ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ದಾಖಲೆಯ 200ನೇ ಪಂದ್ಯವನ್ನಾಡಲು ಸಜ್ಜಾಗಿರುವ ಧೋನಿ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಆರಂಭದಿಂದ ಇಲ್ಲಿಯವರೆಗೆ ಆತನ ಸ್ಟಂಪಿಂಗ್ ವೇಗ, ವಿಕೆಟ್‌ಗಳ ನಡುವೆ ರನ್‌ ಕದಿಯುವ ಛಲ ಸ್ವಲ್ಪವೂ ಕಮ್ಮಿಯಾಗಿಲ್ಲ. ಪ್ರಸ್ತುತ ಟೂರ್ನಿಯಲ್ಲಿ ಸ್ವಲ್ಪ ಕಳೆಗುಂದಿದ್ದು ಬಿಟ್ಟರೆ ಆತನ ಐಪಿಎಲ್‌ ಇತಿಹಾಸದ ನಿಜವಾದ ಸೂಪರ್ ಕಿಂಗ್.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಕ್ಟೋಬರ್ 19, 2020ರಂದು ಮೈದಾನಕ್ಕೆ ಕಾಲಿಟ್ಟರೆ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾರ. ಇದುವರೆಗೂ ಯಾರೂ ಮಾಡದ ಸಾಧನೆ ಧೋನಿ ಹೆಸರಿಗೆ ಸೇರ್ಪಡೆಯಾಗಲಿದೆ.

ಐಪಿಎಲ್: ಚೆನ್ನೈ vs ರಾಜಸ್ಥಾನ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್ಐಪಿಎಲ್: ಚೆನ್ನೈ vs ರಾಜಸ್ಥಾನ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

200ನೇ ಪಂದ್ಯವನ್ನ ಆಡಲಿರುವ ಮಾಹಿ

200ನೇ ಪಂದ್ಯವನ್ನ ಆಡಲಿರುವ ಮಾಹಿ

'ಮನೋರಂಜನ್‌ ಕಾ ಬಾಪ್' ಖ್ಯಾತಿಯ, ಹಣದ ಹೊಳೆ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು 200ನೇ ಪಂದ್ಯವನ್ನಾಡಲಿದ್ದಾರೆ. ಈ ಮೂಲಕ ಸಮೃದ್ಧ ಟಿ 20 ಲೀಗ್‌ನಲ್ಲಿ 200 ಪಂದ್ಯಗಳಲ್ಲಿ ಭಾಗವಹಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ಧೋನಿ

ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ಧೋನಿ

ನಾಯಕನಾಗಿ ಧೋನಿ ತನ್ನದೇ ಆದ ವಿಶೇಷ ದಾಖಲೆಯನ್ನು ಸಹ ಹೊಂದಿದ್ದರೆ. ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕರ ಪಟ್ಟಿಯಲ್ಲಿ ಮಾಹಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

183 ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನ ಮುನ್ನೆಡೆಸಿರುವ ಧೋನಿ 107 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, 75 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲ. ಹೀಗಾಗಿ ಒಟ್ಟಾರೆ ಗೆಲುವಿನ ಸರಾಸರಿಯನ್ನು ನೋಡುವುದಾದರೆ ಶೇ. 58.79 ನಷ್ಟಿದೆ.

ಐಪಿಎಲ್ 2020: ಡ್ವೇಯ್ನ್ ಬ್ರಾವೋಗೆ ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಚೆನ್ನೈ ಸಿಇಒ

ಧೋನಿ ನಂತರದ ಸ್ಥಾನದಲ್ಲಿ ಗೌತಮ್ ಗಂಭೀರ್

ಧೋನಿ ನಂತರದ ಸ್ಥಾನದಲ್ಲಿ ಗೌತಮ್ ಗಂಭೀರ್

ವಾಸ್ತವವಾಗಿ, ಎರಡನೇ ಸ್ಥಾನದಲ್ಲಿರುವ ಗೌತಮ್ ಗಂಭೀರ್‌ಗಿಂತ ಧೋನಿ 36 ಪಂದ್ಯಗಳನ್ನು ಹೆಚ್ಚು ಜಯಿಸಿದ್ದಾರೆ. ಗೌತಮ್ ಗಂಭೀರ್ 129 ಪಂದ್ಯಗಳಲ್ಲಿ 71 ಗೆಲುವು, 57 ಸೋಲು ಆಗಿದ್ದು ಗೆಲುವಿನ ಸರಾಸರಿ ಶೇ. 55.42ರಷ್ಟಿದೆ.

ಕೊಹ್ಲಿ-ರೋಹಿತ್‌ಗೆ ಎಷ್ಟನೇ ಸ್ಥಾನ

ಕೊಹ್ಲಿ-ರೋಹಿತ್‌ಗೆ ಎಷ್ಟನೇ ಸ್ಥಾನ

ಧೋನಿ, ಗಂಭೀರ್ ನಂತರ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.

ರೋಹಿತ್ ಶರ್ಮಾ 113 ಪಂದ್ಯಗಳಲ್ಲಿ 66 ಗೆಲುವು 43 ಸೋಲು, ನಾಲ್ಕು ಪಂದ್ಯ ಟೈ ಸೇರಿದಂತೆ ಸರಾಸರಿ ಶೇ. 60.17ರಷ್ಟು ಗೆಲುವಿನ ದಾಖಲೆ ಹೊಂದಿದ್ದಾರೆ. ಇನ್ನು ಇದುವರೆಗೂ ಕಪ್‌ ಗೆಲ್ಲಲು ಸಾಧ್ಯವಾಗದಿದ್ದರೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 119 ಪಂದ್ಯಗಳಲ್ಲಿ 54 ಗೆಲುವು, 58 ಸೋಲು, ಮೂರು ಟೈ, ನಾಲ್ಕು ಪಂದ್ಯಗಳ ಫಲಿತಾಂಶವಿಲ್ಲದೆ ಗೆಲುವಿನ ಸರಾಸರಿ ಶೇ. 48.26ರಷ್ಟು ಹೊಂದಿದ್ದಾರೆ.

ಬ್ಯಾಟಿಂಗ್‌ನಲ್ಲೂ ಧೋನಿ ದರ್ಬಾರ್

ಬ್ಯಾಟಿಂಗ್‌ನಲ್ಲೂ ಧೋನಿ ದರ್ಬಾರ್

ನಾಯಕನಾಗಿ ಅಷ್ಟೇ ಅಲ್ಲದೆ ಧೋನಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಅರ್ಹತೆ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಟಾಪ್ 10 ಆಟಗಾರರಲ್ಲಿ ಧೋನಿ ಕೂಡ ಒಬ್ಬರು.

178 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಧೋನಿ 137.67 ರ ಅದ್ಭುತ ಸ್ಟ್ರೈಕ್ ದರದಲ್ಲಿ 4,568 ಐಪಿಎಲ್ ರನ್ ಗಳಿಸಿದ ಎರಡನೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಒಟ್ಟಾರೆ ರನ್ ಗಳಿಸಿದವರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಧೋನಿ ಇದುವರೆಗೂ 23 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, 178 ಪಂದ್ಯಗಳಲ್ಲಿ 38.65 ಸರಾಸರಿಯಲ್ಲಿ 5,759 ರನ್‌ಗಳಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಹಾಗೂ ಐದು ಶತಕಗಳು ದಾಖಲಾಗಿವೆ.

Story first published: Monday, October 19, 2020, 18:02 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X