ಐಪಿಎಲ್ 2020: ಡೆಲ್ಲಿ vs ಪಂಜಾಬ್: ಪಂದ್ಯಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ!

ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2020 ಟೂರ್ನಿಯ ಮೊದಲ ಪಂದ್ಯವನ್ನಾಡಲು ಕಣಕ್ಕಿಳಿದಿದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನವೇ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಆಘಾತಕ್ಕೆ ಒಳಗಾಗಿದೆ. ತಮಡದ ವೇಗದ ಅನುಭವಿ ವೇಗದ ಬೌಲರ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಡೆಲ್ಲಿ ತಂಡದ ಅನುಭವಿ ವೇಗಿ ಇಶಾಂತ್ ಶರ್ಮಾ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಬ್ಯರಾಗುತ್ತಿದ್ದಾರೆ. ಅಭ್ಯಾಸದ ಸಂದರ್ಭದಲ್ಲಿ ಬೆನ್ನು ನೋವಿಗೆ ತುತ್ತಾಗೊರುವ ಇಶಾಂತ್ ಶರ್ಮಾ ಮೊದಲ ಪಂದ್ಯದ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ.

ಗೆಲುವಿನ ಸಂತಸದ ಜೊತೆಗೆ ಕಹಿ ಸುದ್ದಿ ಕೊಟ್ಟ ಚೆನ್ನೈ ಕೋಚ್!

ಕ್ರಿಕ್ ಬಝ್ ವರದಿಯ ಪ್ರಕಾರ ಇಶಾಂತ್ ಶರ್ಮಾ ಅಭ್ಯಾಸದ ಸಂದರ್ಭದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆದರೆ ಇಶಾಂತ್ ಶರ್ಮಾ ಗಯದ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿಗಳು ದೊರೆತಿಲ್ಲ. ಮೊದಲ ಪಂದ್ಯವನ್ನಾಡುವ ಮುನ್ನ ದಿನ ಇಶಾಂತ್ ಗಯಗೊಂಡಿದ್ದಾರೆ ಎನ್ನಲಾಗಿದೆ. ಇಶಾಂತ್ ಈ ಹಿಂದೆಯೂ ಅನೇಕ ಬಾರಿ ಗಾಯಕ್ಕೆ ಒಳಗಾಗಿ ಪಂದ್ಯಗಳಿಂದ ತಪ್ಪಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಳ್ಳಲು ಇಶಾಂತ್ ಸಿದ್ಧರಾಗಿದ್ದರು. ಇಶಾಂತ್ ಶರ್ಮಾಗೆ ಕಗಿಸೋ ರಬಡಾ ಸಾಥ್ ನೀಡಲಿದ್ದರು. ಈಗ ಇಶಾಂತ್ ಸ್ಥಾನಕ್ಕೆ ಇನ್ನೋರ್ವ ವೇಗಿ ಮೋಹಿತ್ ಶರ್ಮಾ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನದ ಸ್ಟಾರ್ ಕ್ರಿಕೆಟರ್ ಅಲಭ್ಯ!

ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದರೆ ಕಳೆದ ಬಾರಿ ಅತ್ಯುತ್ತಮ ಪ್ರದರ್ಸನ ನೀಡಿ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಇಶಾಂತ್ ಶರ್ಮಾ ಮೊದಲ ಅಲಭ್ಯತೆ ತಂಡಕ್ಕೆ ಸ್ವಲ್ಪ ಹಿನ್ನೆಡೆಯಾಗುವುದರಲ್ಲಿ ಆಶ್ಚರ್ಯವಿಲ್ಲ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 20, 2020, 19:48 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X