ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಯಾಮ್ ಕರ್ರನ್ ಆರಂಭಿಕನಾಗಿ ಕಣಕ್ಕಿಳಿದ ಕಾರಣ ವಿವರಿಸಿದ ಸಿಎಸ್‌ಕೆ ಕೋಚ್ ಫ್ಲೆಮಿಂಗ್

 IPL 2020: CSK coach Stephen Fleming reveals reason behind Sam Curran opening for CSK vs SRH

ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಶೇನ್ ವಾಟ್ಸನ್ ಹಾಗೂ ಫಾಪ್ ಡು ಪ್ಲೆಸಿಸ್ ಜೋಡಿ ಕಣಕ್ಕಿಳಿಯದೆ ಸ್ಯಾಮ್ ಕರ್ರನ್ ಡು ಪ್ಲೆಸಿಸ್‌ಗೆ ಜೊತೆಗಾರನಾಗಿ ಬಂದಿದ್ದರು.

ಶೇನ್ ವಾಟ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಈ ಬದಲಾವಣೆ ಆಶ್ವರ್ಯವನ್ನುಂಟು ಮಾಡಿತ್ತು. ಆದರೆ ಸ್ಯಾಮ್ ಕರ್ರನ್ ತಮಗೆ ನೀಡಿದ ಜವಾಬ್ಧಾರಿಯನ್ನು ಯಶಸ್ವಿಗೊಳಿಸುವಲ್ಲಿ ಸಫಲರಾದರು. 21 ಎಸೆತಗಳನ್ನು ಎದುರಿಸಿದ ಕರ್ರನ್ 31 ರನ್ ಬಾರಿಸಿದರು. ಈ ಕ್ರಮಾಂಕದಲ್ಲಿ ಬದಲವಣೆ ಮಾಡಿಕೊಂಡ ಕಾರಣವನ್ನು ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದಾರೆ.

6 ವರ್ಷದ ಬಳಿಕ ಗೋಲ್ಡನ್ ಡಕ್ ಗಳಿಸಿದ ಫಾಫ್ ಡು ಪ್ಲೆಸಿಸ್6 ವರ್ಷದ ಬಳಿಕ ಗೋಲ್ಡನ್ ಡಕ್ ಗಳಿಸಿದ ಫಾಫ್ ಡು ಪ್ಲೆಸಿಸ್

ಟೂರ್ನಿಯಲ್ಲಿ ಸತತವಾಗಿ ಸೋಲು ಕಾಣುತ್ತಿರುವುದು ತಂಡಕ್ಕೆ ಹಿನ್ನೆಡೆಯಾಯಿತು ಎಂಬುದನ್ನು ಫ್ಲೆಮಿಂಗ್ ಆರಂಭದಲ್ಲೇ ಒಪ್ಪಿಕೊಂಡರು. ಇದಕ್ಕಾಗಿ ಅಗ್ರ ಕ್ರಮಾಂಕದಲ್ಲಿ ಒಂದಷ್ಟು ಬಲವನ್ನು ತುಂಬಲು ಸ್ಯಾಮ್ ಕರ್ರನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ನಿರ್ಧಾರವನ್ನು ತೆಗದುಕೊಳ್ಳಲಾಯಿತು ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಸ್ಯಾಮ್ ಕರ್ರನ್ ಅವರನ್ನು ಅಗ್ರ ಕ್ರಮಾಂಕಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಬಾರಿ ನಿರ್ಧರಿಸಿದ್ದೆವು. ಆದರೆ ಆಗ ಬೇಗನೆ ವಿಕೆಟ್‌ಗಳು ಉರುಳುತ್ತಿತ್ತು. ತಂಡದಲ್ಲಿನ ಬ್ಯಾಟಿಂಗ್ ಸಂಪನ್ಮೂಲಗಳ ಮಧ್ಯೆ ಆತನ ಪ್ರತಿಭೆ ಕಳೆದುಹೋಗುವ ಬದಲು ಆತನನ್ನು ಮುಂದಕ್ಕೆ ಬಿಟ್ಟು ಆತನ ಪ್ರದರ್ಶನವನ್ನು ನೋಡಲು ಬಯಸಿದೆವು. ಇದು ಆತ ಆಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣವಾಯಿತು ಎಂದು ಫ್ಲೆಮಿಂಗ್ ಹೇಳಿದ್ದಾರೆ.

IPLನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌: ಟಾಪ್ 10ನಲ್ಲಿ 7 ಭಾರತೀಯ ಬೌಲರ್ಸ್IPLನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌: ಟಾಪ್ 10ನಲ್ಲಿ 7 ಭಾರತೀಯ ಬೌಲರ್ಸ್

ತಂಡಕ್ಕೆ ನೀಡಿದ ಕಾಣಿಕೆಯನ್ನು ಗಮನಿಸಿದರೆ ಆತ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ. ಆತ ಬಹುಳ ಸ್ಪರ್ಧಾತ್ಮಕ ಮನೋಭಾವದ ಆಟಗಾರ. ಪ್ರತಿ ಬಾರಿ ನಾವು ಗುರಿ ನಿಗದಿ ಮಾಡಿದಾಗಲೂ ಆತ ಅದರಿಮದ ಮೀರಿ ನಿಂತಿದ್ದಾನೆ. ಆತನ ಪ್ರದರ್ಶನವನ್ನು ನೋಡಿದ ಬಳಿಕ ತಂಡಕ್ಕೆ ಆತನ ಸಾಮರ್ಥ್ಯವನ್ನು ಅರಿತುಕೊಂಡೆವು ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

Story first published: Wednesday, October 14, 2020, 15:12 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X