ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್vs ಸಿಎಸ್‌ಕೆ: ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ ಈ ಆಟಗಾರರು

IPL 2020: Chahar, Jadeja, Rana and Tripathi chase these milestones

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಕೆಆರ್ ವಿರುದ್ದದ ಪಂದ್ಯ ಗುರುವಾರ ಸಂಜೆ ನಡೆಯಲಿದೆ. ಈ ಪಂದ್ಯ ಚೆನ್ನೈ ಪಾಲಿಗೆ ಯಾವುದೇ ರೀತಿಯಲ್ಲೂ ಮಹತ್ವವನ್ನು ಪಡೆದುಕೊಂಡಿಲ್ಲ. ಆದರೆ ಕೆಕೆಆರ್ ಪಾಲಿಗೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಕೆಕೆಆರ್ ಚೆನ್ನೈ ತಂಡವನ್ನು ಮಣಿಸಿ ಪ್ಲೇ ಆಫ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿಸಿಕೊಳ್ಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

ಇಂದಿನ ಪಂದ್ಯದಲ್ಲಿ ಕೆಲ ದಾಖಲೆಗಳು ಮೈಲಿಗಲ್ಲುಗಳು ಸ್ಥಾಪನೆಯಾಗುವ ನಿರೀಕ್ಷೆಯಿದೆ. ಅಂತಾ ಕೆಲ ಪ್ರಮುಖ ಆಟಗಾರರು ಹಾಗೂ ಅವರ ನಿರೀಕ್ಷಿತ ದಾಖಲೆಗಳ ಪಟ್ಟಿ ಇಲ್ಲಿದೆ.

ಐಪಿಎಲ್ 2020: ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರಾ ಧೋನಿ?ಐಪಿಎಲ್ 2020: ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರಾ ಧೋನಿ?

ನಿತೀಶ್ ರಾಣಾ: ಕೊಲ್ಕತಾ ತಂಡದ ಆಟಗಾರ ನಿತೀಶ್ ರಾಣಾ ಇ ಬಾರಿಯ ಟೂರ್ನಿಯಲ್ಲಿ 12 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 265 ರನ್ ಗಳಿಸಿದ್ದಾರೆ. ಈ ಎಡಗೈ ಆಟಗಾರ ಈವರೆಗೆ ಐಪಿಎಲ್‌ನಲ್ಲಿ 1350 ರನ್ ಗಳಿಸಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ 87 ರನ್ ಗಳಿಸಲು ಸಫಲವಾದರೆ ಕೆಕೆಆರ್ ಪರವಾಗಿ 1000 ರನ್ ಗಳಿಸಿದ ಆಟಗಾರನಾಗಲಿದ್ದಾರೆ.

ರವೀಂದ್ರ ಜಡೇಜಾ: ರವೀಂದ್ರ ಜಡೇಜಾ ಐಪಿಎಲ್ ಟೂರ್ನಿಯ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ 1000 ರನ್‌ಗಳ ಮೈಲುಗಲ್ಲು ದಾಟಿದ ಜಡೇಜಾ ಇಂದಿನ ಪಂದ್ಯದಲ್ಲಿ ಕ್ಯಾಚ್‌ನಲ್ಲಿ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಇನ್ನು ಒಂದು ಕ್ಯಾಚ್ ಪಡೆಯಲು ಸಾಧ್ಯವಾದರೆ ಚೆನ್ನೈ ತಮಡದ ಪರವಾಗಿ ಐಪಿಎಲ್‌ನಲ್ಲಿ ಜಡೇಜಾ ಅವರ 50ನೇ ಕ್ಯಾಚ್ ಆಗಿರಲಿದೆ.

ದೀಪಕ್ ಚಾಹರ್ ಹಾಗೂ ಶಾರ್ದೂಲ್ ಠಾಕೂರ್: ಇದು ಒಂದೇ ಪಂದ್ಯದಲ್ಲಿ ಗಳಿಸುವುದು ಅಸಾಧ್ಯವಾದ ಮೈಲಿಗಲ್ಲಾಗಿದೆ. ಚಾಹರ್ ಹಾಗೂ ಠಾಕೈರ್ ಇಬ್ಬರಿಗೂ ಐಪಿಎಲ್‌ನಲ್ಲಿ 50 ವಿಕೆಟ್‌ಗಳ ದಾಖಲೆಯನ್ನು ತಲುಪಲು ಇನ್ನು ತಲಾ 5 ವಿಕೆಟ್‌ಗಳ ಅವಶ್ಯಕತೆಯಿದೆ.

ಐಪಿಎಲ್ 2020: ಚೆನ್ನೈ vs ಕೊಲ್ಕತಾ, ಹೆಡ್ ಟು ಹೆಡ್ ಅಂಕಿಅಂಶಗಳುಐಪಿಎಲ್ 2020: ಚೆನ್ನೈ vs ಕೊಲ್ಕತಾ, ಹೆಡ್ ಟು ಹೆಡ್ ಅಂಕಿಅಂಶಗಳು

ರಾಹುಲ್ ತ್ರಿಪಾಠಿ: ಕೆಕೆಆರ್ ತಂಡದ ವಿಶೇಷ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್‌ನಲ್ಲಿ 9 ಪಂದ್ಯಗಳಲ್ಲಿ ಕಣಕ್ಕಿಳಿದು 188 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 1000ರನ್‌ಗಳ ಸರದಾರನಾಗಲು ತ್ರಿಪಾಠಿಗೆ 53 ರನ್‌ಗಳ ಅವಶ್ಯಕತೆಯಿದೆ. ಜೊತೆಗೆ 9 ಬೌಂಡರಿ ಸಿಡಿಸಲು ಸಾದ್ಯವಾದರೆ 100 ಐಪಿಎಲ್ ಬೌಂಡರಿ ಸಿಡಿಸಿದ ಆಟಗಾರನಾಗಲಿದ್ದಾರೆ.

Story first published: Thursday, October 29, 2020, 18:04 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X