಿ ಇದುವರೆಗೂ ಉತ್ತಮ ಆಟವಾಡಿದ್ದಾರೆ. ಆದರೆ ಬೌಲಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ ಉತ್ತಮ ಬೌಲರ್‌ಗಳನ್ನು ಎದುರಿಸುವ ತಾಂತ್ರಿಕತೆಯಲ್ಲಿ ಅವರು ಸ್ವಲ್ಪ ಹಿಂದಿದ್ದಾರೆ ಎನಿಸುತ್ತದೆ' ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, October 7, 2020, 17:13 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X