ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

IPL 2020: CSK vs MI inaugural match all set to happen as planned before

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಎಲ್ಲಾ ತಯಾರಿಗಳಾಗಿವೆ, ಇನ್ನೊಂದಿಷ್ಟು ಆಗುತ್ತಿವೆ. ಸೆಪ್ಟೆಂಬರ್ 19ರಿಂದ 2020ರ ಆವೃತ್ತಿಯ ನಗದು ಶ್ರೀಮಂತ ಟೂರ್ನಿ ಆರಂಭಗೊಳ್ಳಲಿದೆ. ಯುನೈಟೆಡ್ ಅರಬ್‌ ಎಮಿರೇಟ್ಸ್‌ನ ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಶೀಘ್ರವೇ ಪ್ರಕಟಿಸಲಿದೆ.

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

ಸೆಪ್ಟೆಂಬರ್ 19ರಂದು ಆರಂಭಗೊಂಡು ನವೆಂಬರ್ 10ರಂದು ಫೈನಲ್‌ನೊಂದಿಗೆ ತೆರೆ ಕಾಣಲಿರುವ ಟೂರ್ನಿಯ ಆರಂಭ ಅಂತ್ಯದ ದಿನಾಂಕಗಳನ್ನಷ್ಟೇ ಬಿಸಿಸಿಐ ಅಧಿಕೃತವಾಗಿ ಪ್ರಕಟಗೊಳಿಸಿತ್ತು.

48ರ ಹರೆಯ ಪಕ್ಕಕ್ಕಿಟ್ಟು ಅದ್ಭುತ ಕ್ಯಾಚ್ ಪಡೆದ ಪ್ರವೀಣ್ ತಾಂಬೆ: ವೀಡಿಯೊ48ರ ಹರೆಯ ಪಕ್ಕಕ್ಕಿಟ್ಟು ಅದ್ಭುತ ಕ್ಯಾಚ್ ಪಡೆದ ಪ್ರವೀಣ್ ತಾಂಬೆ: ವೀಡಿಯೊ

ಈಗ, ಉದ್ಘಾಟನಾ ಪಂದ್ಯಗಳಲ್ಲಿ ಕಾದಾಡಲಿರುವ ಇತ್ತಂಡಗಳು ಯಾವುದೆಂದು ಬಹಿರಂಗಗೊಂಡಿದೆ, ಖಾತರಿಗೊಂಡಿದೆ.

ಗಾಳಿ ಸುದ್ದಿಗಳಿಗೆ ತೆರೆ

ಗಾಳಿ ಸುದ್ದಿಗಳಿಗೆ ತೆರೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ಆಡೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಸೆಪ್ಟೆಂಬರ್ 19ರಂದು ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಆಡಲಿವೆ ಎಂದು ಹೇಳಲಾಗಿತ್ತು. ಆದರೆ ಈ ಗಾಳಿ ಸುದ್ದಿಗಳಿಗೆಲ್ಲ ಈಗ ತೆರೆ ಬಿದ್ದಿದೆ.

ಸಿಎಸ್‌ಕೆ vs ಎಂಐ ಕದನ

ಸಿಎಸ್‌ಕೆ vs ಎಂಐ ಕದನ

ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಮಾರ್ಚ್ 29ರಂದು ಐಪಿಎಲ್ ಆರಂಭವಾಗುತ್ತಿದ್ದರೆ ಇದೇ ಎರಡು ತಂಡಗಳು ಮೊದಲ ಪಂದ್ಯ ಆಡುತ್ತಿದ್ದವು. ಅಂದರೆ, ಹಳೆ ವೇಳಾಪಟ್ಟಿಯಂತೆ ಸಿಎಸ್‌ಕೆ ಮತ್ತು ಎಂಐ ಈ ಬಾರಿಯ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿವೆ.

ಶನಿವಾರ ಸಂಪೂರ್ಣ ವೇಳಾಪಟ್ಟಿ

ಶನಿವಾರ ಸಂಪೂರ್ಣ ವೇಳಾಪಟ್ಟಿ

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐಯು ಸೆಪ್ಟೆಂಬರ್ 5ರ ಶನಿವಾರ ಪ್ರಕಟಿಸುವ ನಿರೀಕ್ಷೆಯಿದೆ. ಸಿಎಸ್‌ಕೆಯಲ್ಲಿ ಇಬ್ಬರು ಆಟಗಾರರೂ ಸೇರಿ (ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್) ಒಟ್ಟು 13 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಅವರೆಲ್ಲರೂ ಗುಣಮುಖರಾಗಿದ್ದಾರೆ.

ಸೆ. 4ರಿಂದ ಸಿಎಸ್‌ಕೆ ಮೈದಾನಕ್ಕೆ

ಸೆ. 4ರಿಂದ ಸಿಎಸ್‌ಕೆ ಮೈದಾನಕ್ಕೆ

ಯುಎಇಯಲ್ಲಿ ಮೈದಾನಕ್ಕಿಳಿಯದ ಒಂದೇ ತಂಡವಾಗಿ ಸಿಎಸ್‌ಕೆ ಗುರುತಿಸಿಕೊಂಡಿದೆ. ಸದ್ಯ ಕೊರೊನಾದಿಂದ ಚೇತರಿಸಿಕೊಂಡಿರುವ ಸಿಎಸ್‌ಕೆ ತಂಡ, ಸೆಪ್ಟೆಂಬರ್ 4ರಿಂದ ಅಭ್ಯಾಸ ಆರಂಭಿಸಲಿದೆ. ಅಂದ್ಹಾಗೆ, ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನ ಕೆಲ ಅಭ್ಯಾಸ ಪಂದ್ಯಗಳನ್ನು ನಡೆಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟನೆ ನೀಡಿಲ್ಲ.

Story first published: Friday, September 4, 2020, 9:56 [IST]
Other articles published on Sep 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X