ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಟ್ಸನ್-ಡು ಪ್ಲೆಸಿಸ್ ಅದ್ಭುತ ಜೊತೆಯಾಟಕ್ಕೆ ತಲೆ ಬಾಗಿದ ಪಂಜಾಬ್‌

IPL 2020: CSK vs KXIP Match 18 highlights in kannada

ದುಬೈ: ಅನುಭವಿ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ 10 ವಿಕೆಟ್‌ಗಳ ಜಯ ಕಂಡಿದೆ.

ಐಪಿಎಲ್: ವಿಶಿಷ್ಟ ದಾಖಲೆ ಬರೆದ ಚೆನ್ನೈ ಆಲ್ ರೌಂಡರ್ ರವೀಂದ್ರ ಜಡೇಜಾಐಪಿಎಲ್: ವಿಶಿಷ್ಟ ದಾಖಲೆ ಬರೆದ ಚೆನ್ನೈ ಆಲ್ ರೌಂಡರ್ ರವೀಂದ್ರ ಜಡೇಜಾ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 18 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್, ಉತ್ತಮ ರನ್ ಕಲೆ ಹಾಕಿತ್ತು. ಕೆಎಲ್ ರಾಹುಲ್ 63, ಮಯಾಂಕ್ ಅಗರ್ವಾಲ್ 26, ಮನ್‌ದೀಪ್ ಸಿಂಗ್ 27, ನಿಕೋಲಸ್ ಪೂರನ್ 33, ಗ್ಲೆನ್ ಮ್ಯಾಕ್ಸ್‌ವೆಲ್ 11, ಸರ್ಫರಾಜ್ ಖಾನ್ 14 ರನ್‌ನೊಂದಿಗೆ ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಅದ್ಭುತ ಜೊತೆಯಾಟ ಕಾಣ ಸಿಕ್ಕಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ 83 (53 ಎಸೆತ), ಫಾಫ್ ಡು ಪ್ಲೆಸಿಸ್ 87 (53 ಎಸೆತ) ಸೇರಿಸಿದ್ದರಿಂದ ದಾಖಲೆಯ ಜೊತೆಯಾಟ ಸಿಎಸ್‌ಕೆಯಿಂದ ಬಂತು.

ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?!ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?!

ಸಿಎಸ್‌ಕೆ ತಂಡ 17.4ನೇ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 181 ರನ್ ಗುರಿ ತಲುಪಿತು. ಪಂಜಾಬ್‌ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ಶಾರ್ದೂಲ್ ಠಾಕೂರ್ 2, ರವೀಂದ್ರ ಜಡೇಜಾ ಮತ್ತು ಪೀಯೂಶ್ ಚಾವ್ಲಾ ತಲಾ 1 ವಿಕೆಟ್ ಪಡೆದು ಬೌಲಿಂಗ್ ವಿಭಾಗದಲ್ಲಿ ಮಿನುಗಿದರು. ಶೇನ್ ವಾಟ್ಸನ್ ಪಂದ್ಯಶ್ರೇಷ್ಠರೆನಿಸಿದರು.

Story first published: Monday, October 5, 2020, 10:01 [IST]
Other articles published on Oct 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X