ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅಂಪೈರ್ ನಿರ್ಧಾರಕ್ಕೆ ಗರಂ ಆದ ಕೂಲ್ ಕ್ಯಾಪ್ಟನ್ ಧೋನಿ

IPL 2020: CSK vs RR, MS Dhoni again argued with the umpire

ಶಾರ್ಜಾ: ಅಂಪೈರ್ ನಿರ್ಧಾರಕ್ಕೆ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಗರಂ ಆಗಿರುವ ದೃಶ್ಯ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಕಾಣಸಿಕ್ಕಿದೆ. ಶಾರ್ಜಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಧೋನಿ ತಾಳ್ಮೆ ಕಳೆದುಕೊಂಡರು. ಘಟನೆ ನಡೆದಿದ್ದು ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ. ಆರ್‌ಆರ್ ಇನ್ನಿಂಗ್ಸ್‌ನಲ್ಲಿ 18ನೇ ಓವರ್‌ನಲ್ಲಿ ದೀಪಕ್ ಚಹಾರ್ ಅವರ ಎಸೆತದ ವೇಳೆ ಆರ್‌ಆರ್ ಬ್ಯಾಟ್ಸ್‌ಮನ್ ಟಾಮ್ ಅವರನ್ನು ಸಿ ಸಂಶುದ್ದೀನ್ ಅವರು ಔಟ್ ಎಂದು ಘೋಷಿಸಿದ್ದರು.

ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು!ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಆ ವೇಳೆ ಟಾಮ್ ಕರನ್ ತಬ್ಬಿಬ್ಬಾದರು. ಯಾಕೆಂದರೆ ಡಿಸಿಶನ್ ರಿವ್ಯೂ ಸಿಸ್ಟಮ್ ಅನುಕೂಲ ತೆಗೆದುಕೊಳ್ಳೋಕೆ ಡಿಆರ್‌ಎಸ್ ಆಯ್ಕೆ ಇರಲಿಲ್ಲ. ಇದ್ದಿದ್ದ ಒಂದೇ ಆಯ್ಕೆಯನ್ನು ರಾಹುಲ್ ತೆವಾಟಿಯಾ ವೇಸ್ಟ್ ಮಾಡಿಕೊಂಡಿದ್ದರು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಅಂಪೈರ್‌ಗೆ ತಮ್ಮ ತಪ್ಪಿನ ಅರಿವಾಯಿತು. ಲೆಗ್ ಅಂಪೈರ್ ವಿನೀತ್ ಕುಲಕರ್ಣಿ ಜೊತೆಗೆ ಮಾತುಕತೆ ನಡೆಸಿದ ಸಂಶುದ್ದೀನ್ ನಿರ್ಧಾರವನ್ನು ಟಿವಿ ಅಂಪೈರ್‌ನತ್ತ ಪರಿಶೀಲನೆಗೆ ಕಳುಹಿಸಿದರು.

ಔಟ್ ತೀರ್ಪು ರಿವರ್ಸ್

ಔಟ್ ತೀರ್ಪು ರಿವರ್ಸ್

ಡಿಸಿಶನ್ ರಿವ್ಯೂ ಸಿಸ್ಟಮ್‌ನಲ್ಲಿ ಟಾಮ್ ಕರಣ್ ಅವರನ್ನು ತಾಗಿ ಹೋಗಿದ್ದ ಚೆಂಡನ್ನು ಧೋನಿ ಕ್ಯಾಚ್ ಮಾಡಿರಲಿಲ್ಲ. ಚೆಂಡು ಗ್ಲೌಸ್ ಕೂಡ ತಾಗಿರಲ್ಲ. ಹೀಗಾಗಿ ಔಟ್ ತೀರ್ಪನ್ನು ರಿವರ್ಸ್ ಮಾಡಲಾಯ್ತು. ಆದರೆ ಇದು ಸಿಎಸ್‌ಕೆ ನಾಯಕ ಧೋನಿಗೆ ಸರಿ ಕಾಣಲಿಲ್ಲವೋ ಏನೋ.

ಅಂಪೈರ್ ಜೊತೆಗೆ ಧೋನಿ ವಾಗ್ವಾದ

ಅಂಪೈರ್ ಜೊತೆಗೆ ಧೋನಿ ವಾಗ್ವಾದ

ಔಟ್ ಕೊಟ್ಟಿದ್ದ ಟಾಮ್ ಕರನ್ ಅವರನ್ನು ಮತ್ತೆ ಆಡಲು ಬಿಟ್ಟಿದ್ದಕ್ಕೆ ಸಿಟ್ಟಾದ ಧೋನಿ ಅಂಪೈರ್ ಜೊತೆಗೆ ಸಣ್ಣಗೆ ವಾಗ್ವಾದ ನಡೆಸಿದರು. ಮತ್ತೆ ಸುಮ್ಮನಾದರು. ಧೋನಿ ಇದೇ ರೀತಿ ಕಳೆದ ವರ್ಷ ಜೈಪುರ್‌ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆಯೂ ಅಂಪೈರ್ ಜೊತೆಗೆ ಸಿಟ್ಟಾಗಿದ್ದರು.

ಹಿಂದೆಯೂ ಇದೇ ರೀತಿಯ ಘಟನೆ

ಹಿಂದೆಯೂ ಇದೇ ರೀತಿಯ ಘಟನೆ

ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ದೇಸಿ ಅಂಪೈರ್ ಉಲ್ಲಾಸ್ ಗಂಧೆ ಜೊತೆಗೆ ಆವತ್ತು ಮೈದಾನಕ್ಕೆ ಬಂದು ಧೋನಿ ವಾಗ್ವಾದ ನಡೆಸಿದ್ದರು. ಆರ್‌ಆರ್ ಬೌಲರ್ ಹಾಕಿದ್ದ ಫುಲ್‌ಟಾಸ್ ಎಸೆತವೊಂದನ್ನು ಅಂಪೈರ್ ನೋ ಬಾಲ್ ಕೊಡಲಿಲ್ಲ ಎಂದು ಆವತ್ತು ಧೋನಿ ಸಿಟ್ಟಾಗಿದ್ದರು.

ಸಾಕ್ಷಿ ಧೋನಿ ಟ್ವೀಟ್ ಡಿಲೀಟ್

ಸಾಕ್ಷಿ ಧೋನಿ ಟ್ವೀಟ್ ಡಿಲೀಟ್

ಕಳೆದ ವರ್ಷ ತಾಳ್ಮೆ ಕಳೆದು ಮೈದಾನಕ್ಕಿಳಿದಿದ್ದ ಧೋನಿಗೆ ಎಲ್ಲೆ ಮೀರಿ ವರ್ತಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ಈ ಬಾರಿಯ ಘಟನೆಗೆ ಸಂಬಂಧಿಸಿ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈಗ ಆ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

Story first published: Wednesday, September 23, 2020, 15:19 [IST]
Other articles published on Sep 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X