ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿ ಡೇವಿಡ್ ವಾರ್ನರ್

IPL 2020: David Warner on the verge of reaching a major milestone

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಎಲಿಮಿನೇಟರ್‌ನಲ್ಲಿ ಕಣಕ್ಕಿಳಿಯುತ್ತಿದೆ. ಈ ಪಂದ್ಯವನ್ನು ಗೆದ್ದು ಫೈನಲ್ ಆಸೆಯನ್ನು ಜೀವಂತವಾಗಿಸಿಕೊಳ್ಳಲು ಎರಡು ತಂಡಗಳು ಕೂಡ ಪ್ರಯತ್ನಿಸಲಿದೆ. ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಮಹತ್ವದ ಮೈಲಿಗಲ್ಲೊಂದರ ಸನಿಹದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಈವರೆಗೆ 195 ಸಿಕ್ಸರ್ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಐದು ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ 200 ಸಿಕ್ಸರ್ ಸಿಡಿಸುವುದರ ಜೊತೆಗೆ ಈ ಸಾಧನೆ ಮಾಡಿದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ವಾರ್ನರ್ ಪಾತ್ರರಾಗಲಿದ್ದಾರೆ.

ನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾ

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ಮೊದಲನೇ ಸ್ಥಾನದಲ್ಲಿದ್ದಾರೆ. ಗೇಲ್ 349 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಎನಿ ಡಿವಿಲಿಯರ್ಸ್(235) ಇದ್ದರೆ ಮೂರನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ(216) ಇದ್ದಾರೆ.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಇತ್ತೀಚೆಗಷ್ಟೇ ಮತ್ತೊಂದು ಮಹತ್ವ ದ ಐಪಿಎಲ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 500+ ರನ್ ಗಳಿಸಿದ ಸಾಧನೆ ಮಾಡಿದ್ದಾರೆ ವಾರ್ನರ್. ಹೈದರಾಬಾದ್ ನಾಯಕ ಈ ಸಾಧನೆಯನ್ನು 6ನೇ ಬಾರಿಗೆ ಮಾಡಿದ್ದಾರೆ. ವಿರಾಟ್ ಕೊಹ್ಲಿಯೂ ಈ ಸಾಧನೆಯ ಸನಿಹದಲ್ಲಿದ್ದು 40 ರನ್‌ಗಳ ಹಿನ್ನಡೆಯಲ್ಲಿದ್ದಾರೆ.

Story first published: Friday, November 6, 2020, 18:33 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X