ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ ನಾಯಕನಾಗಿ 100 ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿ

IPL 2020: CSK vs MI 100th win for MS Dhoni as captain for CSK

ಅಬುಧಾಬಿ: 14 ತಿಂಗಳ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ನಾಯಕನಾಗಿ 100ನೇ ಗೆಲುವಿನ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಧೋನಿ ಸಾಧನೆಗೆ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಸಾಕ್ಷಿಯಾಯಿತು.

ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಜಯ ಗಳಿಸಿತು. ಸಿಎಸ್‌ಕೆ ಗೆಲುವಿನಲ್ಲಿ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಪ್ರಮುಖ ಪಾತ್ರ ವಹಿಸಿದರು.

ಐಪಿಎಲ್ 13: ಲಾಕ್ ಡೌನ್ ನಲ್ಲಿ ಚೆನ್ನಾಗಿ ಉಂಡು ದಷ್ಟಪುಷ್ಟವಾಗಿರುವ ಆಟಗಾರರ ಪಟ್ಟಿಐಪಿಎಲ್ 13: ಲಾಕ್ ಡೌನ್ ನಲ್ಲಿ ಚೆನ್ನಾಗಿ ಉಂಡು ದಷ್ಟಪುಷ್ಟವಾಗಿರುವ ಆಟಗಾರರ ಪಟ್ಟಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ಎದುರಾಳಿಗೆ ಸವಾಲಿನ ಗುರಿ ನೀಡುವಲ್ಲಿ ಎಡವಿತು. ಕ್ವಿಂಟನ್ ಡಿ ಕಾಕ್ 33, ರೋಹಿತ್ ಶರ್ಮಾ 12, ಸೌರಭ್ ತಿವಾರಿ 42, ಸೂರ್ಯಕುಮಾರ್ ಯಾದವ್ 17, ಹಾರ್ದಿಕ್ ಪಾಂಡ್ಯ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 162 ರನ್ ಪೇರಿಸಿತ್ತು.

ಐಪಿಎಲ್: ಗಮನ ಸೆಳೆದ ಎಂಎಸ್ ಧೋನಿಯ 'ವಿಭಿನ್ನ' ಗಡ್ಡ-ವಿಡಿಯೋಐಪಿಎಲ್: ಗಮನ ಸೆಳೆದ ಎಂಎಸ್ ಧೋನಿಯ 'ವಿಭಿನ್ನ' ಗಡ್ಡ-ವಿಡಿಯೋ

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಫಾಫ್ ಡು ಪ್ಲೆಸಿಸ್ 58 (44 ಎಸೆತ), ಅಂಬಾಟಿ ರಾಯುಡು 71 (48 ಎಸೆತ), ರವೀಂದ್ರ ಜಡೇಜಾ 10, ಸ್ಯಾಮ್ ಕರನ್ 18 ರನ್ ಕೊಡುಗೆಯೊಂದಿಗೆ 19.2 ಓವರ್‌ಗೆ 5 ವಿಕೆಟ್ ಕಳೆದು 166 ರನ್ ಗಳಿಸುವುದರೊಂದಿಗೆ ಗೆಲುವನ್ನಾಚರಿಸಿತು.

Story first published: Sunday, September 20, 2020, 0:49 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X