ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ತಂಡಕ್ಕೆ ಮಿಶ್ರಾ ಬದಲಿಗೆ ಕರ್ನಾಟಕದ ಲೆಗ್ ಸ್ಪಿನ್ನರ್ ಆಯ್ಕೆ

ಮಿಡ್ ಸೀಸನ್ ಆಟಗಾರರ ವರ್ಗಾವಣೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರತಿಭಾವಂತ ಆಟಗಾರರನ್ನು ಮತ್ತೆ ಐಪಿಎಲ್ ಅಂಗಳಕ್ಕೆ ಕರೆ ತನ್ನಿ ಎಂದು ಅಭಿಮಾನಿಗಳು ಆಗ್ರಹಿಸಿದ್ದರ ಬಗ್ಗೆ ಮೈಖೇಲ್ ಕನ್ನಡ ಲೇಖನ ಬರೆದಿದ್ದು ನೆನಪಿರಬಹುದು. ಈ ಲೇಖನದಲ್ಲಿ ಹೆಸರಿಸಿದ್ದ ಕರ್ನಾಟಕದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆಗೆ ಈಗ ಅವಕಾಶ ಸಿಕ್ಕಿದೆ. ಐಪಿಎಲ್ 2020ರಲ್ಲಿ ಸಕತ್ ಆಗಿ ಮಿಂಚಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಕರ್ನಾಟಕದ ಪ್ರತಿಭೆಗೆ ಅವಕಾಶ ನೀಡುತ್ತಿದೆ.

ಕರ್ನಾಟಕದ ಲೆಗ್ ಸ್ಪಿನ್ನರ್ 27 ವರ್ಷ ವಯಸ್ಸಿನ ಪ್ರವೀಣ್ ದುಬೆ ಇಲ್ಲಿ ತನಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿ ಉಳಿದಿದ್ದರು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಿಂದ ಹೊಗಳಿಸಿಕೊಂಡಿದ್ದು ಬಿಟ್ಟರೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. 4 ಟಿ 20ಯಲ್ಲಿ 16 ವಿಕೆಟ್ ಪಡೆದಿದ್ದು ಎಕಾನಾಮಿ 6.87ರಷ್ಟಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟ್ ಕೂಡಾ ಬೀಸಬಲ್ಲ ಪ್ರವೀಣ್ ಅವರನ್ನು ಮಿಡ್ ಸೀಸನ್ ವರ್ಗಾವಣೆ ಬಳಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ.

ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್

ಐಪಿಎಲ್ ನಲ್ಲಿ ಲಸಿತ್ ಮಾಲಿಂಗ ನಂತರ ಅತಿ ಹೆಚ್ಚು ವಿಕೆಟ್ ಪಡೆದಿರುವ ಅನುಭವಿ ಬೌಲರ್ ಅಮಿತ್ ಮಿಶ್ರಾ ಅವರು ಶಾರ್ಜಾದಲ್ಲಿ ಅಕ್ಟಬ್ರ್ 3ರಂದು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಿಟರ್ನ್ಸ್ ಕ್ಯಾಚ್ ಹಿಡಿಯಲು ಹೋಗಿ ಉಂಗುರದ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಸರ್ಜರಿ ಅಗತ್ಯವಿರುವುದರಿಂದ ಟೂರ್ನಮೆಂಟ್ ನಿಂದಲೇ ಹೊರ ನಡೆಯಬೇಕಾಯಿತು.

ಡೆಲ್ಲಿ ತಂಡದ ಆಡುವ XI ರಲ್ಲಿ ಸ್ಥಾನ

ಡೆಲ್ಲಿ ತಂಡದ ಆಡುವ XI ರಲ್ಲಿ ಸ್ಥಾನ

ಡೆಲ್ಲಿ ತಂಡದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟದ ವಿಷಯ. ಈಗಾಗಲೇ ನೇಪಾಳ ಮೂಲದ ಸಂದೀಪ್ ಲಾಮಿಚಾನೆ ತಂಡದಲ್ಲಿದ್ದರೂ ಅವಕಾಶ ಪಡೆದುಕೊಂಡಿಲ್ಲ. ವಿದೇಶಿ ಕೋಟಾದಲ್ಲಿ ಸಂದೀಪ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟ, ಅಕ್ಷರ್ ಹಾಗೂ ಅರ್ ಅಶ್ವಿನ್ ಜೊತೆಗೆ ಹೆಚ್ಚಿನ ಸ್ಪಿನ್ನರ್ ಬೇಕೆನಿಸಿದರೆ ಪ್ರವೀಣ್ ದುಬೆಗೆ ಅವಕಾಶ ಸಿಗಬಹುದು. ಅಕ್ಷರ್ ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದಾರೆ. ಅಶ್ವಿನ್ ಮುಖ್ಯ ಬೌಲರ್ ಆಗಿ ಪರಿಗಣಿಸಲಾಗಿದೆ. ಹೀಗಾಗಿ ಉಳಿದ 5 ಪಂದ್ಯ ಪ್ಲಸ್ ಪ್ಲೇ ಆಫ್ ಗಳಲ್ಲಿ ದುಬೆ ಆಡಲು ಅವಕಾಶ ಸಿಕ್ಕರೆ ಅದು ಅದೃಷ್ಟವೇ ಸರಿ.

