ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರಿಗೆ 5 ಬಾರಿ ಕೋವಿಡ್ ಪರೀಕ್ಷೆ

IPL 2020 Covid-19 screening plan

ಐಪಿಎಲ್ 13ನೇ ಆವೃತ್ತಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಮಧ್ಯೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಮಾರ್ಗಸೂಚಿಯ ಕರಡು ಪ್ರತಿ ಬಿಸಿಸಿಐ ಸಿದ್ದಪಡಿಸಿದ್ದು ಕೊರೊನಾ ಪರೀಕ್ಷೆ ವಿಚಾರವಾಗಿ ಎಚ್ಚರಿಕೆಯ ನಿಯಮಗಳನ್ನು ಹೊಂದಿದೆ. ಟೂರ್ನಿಗೂ ಮುಂಚಿತವಾಗಿ ಯುಎಇಯಲ್ಲಿ ಅಭ್ಯಾಸ ಆರಂಭಿಸುವ ಮುನ್ನ ಆಟಗಾರರು ಹಾಗೂ ಮತ್ತು ತರಬೇತಿ ಸಿಬ್ಬಂದಿ ಐದು ಬಾರಿ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ಬರಬೇಕು.

ಇದರಲ್ಲಿ ಮೊದಲ ಎರಡು ಪರೀಕ್ಷೆಗಳು ಯುಎಇಗೆ ತೆರಳುವ ಮುನ್ನ ಭಾರತದಲ್ಲೇ ನಡೆಸಲಾಗುತ್ತದೆ. ಯುಎಇಗೆ ತೆರಳುವ ಮುನ್ನ ಆಟಗಾರರು 14 ದಿನಗಳ ಕ್ವಾರಂಟೈನ್ ಭಾರತದಲ್ಲಿ ಪೂರೈಸಬೇಕು. ಈ ಅವಧಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 2 ಬಾರಿ ಕೊರೊನಾ ಪರೀಕ್ಷಗೆ ಒಳಪಟ್ಟು ವರದಿ ನೆಗೆಟಿವ್ ಬರಬೇಕು. ಪಾಸಿಟಿವ್ ಬಂದರೆ 14 ದಿನಗಳ ಕ್ವಾರಂಟೈನ್ ಹಾಗೂ ಮತ್ತೆರಡು ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಹೊಂದಬೇಕು. ಬಳಿಕವೇ ಯುಎಇ ವಿಮಾನವೇರಲು ಅನುಮತಿ ದೊರೆಯುತ್ತದೆ.

ಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವ

ಯುಎಇಗೆ ತೆರಳಿದ ನಂತರವೂ ಎಲ್ಲರೂ ವಾರದ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಈ ವೇಳೆ 3 ಬಾರಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇವೆಲ್ಲದರಲ್ಲೂ ನೆಗೆಟಿವ್ ವರದಿ ಬಂದರೆ ಜೈವಿಕ-ಸುರಕ್ಷಾ ವಾತಾವರಣವನ್ನು ಪ್ರವೇಶಿಸಿ ಅಭ್ಯಾಸ ನಡೆಸಲು ಅವಕಾಶ ನೀಡಲಾಗುತ್ತದೆ.

ಯುಎಇಗೆ ತೆರಳಿದ ಮೊದಲ ವಾರ ಕ್ವಾರಂಟೈನ್‌ನಲ್ಲಿ ಇರುವ ವೇಳೆ ಆಟಗಾರರು ಮತ್ತು ಸಿಬ್ಬಂದಿ ಹೋಟೆಲ್‌ನಲ್ಲಿ ಪರಸ್ಪರ ಭೇಟಿಯಾಗಲು ಅವಕಾಶ ಇರುವುದಿಲ್ಲ.ತಂಡಗಳ ಅಭಿಪ್ರಾಯವನ್ನು ಆಧರಿಸಿ ಈ ಮಾರ್ಗಸೂಚಿಗಳು ಸಣ್ಣ ಬದಲಾವಣೆ ಕಾಣುವ ಸಾಧ್ಯತೆಯೂ ಇದೆ. ಆದರೆ ಆಟಗಾರರು-ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾ

ವಿದೇಶಿ ಆಟಗಾರರು ಕೂಡ ಯುಎಇಗೆ ಆಗಮಿಸುವ ಮುನ್ನ 2 ಬಾರಿ ಕರೊನಾ ಪರೀಕ್ಷೆ ಎದುರಿಸಿ ನೆಗೆಟಿವ್ ವರದಿಯೊಂದಿಗೆ ಬರಬೇಕು. ಬಳಿಕ ಯುಎಇಯಲ್ಲೂ 7 ದಿನಗಳ ಅವಧಿಯಲ್ಲಿ ಮೊದಲ, 3ನೇ ಮತ್ತು 6ನೇ ದಿನ ಕರೊನಾ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಪಡೆದುಕೊಳ್ಳಬೇಕು. ಬಿಸಿಸಿಐ ಪರೀಕ್ಷಾ ನಿಯಮಾವಳಿ ಹೊರತಾಗಿ ಫ್ರಾಂಚೈಸಿ ತನ್ನದೇ ಆದ ಪರೀಕ್ಷೆಗಳನ್ನು ನಡೆಸಲು ಅವಕಾಶವಿದೆ. ಜತೆಗೆ ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನೂ ಪಾಲಿಸುವುದು ಕಡ್ಡಾಯವಾಗಿರುತ್ತದೆ.

Story first published: Wednesday, August 5, 2020, 18:29 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X