ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬುಧಾಬಿ ಪಿಚ್ ಹಾಗೂ ಆ ಮೂವರು ಆಟಗಾರರು.! ಮುಂಬೈ ಸೋಲಿಸಲು ಧೋನಿ ಮಾಸ್ಟರ್‌ಪ್ಲ್ಯಾನ್

Ipl 2020: Csk Vs Mi Dhoni Master Plane For Inaugural Match

ಐಪಿಎಲ್ ಈ ಬಾರಿಯ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನಯ ಸೂಪರ್ ಕಿಂಗ್ಸ್ ಕಣಕ್ಕಿಳಿಯುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಹಾಲಿ ಚಾಂಪಿಯನ್ ಆಗಿದ್ದು ಬಲಿಷ್ಠ ತಂಡವೆನಿಸಿದೆ. ಆದರೆ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಮುಂಬೈ ಸೋಲಿನಲು ದೊಡ್ಡ ರಣತಂತ್ರವನ್ನೇ ಹೆಣೆದಿದೆ.

ಕ್ರಿಕೆಟ್‌ನ ಎಲ್ಲಾ ತಂತ್ರಗಳನ್ನು ಅರಿತಿರುವ ಮಹೇಂದ್ರ ಸಿಂಗ್ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ರಣತಂತ್ರವನ್ನು ಹೂಡಿದ್ದಾರೆ. ಪಿಚ್ ಎದುರಾಳಿಯ ಬಲಾಬಲಗಳನ್ನು ಸಂಪೂರ್ಣವಾಗಿ ಅರಿತುಕೊಂಡಿರುವ ಧೋನಿ ಅದಕ್ಕೆ ಪ್ರತಿತಂತ್ರವನ್ನು ಹೆಣೆದು ಕಟ್ಟಿಹಾಕಲು ಸಿದ್ದರಾಗಿದ್ದಾರೆ.

ಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾ

ಎಂಎಸ್ ಧೋನಿ ತನ್ನ ತಂಡದಲ್ಲಿರುವ ಮೂವರು ಆಟಗಾರರನ್ನು ಬಳಸಿಕೊಂಡು ರೋಹಿತ್ ಪಡೆಯನ್ನು ಕಟ್ಟಿಹಾಕುವ ರಣತಂತ್ರ ಹೆಣೆದಿದ್ದಾರೆ.

ದುಬೈ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿ

ದುಬೈ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿ

ಯುಎಇನ ಎಲ್ಲಾ ಕ್ರೀಡಾಂಗಣಗಳ ಪಿಚ್‌ಗಳು ಬಹುತೇಕ ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗಲಿದೆ. ಉತ್ತಮ ಸ್ಪಿನ್ ಬೌಲರ್‌ಗಳು ಇಲ್ಲಿ ಇಂಚುವ ಸಾಧ್ಯತೆಯೇ ಹೆಚ್ಚಾಗಿದೆ. ಈ ಅಂಶವನ್ನು ಧೋನಿ ಎಲ್ಲಾ ತಂಡಗಳು ಗಮನದಟ್ಟುಕೊಂಡಿದೆಯಾದರೂ ಧೋನಿಯ ತಂತ್ರಗಳು ಇಲ್ಲಿ ಹೆಚ್ಚು ಕಾರ್ಯಮಾಡುವ ಸಾರ್ಧಯತೆಯಿದೆ. ತನ್ನಲ್ಲಿರುವ ಸ್ಪಿನ್ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದ್ದಾರೆ ಮಹೇಂದ್ರ ಸಿಂಗ್ ಧೋನಿ.

ಹರ್ಭಜನ್ ಅಲಭ್ಯತೆ ಕಾಡಲಾರದು

ಹರ್ಭಜನ್ ಅಲಭ್ಯತೆ ಕಾಡಲಾರದು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಹರ್ಭಜನ್ ಸಿಂಗ್ ಈ ಬಾರಿಯ ಟೂರ್ನಿಗೆ ಅಲಭ್ಯಗುತ್ತಿದ್ದಾರೆ. ಆದರೆ ಇದು ಧೋನಿ ಬಳಗಕ್ಕೆ ಹೆಚ್ಚು ಕಾಡುವ ಸಾಧ್ಯತೆಯಿಲ್ಲ. ಕಾರಣ ತಂಡದಲ್ಲಿರುವ ಅನುಭವಿ ಸ್ಪಿನ್ನರ್‌ಗಳ ಬಲ. ಮುಂಬೈ ತಂಡಕ್ಕೆ ಆಘಾತ ನೀಡುವ ಘಾತಕ ಸ್ಪಿನ್ನರ್‌ಗಳು ಧೋನಿ ಪಡೆಯಲ್ಲಿದ್ದಾರೆ.

