ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ದಾರಿ ಹಿಡಿದ ಶ್ರೇಯಸ್ ಪಡೆ: ವಿಶೇಷ ಜೆರ್ಸಿ ಧರಿಸಲಿದೆ ಡಿಸಿ

IPL 2020: Delhi Capitals Follows RCB; They will be wearing Thank you COVID warrior jersey

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾರಿಯನ್ನೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಸರಿಸಲು ನಿರ್ಧರಿಸಿದೆ. ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ ವೇಳೆ ಆರ್‌ಸಿಬಿಯಂತೆ ಡಿಸಿ ಕೂಡ ಕೋವಿಡ್-19 ಹೀರೋಗಳಿಗೆ ಗೌರವ ಸೂಚಿಸಿ ವಿಶೇಷ ಜೆರ್ಸಿ ಧರಿಸಲಿದೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿರುವ ಐಪಿಎಲ್‌ ಪಂದ್ಯಗಳ ವೇಳೆ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 'ಥ್ಯಾಂಕ್ಯೂ ಕೋವಿಡ್ ವಾರಿಯರ್ಸ್' ಎಂದು ಪ್ರಿಂಟ್ ಹಾಕಲಾಗಿರುವ ವಿಶಿಷ್ಠ ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

ಕೋವಿಡ್-19 ಹತ್ತಿಕ್ಕಲು ನೆರವು ನೀಡಿದ ಹೀರೋಗಳಿಗೆ ಗೌರವ ಸೂಚಿಸಿ 'ಮೈ ಕೋವಿಡ್ ಹೀರೋಸ್' (ನನ್ನ ಕೋವಿಡ್ ವೀರರು) ಎಂಬ ಹೆಸರಿನ ಜೆರ್ಸಿಯನ್ನು ಆರ್‌ಸಿಬಿ ಹೊರ ತಂದಿತ್ತು. ಇದೇ ರೀತಿ ಡಿಸಿ ಕೂಡ ಜೆರ್ಸಿ ಬಿಡುಗಡೆ ಮಾಡಿದೆ. ಕೊರೊನಾ ವೀರರಿಗೆ ನಾವು ಸಲ್ಲಿಸುತ್ತಿರುವ ಚಿಕ್ಕ ಗೌರವವಿದು ಎಂದು ಡೆಲ್ಲಿ ಹೇಳಿದೆ.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಪಟ್ಟಿಯಲ್ಲಿ ಕನ್ನಡತಿ ಮಾಯ!ಈ ಐಪಿಎಲ್‌ ಸೀಸನ್‌ನ ನಿರೂಪಕರ ಪಟ್ಟಿಯಲ್ಲಿ ಕನ್ನಡತಿ ಮಾಯ!

'ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸಂಪೂರ್ಣ ಟೂರ್ನಿಯ ಅಧಿಕೃತ ಪಂದ್ಯಗಳ ಜೆರ್ಸಿಯು 'ಥ್ಯಾಂಕ್ಯೂ ಕೋವಿಡ್ ವಾರಿಯರ್ಸ್' ಸಂದೇಶ ಹೊಂದಿರಲಿದೆ,' ಎಂದು ಡಿಸಿ ಹೇಳಿಕೆಯ ಮೂಲಕ ತಿಳಿಸಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.

Story first published: Saturday, September 19, 2020, 11:10 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X