ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದ್ದು ತಂಡದ ಗತಿಯನ್ನೇ ಬದಲಿಸಿಬಿಟ್ಟಿತು: ಗ್ರೇಮ್ ಸ್ವಾನ್

IPL 2020: Chris Gayles Inclusion Has Completely Changed kings XI punjab says Graeme Swann

ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬದಲಾವಣೆಗೆ ಕಾರಣವಾಗಿರುವ ಸಂಗತಿಯನ್ನು ಹೇಳಿದ್ದಾರೆ. ಟೂರ್ನಿಯ ಮೊದಲಾರ್ಧದಲ್ಲಿ ಕೇವಲ ಒಂದು ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಂಜಾಬ್ ದ್ವಿತೀಯಾರ್ಧದಲ್ಲಿ ಗೆಲುವಿನ ಮೇಲೆ ಗೆಲುವನ್ನು ಸಾಧಿಸುತ್ತಾ ಮುನ್ನಡೆದಿದ್ದು ಸದ್ಯ ನಾಲ್ಕನೇ ಸ್ಥಾನದಲ್ಲಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಲ್ಲಿ ಈ ಪ್ರಮಾಣದಲ್ಲಿ ತಿರುಗಿ ಬೀಳಲು ಕ್ರಿಸ್ ಗೇಲ್ ಆಡುವ ಬಳಗದಲ್ಲಿ ಸೇರಿಕೊಂಡಿದ್ದೇ ಕಾರಣ ಎಂದು ಗ್ರೇಮ್ ಸ್ವಾನ್ ಹೇಳಿಕೊಂಡಿದ್ದಾರೆ. ಕ್ರಿಸ್ ಗೇಲ್ ಅವರ ಸೇರ್ಪಡೆ ಪಂಜಾಬ್ ತಂಡದ ಗತಿಯನ್ನೇ ಬದಲಿಸಿ ಬಿಟ್ಟಿತು ಎಂದು ಗ್ರೇಮ್ ಸ್ವಾನ್ ಹೇಳಿಕೊಂಡಿದ್ದಾರೆ.

ಔಟ್ ಆದ ಬಳಿಕ ವರುಣ್ ಜೊತೆ ಮಾತನಾಡಿದ ಧೋನಿ: ವಿಡಿಯೋಔಟ್ ಆದ ಬಳಿಕ ವರುಣ್ ಜೊತೆ ಮಾತನಾಡಿದ ಧೋನಿ: ವಿಡಿಯೋ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖಂಡಿತವಾಗಿಯೂ ಬಲಿಷ್ಠವಾದ ತಂಡ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ರಿಸ್ ಗೇಲ್ ತಂಡದೊಳಗೆ ಸೇರಿಕೊಂಡ ಬಳಿಕ ತಂಡದ ಚಿತ್ರಣ ಇನ್ನಷ್ಟು ಬದಲಾಗಿ ಬಿಟ್ಟಿತು ಎಂದು ಸ್ವಾನ್ ಸ್ಟಾರ್ ಸ್ಪೋಟ್ಸ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

ರವೀಂದ್ರ ಜಡೇಜಾ 'ಅನ್‌ಫಿಟ್' ಎಂದು ಮತ್ತೆ ಟ್ರೋಲ್ ಆದ ಸಂಜಯ್ ಮಂಜ್ರೇಕರ್ರವೀಂದ್ರ ಜಡೇಜಾ 'ಅನ್‌ಫಿಟ್' ಎಂದು ಮತ್ತೆ ಟ್ರೋಲ್ ಆದ ಸಂಜಯ್ ಮಂಜ್ರೇಕರ್

ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಬಗ್ಗೆ ಪ್ರತಿಕ್ರಿಯಿಸಿದ ಸ್ವಾನ್ "ಆರ್‌ಆರ್‌ ತಂಡ ತನ್ನ ವಿದೇಶಿ ಆಟಗಾರರ ಮೇಲೆ ಇನ್ನೂ ನಂಬಿಕೆಯನ್ನು ಇರಿಸಿಕೊಳ್ಳಬೇಕು. ಯಾಕೆಂದರೆ ಬಟ್ಲರ್, ಸ್ಮಿತ್, ಸ್ಟೋಕ್ಸ್ ಹಾಗೂ ಆರ್ಚರ್‌ ಕ್ರಿಕೆಟ್‌ನ ನೈಜ ಪ್ರತಿಭೆಗಳು. ಈ ಕ್ರಿಕೆಟಿಗರಿಂದ ನಿರ್ಭೀತ ಆಟ ಪ್ರದರ್ಶನವಾಗಲಿದೆ. ಈ ಆಟಗಾರರಿಂದ ತಂಡವನ್ನು ಗೆಲ್ಲಿಸಲು ಸಾದ್ಯವಾಗದಿದ್ದರೆ ರಾಹುಲ್ ತೆವಾಟಿಯಾ ಗೆಲ್ಲಿಸುತ್ತಾರೆ ಎಂದು ಸ್ವಾನ್ ಹೇಳಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಆಕಾಶ್ ಚೋಪ್ರ ಕೂಡ ಕ್ರಿಸ್ ಗೇಲ್ ಬಗ್ಗೆ ಇದೇ ಅಭಿಒ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಸೇರ್ಪಡೆಯಾಗಿದ್ದು ತಂಡದಲ್ಲಿ ಬದಲಾವಣೆಗೆ ಕಾರಣವಾಯಿತು ಎಂದಿದ್ದಾರೆ ಆಕಾಶ್ ಚೋಪ್ರ

Story first published: Saturday, October 31, 2020, 9:51 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X