ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ವೆಬ್ ತಾಣದಿಂದ ರೈನಾ ಔಟ್!

IPL 2020: CSK removes Suresh Raina name from official website

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ''ಚಿನ್ನ ತಲಾ'' ಶಾಶ್ವತವಾಗಿ ದೂರಾಗುತ್ತಿದ್ದಾರೆಯೇ? ಹೀಗೊಂದು ಸಂಶಯ ಅಭಿಮಾನಿಗಳಲ್ಲಿ ಮೂಡುತ್ತಿದೆ. ಐಪಿಎಲ್ 2020ರಲ್ಲಿ ಚೆನ್ನೈ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ. ಡ್ಯಾಡ್ಸ್ ಆರ್ಮಿ ಎಂದು ಕರೆಸಿಕೊಂಡ ಧೋನಿ ಪಡೆ ಯಾವುದೇ ವಿಭಾಗದಲ್ಲೂ ಮಿಂಚುತ್ತಿಲ್ಲ. ಬ್ಯಾಟಿಂಗ್ ನೋಡಿದವರಂತೂ ರೈನಾ ಇರಬೇಕಾಗಿತ್ತು ಎಂದು ಹಲುಬುತ್ತಿದ್ದಾರೆ.

ಐಪಿಎಲ್ 2020 ಆಡಲು ಚೆನ್ನೈ ತಂಡದೊಡನೆ ಬಂದಿದ್ದ ಸುರೇಶ್ ರೈನಾ ಹೋಟೆಲ್ ತಲುಪಿದ ತನಕ ಎಲ್ಲವೂ ಚೆನ್ನಾಗಿತ್ತು. ಆದರೆ, ನಂತರ ಏನಾಯಿತು ಗೊತ್ತಿಲ್ಲ. ಸಡನ್ ಆಗಿ ಭಾರತಕ್ಕೆ ಮರಳಿದ ರೈನಾ ಕೊಟ್ಟಿದ್ದು, ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಕುಟುಂಬದೊಡನೆ ಇರಬೇಕು ಎಂದಿದ್ದರು.

ಆದರೆ, ನಿಜವಾದ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಧೋನಿ ಜೊತೆಗೆ ಜಗಳವಾಡಿಕೊಂಡರು ಎಂಬ ಸುದ್ದಿಯನ್ನೂ ಹಬ್ಬಿಸಲಾಯಿತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಇದು ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿತು. ರೈನಾ ಕೂಡಾ ಐಪಿಎಲ್ ಗೆ ಮರಳುವ ಸುಳಿವು ನೀಡಿದ್ದರು. ಆದರೆ, ಆಗಿದ್ದೇ ಬೇರೆ.

ಸುರೇಶ್ ರೈನಾ ಮತ್ತೆ ಆಡುತ್ತಿಲ್ಲ: ಚೆನ್ನೈ ಸೂಪರ್ ಕಿಂಗ್ಸ್ ಸಿಎಸ್‌ಕೆ ಸಿಇಒ ಸ್ಪಷ್ಟನೆಸುರೇಶ್ ರೈನಾ ಮತ್ತೆ ಆಡುತ್ತಿಲ್ಲ: ಚೆನ್ನೈ ಸೂಪರ್ ಕಿಂಗ್ಸ್ ಸಿಎಸ್‌ಕೆ ಸಿಇಒ ಸ್ಪಷ್ಟನೆ

ಸುರೇಶ್ ರೈನಾ ಬಗ್ಗೆ ಮಾತನಾಡಿದ ತಂಡದ ಸಿಇಒ ಕಾಶಿ ವಿಶ್ವನಾಥನ್, 'ನಾವು ಮತ್ತೆ ಸುರೇಶ್ ರೈನಾ ಅವರತ್ತ ಹಿಂತಿರುಗುವುದನ್ನು ನೋಡುವುದಿಲ್ಲ. ಯಾಕೆಂದರೆ ತಾನು ಆಡಲ್ಲ ಅಂತ ಅವರೇ ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರನ್ನು ಮತ್ತೆ ತಂಡಕ್ಕೆ ಕರೆತರುವ ಬಗ್ಗೆ ನಾವು ಯೋಚಿಸುತ್ತಿಲ್ಲ,' ಎಂದಿದ್ದರು.

IPL 2020: CSK removes Suresh Raina name from official website

ಸತತ ಸೋಲಿನ ಬಳಿಕವೂ ತಂಡ ಗೆಲುವಿನ ಹಾದಿಗೆ ಮರಳಲಿದೆ ಎಂದು ಅಭಿಮಾನಿಗಳಿಗೆ ನಾನು ಭರವಸೆ ನೀಡುತ್ತೇನೆ. ತಂಡದ ಆಟಗಾರರು, ಫ್ಯಾನ್ಸ್ ಮುಖದಲ್ಲಿ ಮಂದಹಾಸ ಮೂಡಲಿದೆ ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ 16 ರನ್‌ನಿಂದ ಪರಾಭವಗೊಂಡಿತ್ತು. ಇನ್ನು ಯುವಕರು ಹೆಚ್ಚಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಿಎಸ್‌ಕೆ 44 ರನ್‌ ಸೋಲನುಭವಿಸಿತ್ತು. ಸರಣಿ ಸೋಲು ಕಂಡಿರುವ ಸಿಎಸ್‌ಕೆಗೆ ಈಗ ರೈನಾ ಬಲವೂ ಇಲ್ಲವಾಗಿದೆ. 6 ದಿನಗಳ ವಿರಾಮದ ಬಳಿಕ ಅಕ್ಟೋಬರ್ 2ರಂದು ಸಿಎಸ್‌ಕೆ ತಂಡ ಸನ್ ರೈಸರ್ಸ್ ಹೈದರಾಬಾದ್ ಸವಾಲು ಸ್ವೀಕರಿಸಲಿದೆ.

Story first published: Tuesday, September 29, 2020, 16:06 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X