ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ ಬಗ್ಗೆ ಕಾಮೆಂಟ್ ಮಾಡಿ ವಿವಾದ ಸೃಷ್ಠಿಸಿದ ಡೆಲ್ಲಿ ನಾಯಕ ಶ್ರೇಯಸ್

IPL 2020: Dcs Skipper Shreyas Iyers Comments On Receiving Gangulys Help Raises Questions

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಅವರು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ ಸೌರವ್ ಗಂಗೂಲಿ ಬಗ್ಗೆ ಕಾಮೆಂಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಪಂದ್ಯದ ವೇಳೆ ಶ್ರೇಯಸ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು.

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 20) ನಡೆದ ಐಪಿಎಲ್ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಡಿದ್ದವು. ಈ ಪಂದ್ಯ ಸೂಪರ್ ಓವರ್‌ನತ್ತ ಸಾಗಿತ್ತು. ಸೂಪರ್‌ ಓವರ್‌ನಲ್ಲಿ ಡೆಲ್ಲಿ ತಂಡ ಜಯಿಸಿತ್ತು.

ಐಪಿಎಲ್ 2020: ಆರ್‌ಸಿಬಿ vs ಎಸ್‌ಆರ್‌ಹೆಚ್, ಟಾಸ್ ವರದಿ, ಅಂತಿಮ ತಂಡಗಳುಐಪಿಎಲ್ 2020: ಆರ್‌ಸಿಬಿ vs ಎಸ್‌ಆರ್‌ಹೆಚ್, ಟಾಸ್ ವರದಿ, ಅಂತಿಮ ತಂಡಗಳು

ಪಂದ್ಯ ಗೆದ್ದ ಬಳಿಕ ಅಭಿಪ್ರಾಯ ಹಂಚಿಕೊಳ್ಳುವಾಗ ಶ್ರೇಯಸ್, 'ತಂಡದಲ್ಲಿ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಂಥವರನ್ನು ಪಡೆದಿರುವುದು ನಮ್ಮ ಅದೃಷ್ಟ. ಗಂಗೂಲಿ ಕೂಡ ನಮಗೆ ನೆರವು ನೀಡುತ್ತಿದ್ದಾರೆ,' ಎಂದು ಹೇಳಿದ್ದರು.

ಐಯ್ಯರ್ ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇತರ ಫ್ರಾಂಚೈಸಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಕಳೆದ ವರ್ಷ ಡೆಲ್ಲಿ ತಂಡಕ್ಕೆ ದಾದಾ ಮಾರ್ಗದರ್ಶನಕರಾಗಿದ್ದರು ನಿಜ. ಇದೇ ಕಾರಣಕ್ಕೆ ಐಯ್ಯರ್ ಸಾಮಾನ್ಯ ಅರ್ಥದಲ್ಲಿ ದಾದಾ ಅವರಿಂದ ನಮಗೆ ಮಾರ್ಗದರ್ಶನ ಸಿಗುತ್ತಿದೆ, ಸಹಾಯವಾಗುತ್ತಿದೆ ಎಂದಿರಬಹುದು.

ಆದರೆ ಸದ್ಯ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರು ಯಾವುದೇ ತಂಡಕ್ಕೆ ವೈಯಕ್ತಿಕವಾಗಿ ಬೆಂಬಲಿಸುವಂತಿಲ್ಲ. ಮಾರ್ಗದರ್ಶನ ನೀಡುವಂತಿಲ್ಲ. ಯಾಕೆಂದರೆ ಬಿಸಿಸಿಐಯಲ್ಲಿದ್ದು ಬೇರೆ ಒಂದು ತಂಡಕ್ಕ ಬೆಂಬಲ ನೀಡಿದರೆ ಅಂದು ಹಿತಾಸಕ್ತಿ ಸಂಘರ್ಷವಾಗುತ್ತದೆ ಎಂಬ ಮಾತುಗಳು ಕೇಳಿಬಂದಿದೆ.

Story first published: Tuesday, September 22, 2020, 10:04 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X