ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೂರ್ನಿಯ ಮೊದಲ ಸೋಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯೆ

Ipl 2020: Dc Coach Ricky Ponting Says We Were Outplayed By Sunrisers Hyderabad

ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮೊದಲ ಸೋಲನ್ನು ಅನುಭವಿಸಿದೆ. ಈ ಸೋಲಿನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದು ಸನ್‌ರೈಸರ್ಸ್ ತಂಡ ನಮ್ಮನ್ನು ಎಲ್ಲಾ ವಿಭಾಗಗಳಲ್ಲೂ ಮೀರಿಸಿತು ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ 163 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 147 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಸಂಭ್ರಮಿಸಿತು.

ಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒ

"ತಂಡಗಳ ಪರಿಸ್ಥಿತಿಗಳು ಭಿನ್ನವಾಗಿತ್ತು ಎಂದು ನಾನು ಭಾವಿಸುವುದಿಲ್ಲ. ಅಂಗಳ ದೊಡ್ಡ ದೊಡ್ಡದಾಗಿದೆ. ಬೌಂಡರಿ ಗೆರೆಗಳು ಇಲ್ಲಿ ದೂರದಲ್ಲಿದೆ. ಆದರೆ ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನಮಗಿಂತ ಅದ್ಭುತವಾದ ಪ್ರದರ್ಶನ ನೀಡಿತು" ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ನಮ್ಮ ತಂಡದ ಅತ್ಯುತ್ತಮ ಪ್ರದರ್ಶನ ವ್ಯಕ್ತವಾಗಲಿಲ್ಲ. ಸೈನ್‌ರೈಸರ್ಸ್ ತಂಡದಲ್ಲಿ ಉನ್ನತ ಕ್ರಮಾಂಕದ ಆಟಗಾರರು ಉತ್ತಮ ಆಟವನ್ನು ಪ್ರದರ್ಶಿಸಿದರು. ಕೆಲ ಆಟಗಾರರು ಬೃಹತ್ ರನ್ ಕಲೆ ಹಾಕುವಲ್ಲಿ ಯಶಸ್ವಿಯಾದರು. ಇದು ಆಟದಲ್ಲಿ ಹೆಚ್ಚು ವ್ಯತ್ಯಾಸವಾಗಲು ಕಾರಣವಾಯಿತು ಎಂದು ಪಾಂಟಿಂಗ್ ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಕ್ರಮಾಂಕದ ಬಗ್ಗೆ ರಿಕಿ ಪಾಂಟಿಂಗ್ ಮಾತನಾಡಿದರು. ಬ್ಯಾಟ್ಸ್‌ಮನ್‌ಗಳ ಪೈಕಿ ಯಾರಾದರೂ ಒಬ್ಬರು ದೊಡ್ಡ 60 ಅಥವಾ 70 ರನ್ ಕಲೆ ಹಾಕಲು ಸಾಧ್ಯವಾಗಿದ್ದರೆ ಫಲಿತಾಂಶ ನಮ್ಮ ಪರವಾಗಿರುತ್ತಿತ್ತು. ನಮಗಿಂತ ಚೆನ್ನಾಗಿ ಎಸ್‌ಆರ್‌ಹೆಚ್ ತಂಡದ ಬೌಲರ್‌ಗಳು ಯಾರ್ಕರ್‌ಗಳನ್ನು ಕಾರ್ಯಗತಗೊಳಿಸಿದರು ಎಂದು ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.

Story first published: Wednesday, September 30, 2020, 15:32 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X