ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕ್ರಿಸ್‌ ವೋಕ್ಸ್

IPL 2020: Delhi Capitals pacer Chris Woakes pulls out of tournament

ಬೆಂಗಳೂರು, ಮಾರ್ಚ್ 6: ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ವರದಿಯೊಂದರ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ. ವೋಕ್ಸ್ ಬದಲಿಗೆ ಡೆಲ್ಲಿ ಫ್ರಾಂಚೈಸಿ ಬದಲಿ ಆಟಗಾರನ ಹುಡುಕುತ್ತಿದೆ ಎಂದು ತಿಳಿದು ಬಂದಿದೆ.

3 ಭಾರತೀಯರು, 4 ಆಸ್ಟ್ರೇಲಿಯನ್ನರು: ಭಜ್ಜಿ ಆಲ್‌ಟೈಮ್‌ ಟೆಸ್ಟ್ ತಂಡ ಹೀಗಿದೆ3 ಭಾರತೀಯರು, 4 ಆಸ್ಟ್ರೇಲಿಯನ್ನರು: ಭಜ್ಜಿ ಆಲ್‌ಟೈಮ್‌ ಟೆಸ್ಟ್ ತಂಡ ಹೀಗಿದೆ

ತಾನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ವೋಕ್ಸ್ ಡೆಲ್ಲಿಗೆ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಡೆಲ್ಲಿ ಫ್ರಾಂಚೈಸಿ ಬೇರೆ ಆಟಗಾರನಿಗಾಗಿ ಹುಡುಕಾಡುತ್ತಿದೆ ಎಂದು ಸ್ಕೈ ಸ್ಪೋರ್ಟ್ಸ್ ವರದಿ ಮಾಡಿದೆ. 2020ರ ಐಪಿಎಲ್ ಆಟಗಾರರ ಹರಾಜಿನಲ್ಲಿ ವೋಕ್ಸ್ ಅವರನ್ನು ಡೆಲ್ಲಿ 1.50 ಕೋ.ರೂ.ಗೆ ಸ್ವಾಧೀನ ಪಡಿಸಿಕೊಂಡಿತ್ತು.

ಏಕದಿನ ಪಂದ್ಯ ಬೇಕೆಂದೇ ಕೈಬಿಟ್ಟ ಮಿಚೆಲ್ ಸ್ಟಾರ್ಕ್: ಕಾರಣ ಏನ್ ಗೊತ್ತಾ?!ಏಕದಿನ ಪಂದ್ಯ ಬೇಕೆಂದೇ ಕೈಬಿಟ್ಟ ಮಿಚೆಲ್ ಸ್ಟಾರ್ಕ್: ಕಾರಣ ಏನ್ ಗೊತ್ತಾ?!

ಬೇಸಗೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಲಭ್ಯರಿರುವುದಕ್ಕಾಗಿ ತಾನು ಐಪಿಎಲ್‌ ಅನ್ನು ತಪ್ಪಿಸಿಕೊಳ್ಳಬಯಸಿರುವುದಾಗಿ ಕ್ರಿಸ್‌ ವೋಕ್ಸ್ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಈ ವಿಚಾರವಂತೂ ಡೆಲ್ಲಿ ಪಾಲಿಗೆ ತಲೆನೋವು ತರುವ ಸಾಧ್ಯತೆಯಿದೆ. ಯಾಕೆಂದರೆ ತಂಡದ ಪ್ರಮುಖ ವೇಗಿಗಳಾದ ಕಾಗಿಸೊ ರಬಾಡ ಮತ್ತು ಇಶಾಂತ್ ಶರ್ಮಾ ಕೂಡ ಗಾಯಗೊಂಡಿದ್ದಾರೆ.

20 ಸಿಕ್ಸರ್ 158* ರನ್: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆಯ ಶತಕ20 ಸಿಕ್ಸರ್ 158* ರನ್: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆಯ ಶತಕ

ಇದೇ ತಿಂಗಳ ಮಾರ್ಚ್ 19ರಿಂದ ಮಾರ್ಚ್ 31ರ ವರೆಗೆ ಇಂಗ್ಲೆಂಡ್‌-ಶ್ರೀಲಂಕಾ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿ ಮುಗಿಯುತ್ತಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸೇರಿಕೊಳ್ಳಲು ಕ್ರಿಸ್‌ ವೋಕ್ಸ್‌ಗೆ ತಿಳಿಸಲಾಗಿತ್ತು. ಆದರೆ ವೋಕ್ಸ್ ಈಗ ಐಪಿಎಲ್‌ನಲ್ಲಿ ಆಡೋದೇ ಅನುಮಾನ ಎಂಬಂತಾಗಿದೆ.

Story first published: Friday, March 6, 2020, 22:31 [IST]
Other articles published on Mar 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X