ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ 4 ಪಂದ್ಯಗಳಲ್ಲೂ ಸಿಎಸ್‌ಕೆ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ: ವಾಟ್ಸನ್

IPL 2020: Chennai Super Kings will be pushing the limits at how good we can be in next 4 games

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನವನ್ನು ನೀಡುವ ಮೂಲಕ ಆಘಾತವನ್ನು ಅನುಭವಿಸಿದೆ. ಸಾಕಷ್ಟು ಜನರು ತಂಡ ಈಗಾಗಲೇ ಹೊರಬಿದ್ದಿದೆ ಎಂಬಂತಾ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಂಡದ ಆಟಗಾರರು ಕೂಡ ಮುಂದಿನ ಹಾದಿ ಕಠಿಣವಿದೆ ಎಂದೇ ಭಾವಿಸುತ್ತಾರೆ. ಆದರೆ ತಮ್ಮ ಸಾಮರ್ಥ್ಯದ ಅತ್ಯುನ್ನತ ಪ್ರದರ್ಶನವನ್ನು ನೀಡಿದರೆ ಇನ್ನೂ ಟೂರ್ನಿಯಲ್ಲಿ ಉಳಿದುಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಶೇನ್ ವಾಟ್ಸನ್ ಪ್ರತಿಕ್ರಿಯಿಸಿ "ಮುಂದಿನ ನಾಲ್ಕು ಪಂದ್ಯಗಳಲ್ಲಿ ನಾವು ನಂಬಿಕೆಗೆ ಮೀರಿದ ಪ್ರದರ್ಶನ ನೀಡಿದರೆ ಚಿತ್ರಣವನ್ನೇ ಬದಲಿಸಲು ಸಾಧ್ಯವಿದೆ. ಈ ಮೂಲಕ ಸಾಕಷ್ಟು ಸಂಗತಿಗಳು ನಮ್ಮ ಪರವಾಗಿ ಬರಲು ಸಾಧ್ಯವಿದೆ" ಎಂದು ಶೇನ್ ವಾಟ್ಸನ್ ಹೇಳಿಕೊಂಡಿದ್ದಾರೆ.

ಈ ಬೌಲರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆವು: ಮನೀಶ್ ಪಾಂಡೆಈ ಬೌಲರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆವು: ಮನೀಶ್ ಪಾಂಡೆ

"ಆದರೆ ಒಂದು ಮಾತನ್ನಂತು ನಾನು ಹೇಳಬಲ್ಲೆ, ನಮ್ಮಿಂದ ಸಾಧ್ಯವಿರುವ ಗರಿಷ್ಠ ಶಕ್ತಿಯನ್ನು ಬಳಸಿಕೊಂಡು ನಾವು ಮುನ್ನಡೆಯಲು ಪ್ರಯತ್ನವನ್ನು ನಡೆಸಲಿದ್ದೇವೆ" ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ತಂಡದ ಪರವಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮುಂಬೈ ವಿರುದ್ದದ ಪಂದ್ಯಕ್ಕೂ ಮುನ್ನ ಅವರು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನಮಗೆ ಚೆನ್ನಾಗಿ ತಿಳಿದಿದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಂದ ನಾವು ಬೇಷರತ್ತಾದ ಪ್ರೀತಿ ಹಾಗೂ ಬೆಂಬಲವನ್ನು ಪಡೆದಿದ್ದೇವೆ. ಈ ಪ್ರೀತಿ ಬೆಂಬಲವನ್ನು ವಾಪಾಸ್ ನೀಡಲು ನಾವು ನಮ್ಮ ಗರಿಷ್ಠ ಪ್ರಯತ್ನವನ್ನು ನಡೆಸಲಿದ್ದೇವೆ" ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ.

ಇದೊಂದು ಪರಿಪೂರ್ಣ ಪಂದ್ಯವಾಗಿತ್ತು: ಗೆಲುವಿನ ಬಳಿಕ ವಾರ್ನರ್ ಹೇಳಿಕೆಇದೊಂದು ಪರಿಪೂರ್ಣ ಪಂದ್ಯವಾಗಿತ್ತು: ಗೆಲುವಿನ ಬಳಿಕ ವಾರ್ನರ್ ಹೇಳಿಕೆ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತವನ್ನು ತಲುಪಿದ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದು ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Story first published: Friday, October 23, 2020, 19:33 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X