ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹೈದರಾಬಾದ್ ವಿರುದ್ಧ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟ ಡೆಲ್ಲಿ

IPL 2020: DC vs SRH qualifier 2, highlights in kannada

ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಡೆಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮಂಗಳವಾರ ನಡೆಯುವ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಅತ್ಯುತ್ತಮ ಆರಂಭವನ್ನು ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಶಿಖರ್ ಧವನ್ ಜೋಡಿ ಮೊದಲ ವಿಕೆಟ್‌ಗೆ 86 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಮೇಲುಗೈ ಒದಗಿಸಿದರು. ಬಳಿಕ ಶಿಮ್ರಾನ್ ಹೇಟ್ಮೇಯರ್ ಕೂಡ ಸ್ಪೋಟಕ ಪ್ರದರ್ಶನ ನೀಡಿದರು.

190 ರನ್‌ಗಳ ಗುರಿ ನಿಗದಿ

190 ರನ್‌ಗಳ ಗುರಿ ನಿಗದಿ

vಅಂತಿಮ ವಾಗಿ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 189 ರನ್ ಗಳಿಸಲು ಯಶಸ್ವಿಯಾಯಿತು. ಹೈದರಾಬಾದ್ ಪರ ರಶೀದ್ ಖಾನ್ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ರನ್‌ಗೆ ಕಡಿವಾಣ ಹಾಕಿದರು. ಆದರೆ ಜೇಸನ್ ಹೋಲ್ಡರ್ ಹಾಗೂ ನದೀಮ್ ಸಾಕಷ್ಟು ದುಬಾರಿಯಾದರು.

ಹೈದರಾಬಾದ್ ನೀರಸ ಆರಂಭ

ಹೈದರಾಬಾದ್ ನೀರಸ ಆರಂಭ

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 190 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ಆಘಾತ ಅನುಭವಿಸಿತು. ವಾರ್ನರ್ ಕೇವಲ 2 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನೋರ್ವ ಆರಂಭಿಕ ಆಟಗಾರ ಪ್ರಿಯಮ್ ಗರ್ಗ್ 17 ರನ್‌ಗಳಿಗೆ ಔಟಾದರು, ಮನೀಶ್ ಪಾಂಡೆ ಆಟವೂ ಕೂಡ 21 ರನ್‌ಗೆ ಅಂತ್ಯವಾಯಿತು. ಜೇಸನ್ ಹೋಲ್ಡರ್ 11 ರನ್‌ಗೆ ವಿಕೆಟ್ ಒಪ್ಪಿಸಿದರು.

ಕೇನ್-ಸಮದ್ ಪ್ರತಿರೋಧ

ಕೇನ್-ಸಮದ್ ಪ್ರತಿರೋಧ

ಆದರೆ ಕೇನ್ ವಿಲಿಯಮ್ಸನ್ ಹಾಗೂ ಅಬ್ದುಲ್ ಸಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಲು ಆರಂಭಿಸಿದಾಗ ಹೈದರಾಬಾದ್ ತಂಡದ ಗೆಲುವಿನ ಕನಸಿಗೆ ಮತ್ತೆ ರೆಕ್ಕೆ ಹುಟ್ಟಿಕೊಂಡಿತು. ಆದರೆ 57 ರನ್‌ಗಳ ಜೊತೆಯಾಟ ನೀಡಿ ಈ ಜೋಡಿ ಬೇರ್ಪಡುವುದರೊಂದಿಗೆ ಈ ಆಸೆಗೆ ಹೈದರಾಬಾದ್ ಅಂತ್ಯ ಹಾಡಿತು. ಅಂತಿಮವಾಗಿ 17 ರನ್‌ಗಳ ಅಂತರದಿಂದ ಡೆಲ್ಲಿ ಗೆದ್ದು ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದುಕೊಂಡಿದೆ.

ಮಂಗಳವಾರ ಫೈನಲ್

ಮಂಗಳವಾರ ಫೈನಲ್

ಮಂಗಳವಾರ 13ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದಿರುವ ಮುಂಬೈ ಸವಾಲು ಹಾಕಲಿದೆ. ಈ ಸವಾಲಿನಲ್ಲಿ ಗೆದ್ದವರು ಟೂರ್ನಿಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಲಿದ್ದಾರೆ.

Story first published: Monday, November 9, 2020, 0:01 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X