ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ vs ಕಿಂಗ್ಸ್ XI ಪಂಜಾಬ್ : ಎರಡೂ ತಂಡಗಳ ಬಲಾಬಲ: ಸೋಲು ಗೆಲುವಿನ ಲೆಕ್ಕಾಚಾರ!

Ipl 2020: Delhi Capitals Vs Kings Xi Punjab Match Preview

ಐಪಿಎಲ್ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಕಿಂಗ್ಸ್ XI ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಗೆಲುವಿಗಾಗಿ ಕಾದಾಟವನ್ನು ನಡೆಸಲಿದೆ. ಐಪಿಎಲ್‌ನಲ್ಲಿ ಹೆಚ್ಚು ಕನ್ನಡಿಗ ಆಟಗಾರರನ್ನು ಹೊಂದಿರುವ ತಂಡ ಎನಿಸಿಕೊಂಡಿರುವ ಕಿಂಗ್ಸ್ XI ಪಂಜಾಬ್ ತಂಡದ ಮೇಲೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ.

ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ XI ಪಂಜಾಬ್ ತಂಡದ ವಿರುದ್ಧ ಮೊದಲ ಪಂದ್ಯದ ಗೆಲುವಿಗಾಗಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಎರಡೂ ತಂಡಗಳು ಗೆಲುವಿನ ಮೂಲಕ ಈ ಬಾರಿಯ ಟೂರ್ನಿ ಆರಂಭಿಸಲು ಉತ್ಸುಕವಾಗಿದೆ.

ಸಿಎಸ್‌ಕೆ ನಾಯಕನಾಗಿ 100 ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿಸಿಎಸ್‌ಕೆ ನಾಯಕನಾಗಿ 100 ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿ

ಎರಡೂ ತಂಡಗಳ ಬಲಾಬಲ ಹೇಗಿದೆ. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಏನೆಲ್ಲಾ ಅಂಶಗಳು ಪ್ರಮುಖವಾಗಲಿದೆ ಎಂಬುದನ್ನು ಬನ್ನಿ ನೋಡೋಣ

ಕಳೆದ ಬಾರಿ ಮಿಂಚಿದ್ದ ಡೆಲ್ಲಿ

ಕಳೆದ ಬಾರಿ ಮಿಂಚಿದ್ದ ಡೆಲ್ಲಿ

ಕಳೆದ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ತಂಡ ಉತ್ತಮ ಪ್ರದರ್ಶನವನ್ನು ನೀಡಿ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಏಳು ಆವೃತ್ತಿಗಳ ಬಳಿಕ ಡೆಲ್ಲಿ ಈ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ತಂಡದಲ್ಲಿ ಆರ್ ಅಶ್ವಿನ್ ಹಾಗೂ ಅಜಿಂಕ್ಯ ರಹಾನೆಯಂತಾ ಆನುಭವಿ ಆಟಗಾರರು ಕೂಡ ಕೂಡಿಕೊಂಡಿರುವುದು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ. ಆದರೆ ಒಂದು ಪಂದ್ಯದಲ್ಲಿ ಈ ಇಬ್ಬರು ಆಟಗಾರರಿಗೂ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಯುವ ಹಾಗೂ ಅನುಭವಿಗಳ ತಂಡ

ಯುವ ಹಾಗೂ ಅನುಭವಿಗಳ ತಂಡ

ಇಶಾಂತ್ ಶರ್ಮಾ, ಶಿಖರ್ ಧವನ್, ಪೃಥ್ವಿ ಶಾ ಹಾಗೂ ರಿಷಭ್ ಪಂತ್ ಡೆಲ್ಲಿ ತಂಡದ ಮೊದಲ ಆಯ್ಕೆಯಾಗಿರಲಿದೆ. 7.75 ಕೋಟಿ ಕೊಟ್ಟು ಖರೀದಿಸಿದ ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೇಟ್ಮೇರ್‌ಗೂ ಅವಕಾಶ ನೀಡಬಹುದೇ ಎಂದು ನೋಡಬೇಕಿದೆ. ವೇಗದ ಬೌಲಿಂಗ್ ವಿಭಾಗವನ್ನು ಇಶಾಂತ್ ಶರ್ಮಾ ಮುನ್ನಡೆಸಿದರೆ ಕಗಿಸೋ ರಬಡ ಅವರಿಗೆ ಬೆಂಬಲವಾಗಿರಲಿದ್ದಾರೆ.

