ಐಪಿಎಲ್ 2020: ಡ್ವೇಯ್ನ್ ಬ್ರಾವೋಗೆ ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಚೆನ್ನೈ ಸಿಇಒ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್‌ಅನ್ನು ಡ್ವೇಯ್ನ್ ಬ್ರಾವೋ ಎಸೆಯಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಧೋನಿ ಚೆಂಡನ್ನು ರವೀಂದ್ರ ಜಡೇಜಾ ಕೈಗಿತ್ತಾಗ ಏನೋ ಲೆಕ್ಕಾಚಾರದಲ್ಲೇ ಧೋನಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಅಂದುಕೊಂಡರು. ಆದರೆ ಆ ಓವರ್‌ನಲ್ಲಿ ಅಕ್ಸರ್ ಪಟೇಲ್ ಸಿಕ್ಸರ್‌ಗಳ ಸುರಿಮಳೆ ಸುರಿಸಿ ಡೆಲ್ಲಿ ಗೆಲುವನ್ನು ಸಾರಿದರು.

ಆದರೆ ಪಂದ್ಯದ ಮುಕ್ತಾಯದ ಬಳಿಕ ಅಂತಿಮ ಓವರ್‌ಅನ್ನು ಜಡೇಜಾಗೆ ನೀಡಲು ಕಾರಣ ಬ್ರಾವೋ ಗಾಯಗೊಂಡಿದ್ದರು ಎಂದು ಧೋನಿ ತಿಳಿಸಿದರು. ಬಳಿಕ ಈ ಬಗ್ಗೆ ಚೆನ್ನೈ ಕೋಚ್ ಸ್ಟೀಫನ್ ಪ್ಲೆಮಿಂಗ್ ಕೂಡ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು ಬ್ರಾವೋ ಕೆಲ ದಿನಗಳ ಅಥವಾ ಕೆಲ ವಾರಗಳ ಕಾಲ ವಿಶ್ರಾಂತಿ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಕೊನೆಯ ಓವರ್ ಜಡೇಜಾ ಎಸೆದಿದ್ದು ಹೇಗೆ ಅನುಕೂಲವಾಯಿತು ಎಂದು ವಿವರಿಸಿದ ಧವನ್

ಈಗ ಚೆನ್ನೈ ತಂಡದ ಸಿಇಒ ಕೂಡ ಬ್ರಾವೋ ಗಾಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂದು ಸಂಜೆಯ ಒಳಗೆ ನಾವು ಬ್ರಾವೋ ಗಾಯದ ಸಂಪೂರ್ಣ ವರದಿ ನಮ್ಮ ಕೈ ಸೇರಲಿದೆ. ಆದರೆ ಈವರೆಗಿನ ಮಾಹಿತಿಯ ಪ್ರಕಾರ ಬ್ರಾವೋ ಮುಂದಿನ ಕೆಲ ಪಂದ್ಯಗಳು ಅಥವಾ ಕೆಲ ವಾರಗಳ ವರೆಗೆ ಅಲಭ್ಯರಾಗಲಿದ್ದಾರೆ ಎಂದು ಚೆನ್ನೈ ಸಿಇಒ ಕೆ ವಿಶ್ವನಾಥನ್ ತಿಳಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಚೆನ್ನೈ ಸಿಇಒ ಅವರಿಗೆ ಬ್ರಾವೋಗೆ ಬದಲಿ ಆಟಗಾರನ ಸೇರ್ಪಡೆಯ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಕೆ ವಿಶ್ವನಾಥನ್ ಅವರು ನೇರವಾಗಿ ಉತ್ತರಿಸುತ್ತಾ "ಈ ಹಂತದಲ್ಲಿ ಬದಲಿ ಆಟಗಾರ ಉತ್ತಮ ಆಯ್ಕೆ ಎಂದು ನಮಗೆ ಅನಿಸುತ್ತಿಲ್ಲ. ಯಾಕೆಂದರೆ ಹೊಸ ಆಟಗಾರ ತಂಡವನ್ನು ಕೂಡಿಕೊಳ್ಳಬೇಕಾದರೆ ಕ್ವಾರಂಟೈನ್ ಅವಧಿಯನ್ನು ಪೂರೈಸಿಕೊಳ್ಳಬೇಕು. ಹಾಗಾಗಿ ಬ್ರಾವೋ ಟೂರ್ನಿಯಿಂದಲೇ ಹೊರಗುಳಿಯಬೇಕಾದ ಸಂದರ್ಭ ಬಂದರೂ ಬದಲಿ ಆಟಗಾರನ ಸೇರ್ಪಡೆ ಅಸಂಭವ" ಎಂದು ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ಕಾಡಿದ ಪಂತ್, ಸ್ಟೋಯ್ನಿಸ್‌ಗೆ ಪಾಂಟಿಂಗ್ ತಮಾಷೆಯ ಪ್ರತಿಕ್ರಿಯೆ

ಬ್ರಾವೋ ಬಲ ತೊಡೆಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಇಳಿಯದಷ್ಟು ಗಂಭೀರವಾಗಿತ್ತು. ಅಂತಿಮ ಓವರ್ ಎಸೆಯಲು ಸಾಧ್ಯವಾಗದ ಬೇಸರ ಬ್ರಾವೋ ಅವರನ್ನೂ ಕಾಡುತ್ತಿದೆ ಎಂದು ಚೆನ್ನೈ ಸಿಇಒ ಕೆ ವಿಶ್ವನಾಥನ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, October 18, 2020, 19:42 [IST]
Other articles published on Oct 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X