ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್

IPL 2020: Chennai Super Kings officially failed to enter playoff

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ರಾಜಸ್ಥಾನ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪ್ರವೇಶದ ಸ್ಪರ್ಧೆಯಿಂದ ಅಧಿಕೃತವಾಗಿ ಹೊರದಬ್ಬಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಬಾನುವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು. ಈ ಮೂಲಕ ಸತತ ಸೋಲಿನಿಂದ ಕಂಗೆಟ್ಟಿದ್ದ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳುವ ಭರವಸೆ ನೀಡಿತ್ತು. ಟೂರ್ನಿಯಿಂದ ಹೊರ ಬೀಳುವುದು ಖಚಿತ ಎಂಬಂತಿದ್ದರೂ ಅಧಿಕೃತವಾಗಿ ಹೊರಬಿದ್ದಿರಲಿಲ್ಲ. ಆದರೆ ರಾಜಸ್ಥಾನ್ ಮುಂಬೈ ವಿರುದ್ಧ ಗೆಲ್ಲುವ ಮೂಲಕ ಚೆನ್ನೈಗಿದ್ದ ಅತಿ ಸಣ್ಣ ಅವಕಾಶವನ್ನೂ ಮುಚ್ಚಿಬಿಟ್ಟಿತ್ತು.

ಐಪಿಎಲ್ 2020: ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳದ ಮಾಹಿತಿ ನೀಡಿದ ಬಿಸಿಸಿಐಐಪಿಎಲ್ 2020: ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳದ ಮಾಹಿತಿ ನೀಡಿದ ಬಿಸಿಸಿಐ

ಮೊದಲ ಬಾರಿಗೆ ಪ್ಲೇಆಫ್‌ಗೆ ವಿಫಲ

ಮೊದಲ ಬಾರಿಗೆ ಪ್ಲೇಆಫ್‌ಗೆ ವಿಫಲ

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೆ ಪ್ರವೇಶಿಸದೆ ಹೊರನಡೆಯುತ್ತಿದೆ. ಈ ಹಿಂದಿನ 12 ಆವೃತ್ತಿಗಳಲ್ಲಿ 10 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದು ಈ ಎಲ್ಲಾ ಆವೃತ್ತಿಯಲ್ಲೂ ಕನಿಷ್ಠ ಪ್ಲೇ ಆಫ್ ಹಂತವನ್ನು ಪ್ರವೇಶ ಮಾಡಿದೆ. ಎರಡು ಆವೃತ್ತಿಯಲ್ಲಿ ನಿಷೇಧಗೊಂಡು ಸಿಎಸ್‌ಕೆ ಆಡಲು ಇಳಿದಿರಲಿಲ್ಲ.

ನಾಯಕನಾಗಿ ಧೋನಿಗೆ ಎರಡನೇ ಅನುಭವ

ನಾಯಕನಾಗಿ ಧೋನಿಗೆ ಎರಡನೇ ಅನುಭವ

ಇನ್ನು ನಾಯಕನಾಗಿ ಧೋನಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ಲೇ ಆಫ್ ಹಂತಕ್ಕೇರದೆ ಹೊರ ನಡೆಯುತ್ತಿದ್ದಾರೆ. 2016ರಲ್ಲಿ ಧೋನಿ ಮುನ್ನಡೆಸುತ್ತಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಈಗ ಚೆನ್ನೈ ತಂಡ ಮೊದಲ ಬಾರಿಗೆ ಈ ಪ್ರಯತ್ನದಲ್ಲಿ ವಿಫಲವಾಗಿದೆ.

ಕೊನೆಯ ಸ್ಥಾನದ ಅವಮಾನದಿಂದ ಪಾರಾಗುತ್ತಾ ಸಿಎಸ್‌ಕೆ

ಕೊನೆಯ ಸ್ಥಾನದ ಅವಮಾನದಿಂದ ಪಾರಾಗುತ್ತಾ ಸಿಎಸ್‌ಕೆ

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳನ್ನಷ್ಟೇ ಉಳಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಮತ್ತೆ ಕೊನೆಯ ಸ್ಥಾನವನ್ನು ಹೊಂದಿರುವ ಚೆನ್ನೈ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕೊನೆಯ ಸ್ಥಾನದ ಅವಮಾನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನಷ್ಟೇ ಮಾಡಲು ಸಾಧ್ಯವಿದೆ.

Story first published: Monday, October 26, 2020, 0:12 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X