ಭಾವುಕ ಭಾಷಣದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ತೊರೆದ ಅಮಿತ್ ಮಿಶ್ರಾ

ಡೆಲ್ಲಿ ಇನ್ನು ಒಂದು ಪಂದ್ಯ ಗೆದ್ದರೆ ಸಾಕು

ಡೆಲ್ಲಿ ಇನ್ನು ಒಂದು ಪಂದ್ಯ ಗೆದ್ದರೆ ಸಾಕು

ಡೆಲ್ಲಿ ಇನ್ನು ಒಂದು ಪಂದ್ಯ ಗೆದ್ದರೆ ಸಾಕು. 16 ಅಂಕಗಳೊಂದಿಗೆ ಪ್ಲೇ ಆಫ್ಸ್ ಸೇರಲಿದೆ. ಮುಂಬೈ ಇನ್ನು ಎರಡು ಪಂದ್ಯ ಗೆಲ್ಲಬೇಕು 16 ಅಂಕ ಜೊತೆಗೆ ಉಳಿದ ತಂಡಕ್ಕಿಂತ ಉತ್ತಮ ರನ್ ಸರಾಸರಿ ಹೊಂದಿದೆ. ಬೆಂಗಳೂರು ತಂಡ ಕೂಡಾ 2 ಪಂದ್ಯ ಗೆದ್ದರೆ ಸಾಕು. ಆದರೆ, ರನ್ ಸರಾಸರಿ ಉತ್ತಮಪಡಿಸಿಕೊಳ್ಳಬೇಕಿದೆ. ದೆಹಲಿ 14 ಅಂಕ ಗಳಿಸಿ ನಂ. 1 ಸ್ಥಾನದಲ್ಲಿದ್ದರೆ, ಮುಂಬೈ, ಬೆಂಗಳೂರು 9 ಪಂದ್ಯಗಳನ್ನಾಡಿ ತಲಾ 12 ಅಂಕ ಗಳಿಸಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ. ಕೆಕೆಆರ್ 10 ಅಂಕಗಳಿಸಿ 4ನೇ ಸ್ಥಾನದಲ್ಲಿದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಉತ್ತರಪ್ರದೇಶ ಮೂಲದ ಕರ್ನಾಟಕದ ಸ್ಪಿನ್ನರ್ ದುಬೆ

ಉತ್ತರಪ್ರದೇಶ ಮೂಲದ ಕರ್ನಾಟಕದ ಸ್ಪಿನ್ನರ್ ದುಬೆ

ಉತ್ತರಪ್ರದೇಶ ಮೂಲ ಅಜಂಗಢದಲ್ಲಿ ಜನಿಸಿದರೂ ಕರ್ನಾಟಕದ ಪರ ದೇಶಿ ಕ್ರಿಕೆಟ್ ನಲ್ಲಿ ಲೆಗ್ ಸ್ಪಿನ್ನರ್, ಬಲಗೈ ಬ್ಯಾಟ್ಸ್ ಮನ್ ಆಗಿ ಪ್ರವೀಣ್ ದುಬೆ ಬೆಳಕಿಗೆ ಬಂದವರು. 2016ರಲ್ಲಿ ಆರ್ ಸಿಬಿ 35 ಲಕ್ಷ ರು ನೀಡಿ ಹರಾಜಿನಲ್ಲಿ ಖರೀದಿಸಿತ್ತು. ನಂತರ ಮತ್ತೊಮ್ಮೆ 2017ರಲ್ಲಿ 10 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುನಃ ಖರೀದಿ ಮಾಡಿತ್ತು. ಆದರೆ, ಒಂದು ಪಂದ್ಯವನ್ನು ಆಡಿಲ್ಲ.

ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?

2017ರಲ್ಲಿ ಕರ್ನಾಟಕ ಪರ ಟಿ 20 ಲೀಗ್ ನಲ್ಲಿ ಮೊದಲ ಪಂದ್ಯ ಹಾಗೂ 2020ರಲ್ಲಿ ರಣಜಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಅನುಭವ ಹೊಂದಿದ್ದಾರೆ. 2014-15ರಲ್ಲಿ ಕೆಪಿಎಲ್ ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ 6 ಪಂದ್ಯಗಳಲ್ಲಿ 7 ವಿಕೆಟ್ (5.90 ಎಕಾನಾಮಿ) 2015-16ರಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ 8 ವಿಕೆಟ್ (6.89 ಎಕಾನಾಮಿ)ಪಡೆದಿದ್ದಾರೆ.

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ.
* ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.
* ಒಂದು ವರ್ಷವಾದ ಬಳಿಕ ಮುಂದಿನ ಸೀಸನ್ ಹರಾಜು ಪ್ರಕ್ರಿಯೆಗೂ ಮುನ್ನ ಮತ್ತೆ ಹಳೆ ತಂಡಕ್ಕೆ ಮರಳಬಹುದಾಗಿದೆ.

ಐಪಿಎಲ್: ಡೆಲ್ಲಿ, ಮುಂಬೈ, ಬೆಂಗಳೂರು ಪ್ಲೇ ಆಫ್ ಚಾನ್ಸ್ ಎಷ್ಟಿದೆ?

Story first published: Monday, October 19, 2020, 15:35 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X