ಕಿಂಗ್ಸ್‌ಗೆ ಕನ್ನಡಿಗರ ಬಲ

ಕಿಂಗ್ಸ್‌ಗೆ ಕನ್ನಡಿಗರ ಬಲ

ಮತ್ತೊಂದೆಡೆ ಕಿಂಗ್ಸ್ XI ಪಂಜಾಬ್ ತಂಡ 2014ರ ಬಳಿಕ ಪ್ಲೇ ಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿಲ್ಲ. ಈ ಬಾರಿ ತಂಡದ ನಾಯಕತ್ವ ಕೆಎಲ್ ರಾಹುಲ್ ಹೆಗಲೇರಿದೆ. ಇನ್ನು ಈ ಬಾರಿಯ ಆವೃತ್ತಿಯಲ್ಲಿ ಕಿಂಗ್ಸ್ ತಂಡದ ಮುಖ್ಯ ಕೋಚ್ ಜವಾಬ್ಧಾರಿಯನ್ನು ಅನಿಲ್ ಕುಂಬ್ಳೆ ವಹಿಸಿಕೊಂಡಿದ್ದು ಮತ್ತೊಂದು ಮಹತ್ವದ ಸಂಗತಿಯಾಗಿದೆ.

ಕಿಂಗ್ಸ್ ತಂಡದಲ್ಲಿದೆ ದೊಡ್ಡ ಹೆಸರುಗಳು

ಕಿಂಗ್ಸ್ ತಂಡದಲ್ಲಿದೆ ದೊಡ್ಡ ಹೆಸರುಗಳು

ಗ್ಲೆನ್ ಮ್ಯಾಕ್ಸ್‌ವೆಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್‌ರಂತಾ ಆಟಗಾರರು ತಂಡದಲ್ಲಿರುವುದು ಕಿಂಗ್ಸ್ ಪಾಲಿಗೆ ಬಲವಾಗಿದೆ. ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಆದರೆ ರಾಹುಲ್‌ಗೆ ಕ್ರಿಸ್ ಗೇಲ್ ಸಾಥ್ ನೀಡುತ್ತಾರ ಅಥವಾ ಮ್ಯಾಕ್ಸ್‌ವೆಲ್‌ಗೆ ಆ ಅವಕಾಶ ದೊರೆಯಲಿದೆಯಾ ಎಂಬುದು ಕುತೂಹಲವಾಗಿದೆ ಯಾಕೆಂದರೆ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೂ ಮ್ಯಾಕ್ಸಿ ಇನ್ನಿಂಗ್ಸ್ ಆರಂಭಿಸಿ ಅನುಭವ ಹೊಂದಿದ್ದಾರೆ.

ಕಿಂಗ್ಸ್ ಬೌಲಿಂಗ್ ವಿಭಾಗ

ಕಿಂಗ್ಸ್ ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾವಗದಲ್ಲಿ ಸ್ಪಿನ್ನರ್ ಆಗಿ ಮಜೀಬ್ ಉರ್ ರೆಹ್ಮಾನ್‌ಗೆ ಕನ್ನಡಿಗ ಕೃಷ್ಣಪ್ಪ ಗೌತಮ್ ಸಾಥ್ ನೀಡುವ ಸಾಧ್ಯತೆಯಿದೆ. ಮೊಹಮದ್ ಶಮಿ ವೇಗದ ಬೌಲಿಂಗ್ ವಿಭಾವವನ್ನು ಮುನ್ನಡೆಸಿದರೆ ಕೆರಿಬಿಯನ್ ನಾಡಿನ ಸೈನಿಕ ಶೆಲ್ಡನ್ ಕಾಟ್ರೆಲ್ ತಂಡದಲ್ಲಿ ಅವಕಾಶ ಪಡೆಯುವುದು ಖಚಿತ.

Story first published: Sunday, September 20, 2020, 22:05 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X