ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ: ಪೃಥ್ವಿ ಶಾ ಹೇಳಿಕೆ

IPL 2020: Delhi Capitals is going in the right directions says Prithvi Shaw

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಹೆಚ್ಚಾಗಿ ಯುವ ಹಾಗೂ ಭಾರತೀಯ ಆಟಗಾರರನ್ನೇ ನೆಚ್ಚಿಕೊಂಡಿರುವ ಈ ತಂಡ ಸದ್ಯ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಆರ್‌ಸಿಬಿ ವಿರುದ್ಧದ ಗೆಲುವು ಡೆಲ್ಲಿ ತಂಡಕ್ಕೆ ಸಾಕಷ್ಟು ಉತ್ಸಾಹವನ್ನು ತುಂಬಿದೆ.

ಸೋಮವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವನ್ನು ಮಣಿಸಿದ ಬಳಿಕ ಪೃಥ್ವಿ ಶಾ ಉತ್ಸಾಹದ ಮಾತುಗಳನ್ನಾಡಿದ್ದಾರೆ. ತಂಡ ಸಾಗುತ್ತಿರುವ ರಿತಿಯ ಬಗ್ಗೆ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಶಾ ಭರ್ಜರ 42ರನ್‌ಗಳನ್ನು ಸಿಡಿಸಿ ಮಿಂಚಿದರು. ಆದರೆ ಟೂರ್ನಿಯಲ್ಲಿ ಮೂರನೇ ಅರ್ಧ ಶತಕಗಳಿಸುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು.

ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್

"ಪವರ್‌ಪ್ಲೇ ಬಳಿಕ ತಂಡವನ್ನು ಮತ್ತಷ್ಟ ಮೇಲಕ್ಕೇರಿಸಬಹುದು ಎಂದುಕೊಂಡಿದ್ದೆ. ದುರದೃಷ್ಠವಶಾತ್ ವಿಕೆಟ್ ಕಳೆದುಕೊಂಡೆ. ಇದೆಲ್ಲ ಆಟದಲ್ಲಿ ಸಾಮಾನ್ಯ, ಮುಂದಿನ ಪಂದ್ಯದ ಬಗ್ಗೆ ಈಗ ಚಿತ್ತವನ್ನು ಹರಿಸಿದ್ದೇನೆ ಎಂದು ಪೃಥ್ವಿ ಶಾ ಹೇಳಿಕೆಯನ್ನು ನೀಡಿದ್ದಾರೆ.

ಟೂರ್ನಿಯಲ್ಲಿ ಈವರೆಗೆ ನಡೆದ ಪಂದ್ಯದಲ್ಲಿ ಬಹುತೇಕ ನಾವು ಅಂದುಕೊಂಡ ರೀತಿಯಲ್ಲೇ ನಡೆದಿದೆ. ನನ್ನ ಪ್ರಕಾರ ಇದೊಂದು ಅತ್ಯುತ್ತಮ ಹಾಗೂ ಸಕಾರಾತ್ಮಕ ಆರಂಭ. ನಾವು ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಅಭ್ಯಾಸದ ಸಂದರ್ಭದಲ್ಲಿ ನಾವು ರೂಪಿಸುವ ರಣತಂತ್ರಗಳನ್ನು ಪಂದ್ಯದ ಸಂದರ್ಭದಲ್ಲಿ ಸರಿಯಾಗಿ ಕಾರ್ಯಗೊಳಿಸಿದರೆ ಸಾಕು. ನಾವು ಅದನ್ನು ಮಾಡುತ್ತಿದ್ದೇವೆ. ಬ್ಯಾಟಿಂಗ್ ಬೌಲಿಂಗ್ ಎಲ್ಲವೂ ಸರಿಯಾಗಿ ಸಾಗುತ್ತಿದೆ. ಕೌಶಲ್ಯದ ವಿಚಾರದಲ್ಲೂ ನಮ್ಮ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಐಪಿಎಲ್ 2020: ಐಪಿಎಲ್ 2020: "ಇದೇ ಮೊದಲು ಇದೇ ಕೊನೆ": ಮಂಕಡಿಂಗ್ ಆರ್‌ ಅಶ್ವಿನ್ ಬಹಿರಂಗ ಎಚ್ಚರಿಕೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಈವರೆಗೆ ಐದು ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಮಾತ್ರವೇ ಸೋಲು ಕಂಡಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಪೃಥ್ವಿ ಶಾ, ನಾಯಕ ಶ್ರೇಯಸ್ ಐಯ್ಯರ್, ಮಾರ್ಕಸ್ ಸ್ಟೋಯ್ನಿಸ್ ಸೇರಿದಂತೆ ಪ್ರಮುಖ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ವ್ಯಕ್ತವಾಗುತ್ತಿದೆ.

Story first published: Wednesday, October 7, 2020, 10:06 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X