ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೈ ಕೊಟ್ಟ ರೈನಾ, ಬಜ್ಜಿಗೆ ಬೈ ಬೈ ಹೇಳಲು ಮುಂದಾದ ಸಿಎಸ್‌ಕೆ

 IPL 2020: CSK To Terminate All Contracts With Suresh Raina And Suresh Raina?

ಐಪಿಎಲ್ ಇತಿಹಾಸದಲ್ಲಿ ಸದಾ ಪ್ರಾಬಲ್ಯ ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಇದಕ್ಕೆ ಅನುಭವಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಅನುಪಸ್ಥಿತಿಯೂ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಹಿರಿಯ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಇಬ್ಬರೂ ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಐಪಿಎಲ್‌ನಲ್ಲಿ ಆಡಲು ದುಬೈಗೆ ತೆರಳಿದ್ದ ರೈನಾ ಅಲ್ಲಿಂದ ಭಾರತಕ್ಕೆ ಮರಳಿದ್ದರು. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಇಬ್ಬರ ಗೈರು ಸಿಎಸ್‌ಕೆ ತಂಡಕ್ಕೆ ತೀವ್ರ ಹೊಡೆತ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ವೆಬ್ ತಾಣದಿಂದ ರೈನಾ ಔಟ್!ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ವೆಬ್ ತಾಣದಿಂದ ರೈನಾ ಔಟ್!

ಇತ್ತೀಚೆಗಷ್ಟೇ ರೈನಾ ಅವರ ಹೆಸರನ್ನು ಸಿಎಸ್‌ಕೆಯ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು. ಈಗ ರೈನಾ ಮತ್ತು ಹರ್ಭಜನ್ ಇಬ್ಬರ ಜತೆಗೆ ಮಾಡಿಕೊಳ್ಳಲಾದ ಎಲ್ಲ ಒಪ್ಪಂದಗಳ ಸಂಬಂಧಗಳನ್ನು ರದ್ದುಗೊಳಿಸಲು ಸಿಎಸ್‌ಕೆ ಫ್ರಾಂಚೈಸಿ ನಿರ್ಧರಿಸಿದೆ ಎನ್ನಲಾಗಿದೆ. ಮುಂದೆ ಓದಿ.

ಅಧಿಕೃತ ಒಪ್ಪಂದ ರದ್ದು

ಅಧಿಕೃತ ಒಪ್ಪಂದ ರದ್ದು

ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಇಬ್ಬರೂ ಆಟಗಾರರ ಹೆಸರನ್ನು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದು ಹಾಕಿರುವುದು ಮಾತ್ರವಲ್ಲ, ಇಬ್ಬರನ್ನೂ ಅಧಿಕೃತವಾಗಿ ಎಲ್ಲ ಒಪ್ಪಂದಗಳಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಸಹ ಶುರುಮಾಡಿದೆ ಎಂದು ಹೇಳಲಾಗಿದೆ.

ಒಪ್ಪಂದ ಇದೇ ವರ್ಷ ಅಂತ್ಯ

ಒಪ್ಪಂದ ಇದೇ ವರ್ಷ ಅಂತ್ಯ

2018ರಲ್ಲಿ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಇಬ್ಬರೂ ಸಿಎಸ್‌ಕೆ ಜತೆಗಿನ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ರೈನಾ ಅವರೊಂದಿಗೆ ಸಿಎಸ್‌ಕೆ 11 ಕೋಟಿ ರೂ. ಹಾಗೂ ಹರ್ಭಜನ್ ಜತೆಗೆ 2 ಕೋಟಿ ರೂ. ವಾರ್ಷಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ಪ್ರಸಕ್ತ ವರ್ಷವೇ ಅಂತ್ಯಗೊಳ್ಳುವುದರಲ್ಲಿತ್ತು.

ಎಂಎಸ್ ಧೋನಿ ಜೊತೆ ವಿರಸವಲ್ಲ, ಸುಳಿವು ಕೊಟ್ಟ ಸುರೇಶ್ ರೈನಾ

ಆಡುವವರಿಗೆ ಮಾತ್ರ ವೇತನ

ಆಡುವವರಿಗೆ ಮಾತ್ರ ವೇತನ

ರೈನಾ ಹಾಗೂ ಹರ್ಭಜನ್ ಅವರೊಂದಿಗಿನ ಒಪ್ಪಂದಗಳನ್ನು ರದ್ದುಗೊಳಿಸುವ ಕುರಿತು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕ್ರಿಕೆಟಿಗರ ವೇತನದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಯಾರು ತಂಡದಲ್ಲಿ ಕ್ರಿಕೆಟ್ ಆಡುತ್ತಾರೋ ಅವರಿಗೆ ವೇತನ ನೀಡಲಾಗುತ್ತದೆ, ಯಾರು ಆಡುವುದಿಲ್ಲವೋ ಅವರಗೆ ವೇತನ ಪಾವತಿಸಲಾಗುವುದಿಲ್ಲ' ಎಂದಿದ್ದಾರೆ.

ಮತ್ತೆ ಕರೆ ತರುವುದಿಲ್ಲ

ಮತ್ತೆ ಕರೆ ತರುವುದಿಲ್ಲ

'ನಾವು ಮತ್ತೆ ಸುರೇಶ್ ರೈನಾ ಅವರತ್ತ ಹಿಂತಿರುಗುವುದನ್ನು ನೋಡುವುದಿಲ್ಲ. ಯಾಕೆಂದರೆ ತಾವು ಆಡುವುದಿಲ್ಲ ಎಂದು ಅವರೇ ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರನ್ನು ಮತ್ತೆ ತಂಡಕ್ಕೆ ಕರೆತರುವ ಬಗ್ಗೆ ನಾವು ಯೋಚಿಸುತ್ತಿಲ್ಲ' ಎಂದು ವಿಶ್ವನಾಥನ್ ಅವರು ಈ ಹಿಂದೆ ಹೇಳಿಕೆ ನೀಡಿದ್ದರು.

ಸುರೇಶ್ ರೈನಾ ಮತ್ತೆ ಆಡುತ್ತಿಲ್ಲ: ಚೆನ್ನೈ ಸೂಪರ್ ಕಿಂಗ್ಸ್ ಸಿಎಸ್‌ಕೆ ಸಿಇಒ ಸ್ಪಷ್ಟನೆ

Story first published: Thursday, October 1, 2020, 21:01 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X