ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೊಹ್ಲಿಯ ಪ್ರಮುಖ ದಾಖಲೆ ಮುರಿಯಲು ವಾರ್ನರ್‌ಗೆ ಬೇಕು 19 ರನ್!

ipl 2020: David Warner stands 19 runs short of breaking Virat Kohlis massive IPL record

ಸನ್‌ರೈಸರ್ಸ್ ಹೈದರಾಬಾದ್ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಫಾರ್ಮ್ ಮುಂದುವರಿಸಿರುವ ಡೇವಿಡ್ ವಾರ್ನರ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕೇವಲ 19 ರನ್ ಸಿಡಿಸಿದರೆ ಮಹತ್ವದ ಮೈಲಿಗಲ್ಲೊಂದನ್ನು ತಲುಪುವ ಜೊತೆಗೆ ಕೊಹ್ಲಿ ಹೆರಿಸಲ್ಲಿದ್ದ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

5000 ರನ್‌ಗಳ ಮಹತ್ವದ ಮೈಲಿಗಲ್ಲನ್ನು ಅತ್ಯಂತ ವೇಗವಾಗಿ ಸಾಧಿಸಿದ ಆಟಗಾರ ಎಂಬ ಪ್ರಮುಖ ದಾಖಲೆಯನ್ನು ವಾರ್ನರ್ ತಮ್ಮ ಹೆಸರಿಗೆ ಬರೆದುಕೊಳ್ಳಲು ಸಜ್ಜಾಗಿದ್ದಾರೆ. ಈವರೆಗೆ ಈ ವಿಶೇಷ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 157 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಡೇವಿಡ್ ವಾರ್ನರ್ ಇಂದು ಈ ಸಾಧನೆಯನ್ನು ಪೂರೈಸಿದರೆ 134ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದಂತಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕೇವಲ 16 ರನ್ ಗಳಿಸಿದರೆ ಐಪಿಎಲ್‌ನಲ್ಲಿ 5000 ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಈವರೆಗೆ ಈ ವಿಶೇಷ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ ಮಾತ್ರವೇ ಇದ್ದಾರೆ. ಈ ಮೂವರು ಕೂಡ ಭಾರತೀಯ ಆಟಗಾರರೇ ಆಗಿದ್ದಾರೆ.

ಎದುರಾಳಿಯನ್ನು ಕಾಡುತ್ತಿದೆ RCB ಸ್ಪಿನ್ ಜೋಡಿ: ಚಹಾಲ್‌ ಜೊತೆಗೆ ಬೌಲಿಂಗ್ ಮಾಡುವುದೇ ದೊಡ್ಡ ಸಂತೋಷ ಎಂದ ಸುಂದರ್ಎದುರಾಳಿಯನ್ನು ಕಾಡುತ್ತಿದೆ RCB ಸ್ಪಿನ್ ಜೋಡಿ: ಚಹಾಲ್‌ ಜೊತೆಗೆ ಬೌಲಿಂಗ್ ಮಾಡುವುದೇ ದೊಡ್ಡ ಸಂತೋಷ ಎಂದ ಸುಂದರ್

ಡೇವಿಡ್ ವಾರ್ನರ್ ಈ ವಿಶೇಷ ಮೈಲಿಗಲ್ಲನ್ನು ಇಂದಿನ ಪಂದ್ಯದಲ್ಲಿ ತಲುಪುವ ಸಾಧ್ಯತೆ ದಟ್ಟವಾಗಿದೆ. ಈ ಸಾಧನೆಯನ್ನು ಮಾಡಿದರೆ ವಿದೇಶಿ ಕ್ರಿಕೆಟಿಗನಾಗಿ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ವಾರ್ನರ್ ಪಾತ್ರರಾಗಲಿದ್ದಾರೆ.

ಸನ್‌ರೈಸರ್ಸ್ ವಿರುದ್ಧದ ಪಂದ್ಯ ಗೆಲ್ಲಲು ಸಿಎಸ್‌ಕೆಗೆ ಸಲಹೆ ನೀಡಿದ ಬ್ರಾಡ್ ಹಾಗ್ಸನ್‌ರೈಸರ್ಸ್ ವಿರುದ್ಧದ ಪಂದ್ಯ ಗೆಲ್ಲಲು ಸಿಎಸ್‌ಕೆಗೆ ಸಲಹೆ ನೀಡಿದ ಬ್ರಾಡ್ ಹಾಗ್

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಪಟ್ಟಿಯಲ್ಲಿ ಕೊಹ್ಲಿ 184 ಪಂದ್ಯಗಳಲ್ಲಿ 5668 ರನ್‌ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 193 ಪಂದ್ಯಗಳಲ್ಲಿ 5368 ರನ್‌ಗಳಿಸಿರುವ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. 195 ಪಂದ್ಯಗಳಲ್ಲಿ 5114 ರನ್‌ಗಳಿಸಿರುವ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

Story first published: Wednesday, October 14, 2020, 10:30 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X