ಪಿಯೂಷ್ ಚಾವ್ಲಾ ಸೇರ್ಪಡೆ

ಪಿಯೂಷ್ ಚಾವ್ಲಾ ಸೇರ್ಪಡೆ

ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗುವ ದೃಷ್ಠಿಕೋನದಲ್ಲಿ ಚೆನ್ನೈ ಹಾಗೂ ಯುಎಇ ಪಿಚ್‌ಗಳು ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಆ ಕಾರಣದಿಂದಾಗಿ ಸಿಎಸ್‌ಕೆ ತಂಡ ಯಾವಾಗಲೂ ತಂಡದಲ್ಲಿ ಹೆಚ್ಚಿನ ಸ್ಪಿನ್ ಬೌಲರ್‌ಗಳನ್ನು ಆಯ್ಕೆ ಮಾಡುತ್ತದೆ. ತಂಡವು ಈಗಾಗಲೇ ನಾಲ್ಕು ಪ್ರಮುಖ ಸ್ಪಿನ್ ಬೌಲರ್‌ಗಳನ್ನು ಹೊಂದಿದ್ದರಿಂದ 2020 ರ ಐಪಿಎಲ್ ಹರಾಜಿನಲ್ಲಿ ಪಿಯೂಷ್ ಚಾವ್ಲಾ ಐದನೇ ಸ್ಥಾನಕ್ಕೆ ಆಯ್ಕೆಯಾಗಿ ಸೇರ್ಪಡೆಗೊಂಡಿದ್ದಾರೆ.

ಸಿಎಸ್‌ಕೆ ತಂಡದಲ್ಲಿರುವ ಸ್ಪಿನ್ ಅಸ್ತ್ರಗಳು

ಸಿಎಸ್‌ಕೆ ತಂಡದಲ್ಲಿರುವ ಸ್ಪಿನ್ ಅಸ್ತ್ರಗಳು

ಸಿಎಸ್ಕೆ ತಂಡದಲ್ಲಿ ಪ್ರಸ್ತುತ ನಾಲ್ಕು ಅನುಭವಿ ಸ್ಪಿನ್ ಬೌಲರ್‌ಗಳಿದ್ದಾರೆ. ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಇಮ್ರಾನ್ ತಾಹಿರ್ ಮತ್ತು ಮಿಚೆಲ್ ಸ್ಯಾಂಟ್ನರ್. ಅವರಲ್ಲದೆ, ಯುವ ಸ್ಪಿನ್ ಬೌಲರ್‌ಗಳಾದ ಸಾಯಿ ಕಿಶೋರ್ ಮತ್ತು ಕರಣ್ ಶರ್ಮಾ ಕೂಡ ಗಮನಾರ್ಹ ಪ್ರದರ್ಶನ ನೀಡುವ ಸ್ಪಿನ್ ಅಸ್ತ್ರಗಳಾಗಿದ್ದಾರೆ.

ಈ ಮೂವರು ಬೌಲರ್‌ಗಳೇ ಧೋನಿ ಅಸ್ತ್ರ

ಈ ಮೂವರು ಬೌಲರ್‌ಗಳೇ ಧೋನಿ ಅಸ್ತ್ರ

ಮುಂಬೈ ವಿರುದ್ಧದ ಪಂದ್ಯದಲ್ಲಿ ಧೋನಿ ಈ ಮೂವರು ಆಟಗಾರರನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲಿದ್ದಾರೆ. ಆ ಆಟಗಾರರು ತಂಡದ ಮೂರು ಪ್ರಮುಖ ಸ್ಪಿನ್ನರ್‌ಗಳಾದ ಪಿಯೂಷ್ ಚಾವ್ಲಾ, ಜಡೇಜಾ ಮತ್ತು ಇಮ್ರಾನ್ ತಾಹಿರ್. ಈ ಮೂವರು ಕೂಡ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್ ನೇತೃತ್ವದಲ್ಲಿ ದೀಪಕ್ ಚಾಹರ್ ಅಥವಾ ಶಾರ್ದುಲ್ ಠಾಕೂರ್ ಸೇರಿಕೊಳ್ಳಲಿದ್ದಾರೆ.

ಆಲ್‌ರೌಂಡರ್‌ಗಳು

ಆಲ್‌ರೌಂಡರ್‌ಗಳು

ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರವಾಗಿರುವ ಡ್ವೇಯ್ನ್ ಬ್ರಾವೋ ಆಲ್ ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ಪೂರ್ಣ ಸಮಯದ ವೇಗದ ಬೌಲರ್‌ಗಳು ಅಗತ್ಯವಿಲ್ಲ ಎಂದು ಧೋನಿ ಭಾವಿಸಿದರೆ ಯುವ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರನ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದರೊಂದಿಗೆ ಹೆಚ್ಚಿನ ಆಲ್‌ರೌಂಡರ್‌ಗಳ ಸಹಕಾರದಿಂದ ಧೋನಿ ಆರು ಅಥವಾ ಏಳು ಬೌಲರ್‌ಗಳನ್ನು ಬಳಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮುಂಬೈ ಮೇಲು!

ಬ್ಯಾಟಿಂಗ್‌ನಲ್ಲಿ ಮುಂಬೈ ಮೇಲು!

ಸ್ಪಿನ್ ಬೌಲಿಂಗ್‌ನಲ್ಲಿ ವಿಭಾಗದಲ್ಲಿ ಮುಂಬೈನ ದೌರ್ಬಲ್ಯವು ಸಿಎಸ್‌ಕೆ ಅವರ ಬಲವಾಗಿರುವುದರಿಂದ ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಮೇಲುಗೈ ಪಡೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಬ್ಯಾಟಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ತಂಡಕ್ಕಿಂತ ಸಾಕಷ್ಟು ಬಲಿಷ್ಠವಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನಾಳಿನ ಪಂದ್ಯ ಚೆನ್ನೈ ಸ್ಪಿನ್ vs ಮುಂಬೈ ಬ್ಯಾಟಿಂಗ್ ಎನಿಸಲಿದೆ.

Story first published: Friday, September 18, 2020, 12:17 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X