ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ 'ಸ್ಟಾರ್ ಇಂಡಿಯಾ' ಅಸಮಾದಾನ

Ipl 2020: Broadcaster Unhappy About Tentative Schedule

ಅಧಿಕೃತವಾಗಿ ಘೋಷಣೆಯಾಗದಿದ್ದರೂ ಐಪಿಎಲ್ ಆಯೋಜನೆಗೆ ಬಿಸಿಸಿಐ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ಐಪಿಎಲ್‌ನ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಂತೆ ಸೆಪ್ಟೆಂಬರ್ 26 ರಿಂದ ನವೆಂಬರ್ 8ರ ವರೆಗೆ ಐಪಿಎಲ್ ನಡೆಸುವ ತೀರ್ಮಾನವಾಗಿದೆ. ಆದರೆ ಇದಕ್ಕೆ ಟೂರ್ನಿಯ ಪ್ರಸಾರಕರು ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಟೂರ್ನಿಯ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಹೊಂದಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮುಕ್ತಾಯದ ಒಂದು ವಾರದ ನಂತರ ದೀಪಾವಳಿ ಬರಲಿದ್ದು ಈ ಸಂದರ್ಭವನ್ನು ಬಳಸಿಕೊಳ್ಳಲು ಸ್ಟಾರ್ ಇಂಡಿಯಾ ಬಯಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಬಿಸಿಸಿಐ ಜನರಲ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ ಸಬಾ ಕರೀಮ್ಬಿಸಿಸಿಐ ಜನರಲ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ ಸಬಾ ಕರೀಮ್

ನವೆಂಬರ್ 8ನೇ ತಾರೀಕಿನಂದು ಭಾನುವಾರವಾಗಿದ್ದು ಐಪಿಎಲ್‌ನ ಫೈನಲ್ ಪಂದ್ಯವನ್ನು ನಡೆಸುವ ತೀರ್ಮಾನವಾಗಿದೆ. ಆದರೆ ಅದರ ಮುಂದಿನ ಶನಿವಾರ ಅಂದರೆ ನವೆಂಬರ್ 14ರಂದು ದೀಪಾವಳಿಯಿದೆ. ಈ ಸಂದರ್ಭವನ್ನು ಬಳಸಿಕೊಂಡರೆ ಮತ್ತಷ್ಟು ಲಾಭದಾಯಕವನ್ನಾಗಿ ಮಾಡಬಹುದು ಎಂಬುದು ಸ್ಟಾರ್ ಇಂಡಿಯಾ ಲೆಕ್ಕಾಚಾರವಾಗಿದೆ.

ಈ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ಒಂದು ವಾರಗಳ ಕಾಲ ಮುಂದೂಡಲು ಸ್ಟಾರ್ ಇಂಡಿಯಾ ಬಿಸಿಸಿಐ ಮೇಲೆ ಒತ್ತಡವನ್ನು ಹೇರುತ್ತಿದೆ. ದೀಪಾವಳಿ ವಾರವನ್ನು ಬಳಸಿಕೊಂಡರೆ ವೀಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಲಬ್ಯವಾಗುತ್ತದೆ. ಹೀಗಾಗಿ ಆರ್ಥಿಕವಾಗಿ ಮತ್ತಷ್ಟು ಲಾಭದಾಯಕವಾಗಲಿದೆ ಎಂಬುದು ಲೆಕ್ಕಾಚಾರ.

ಬಿಸಿಸಿಐನ ವೇಳಾಪಟ್ಟಿಯನ್ನು ವಿರೋಧಿಸುವ ಸ್ಟಾರ್ ಇಂಡಿಯಾ ಮಧ್ಯಾಹ್ನದ ಪಂದ್ಯಗಳ ಮೇಲೆ ಇದು ಸಾಕಷ್ಟು ಪರಿಣಾಮವನ್ನು ಬೀರಲಿದೆ. ಗೋಚರತೆ ಹಾಗೂ ರೇಟಿಂಗ್‌ನ ಮೆಲೂ ಈ ವೇಳಾಪಟ್ಟಿ ಪರಿಣಾಮ ಬೀರಲಿದೆ ಎಂದು ವಾದಿಸುತ್ತಿದೆ.

Story first published: Monday, July 20, 2020, 23:29 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X