ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆಲ್ಲಿಗೆ ಟೂರ್ನಿಯ ಮೊದಲ ಸೋಲುಣಿಸಿದ ಹೈದರಾಬಾದ್

IPL 2020: DC vs SRH Match 11 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 29) ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 15 ರನ್ ಜಯ ಗಳಿಸಿದೆ. ಎಸ್‌ಆರ್‌ಎಚ್‌ಗೆ ಇದು ಟೂರ್ನಿಯ ಮೊದಲ ಗೆಲುವಾದರೆ ಡಿಸಿಗೆ ಇದು ಟೂರ್ನಿಯ ಮೊದಲ ಸೋಲು.

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ನಾಯಕ ಡೇವಿಡ್ ವಾರ್ನರ್ 45 (33 ಎಸೆತ), ಜಾನಿ ಬೇರ್ಸ್ಟೋವ್ 53 (48 ಎಸೆತ), ಕೇನ್ ವಿಲಿಯಮ್ಸನ್ 41 (26 ಎಸೆತ), ಅಬ್ದುಲ್ ಸಮದ್ 12 ರನ್ ಸೇರಿಸಿದರು. ಎಸ್‌ಆರ್‌ಎಚ್ 20 ಓವರ್‌ಗೆ 4 ವಿಕೆಟ್ ಕಳೆದು 162 ರನ್ ಮಾಡಿತು.

ಹೀಗೆ ಆಗದಿದ್ರೆ CSK ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ: ಬ್ರೆಟ್‌ ಲೀಹೀಗೆ ಆಗದಿದ್ರೆ CSK ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ: ಬ್ರೆಟ್‌ ಲೀ

ಗುರಿ ಬೆನ್ನತ್ತಿದ ಡೆಲ್ಲಿ, ಶಿಖರ್ ಧವನ್ 34, ಶ್ರೇಯಸ್ ಐಯ್ಯರ್ 17, ರಿಷಭ್ ಪಂತ್ 28, ಶಿಮ್ರನ್ ಹೆಟ್ಮೈರ್ 21, ಮಾರ್ಕಸ್ ಸ್ಟೋಯ್ನಿಸ್ 11, ಕಾಗಿಸೊ ರಬಾಡ ಅಜೇಯ 15 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 147 ರನ್ ಗಳಿಸಿತು.

RCB ಗೆಲ್ಲಬೇಕಾದ್ರೆ ಡೆತ್‌ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್RCB ಗೆಲ್ಲಬೇಕಾದ್ರೆ ಡೆತ್‌ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್

ಸನ್‌ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೊ ರಬಾಡ 2, ಅಮಿತ್ ಮಿಶ್ರಾ 2 ವಿಕೆಟ್ ಪಡೆದರೆ, ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಭುವನೇಶ್ವರ್ ಕುಮಾರ್ 2, ರಶೀದ್ ಖಾನ್ 3, ಖಲೀಲ್ ಅಹ್ಮದ್ ಮತ್ತು ಕೆ ನಟರಾಜನ್ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.

Story first published: Wednesday, September 30, 2020, 10:01 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X