ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಕೊಟ್ಟ ಸಣ್ಣ ಸಲಹೆ ನನ್ನ ಆಟಕ್ಕೆ ನೆರವಾಯ್ತು: ದೇವದತ್

ದುಬೈ, ಸೆ. 22: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರಲ್ಲಿ ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ನದ್ದೇ ಸದ್ದು. ಆರ್ ಸಿಬಿ ಪರ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಎಲ್ಲರ ಗಮನ ಸೆಳೆದ ಪಡಿಕ್ಕಲ್ ತಮ್ಮ ಆಟದ ಬಗ್ಗೆ ಮಾತನಾಡಿದ್ದಾರೆ.

ಆರ್ ಸಿಬಿ ತಂಡಕ್ಕೆ ಎಂದಿನಂತೆ ಆಡುವ ಹನ್ನೊಂದು ಆಯ್ಕೆ ಗೊಂದಲ ಇದ್ದೇ ಇತ್ತು. ಆದರೆ, ನಾಯಕ ಕೊಹ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಓಪನರ್ ಪಾರ್ಥೀವ್ ಪಟೇಲ್ ಅವರ ಬದಲು ಅರೋನ್ ಫಿಂಚ್ ಜೊತೆ ಕಣಕ್ಕಿಳಿಯಲು ದೇವದತ್ ಪಡಿಕ್ಕಲ್ ಅವರಿಗೆ ಅವಕಾಶ ಕಲ್ಪಿಸಿದ್ದರು. ಅಳುಕಿನಿಂದಲೇ ಒಂದೆರಡು ಚೆಂಡು ಎದುರಿಸಿದ ಪಡಿಕ್ಕಲ್ ನಂತರ ಲೀಲಾಜಾಲವಾಗಿ ಚೆಂಡನ್ನು ಬೌಂಡರಿಗಟ್ಟತೊಡಗಿದರು.

ಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕ

43 ಎಸೆತಗಳಲ್ಲಿ 56 ತನ್ ಗಳಿಸಿ ಹೊಸ ದಾಖಲೆ ಬರೆದರು. 12 ಟಿ20 ಪಂದ್ಯಗಳಲ್ಲಿ 63.66 ಸರಾಸರಿಯಂತೆ 636ರನ್ ಗಳಿಸಿದ್ದಾರೆ. 6 ಅರ್ಧ ಶತಕ, ಒಂದು ಶತಕ ಬಾರಿಸಿದ್ದಾರೆ.

ಕೊಂಚ ತಳಮಳವಾಗಿತ್ತು

ಕೊಂಚ ತಳಮಳವಾಗಿತ್ತು

ಆರ್ ಸಿಬಿ ಪರ ಆಡಲು ಕರೆ ಬಂದಾಗ ಕೊಂಚ ತಳಮಳವಾಗಿತ್ತು. ಲಾಕ್ಡೌನ್ ನಿಂದಾಗಿ ವೃತ್ತಿಪರ ಕ್ರಿಕೆಟ್ ಆಡಲು ಅವಕಾಶ ಇಲ್ಲದಂಥ ಪರಿಸ್ಥಿತಿ ಇತ್ತು. ಆದರೆ, ದುಬೈಗೆ ನನ್ನ ನೆಚ್ಚಿನ ಕ್ರಿಕೆಟರ್ ಗಳ ಜೊತೆ ಪ್ರಯಾಣಿಸುತ್ತೇನೆ. ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುತ್ತೇನೆ ಎಂಬುದು ನನ್ನ ಉತ್ಸಾಹವನ್ನು ಹೆಚ್ಚಿಸಿತು. ತರಬೇತಿ ಸಂದರ್ಭದಲ್ಲಿ ನಾಯಕ ಕೊಹ್ಲಿ ನೀಡಿದ ಸಣ್ಣ ಪುಟ್ಟ ಸಲಹೆಗಳು ನನ್ನ ಉಪಯೋಗಕ್ಕೆ ಬಂದಿತು ಎಂದು ಪಡಿಕ್ಕಲ್ ಹೇಳಿದ್ದಾರೆ.

ವೃತ್ತಿಯ ಆರಂಭದಲ್ಲೇ ಪಡಿಕ್ಕಲ್ ದಾಖಲೆ

ವೃತ್ತಿಯ ಆರಂಭದಲ್ಲೇ ಪಡಿಕ್ಕಲ್ ದಾಖಲೆ

ಪಡಿಕ್ಕಲ್ ಅವರು ಐಪಿಎಲ್ ಗೂ ಮುನ್ನ ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಪಂದ್ಯ ಟೂರ್ನಮೆಂಟ್ ಗಳ ಮೊದಲ ಪಂದ್ಯದಲ್ಲೂ 50 ಪ್ಲಸ್ ರನ್ ಸ್ಖೋರ್ ಮಾಡಿದ ದಾಖಲೆ ಹೊಂದಿದ್ದಾರೆ.|

2019ರ ದೇಶಿ ಸೀಸನ್ ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್, ವಿಜಯ್ ಹಜಾರೆ 50 ಓವರ್ ಗಳ ಟೂರ್ನಮೆಂಟ್, ರಣಜಿ, ಕೆಂಪು, ಬಿಳಿ ಎಲ್ಲ ಚೆಂಡುಗಳನ್ನು ಚೆಚ್ಚಿ ರನ್ ಹೊಳೆ ಹರಿಸಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಫಿಂಚ್ ಆತ್ಮವಿಶ್ವಾಸ ತುಂಬಿದರು

ಫಿಂಚ್ ಆತ್ಮವಿಶ್ವಾಸ ತುಂಬಿದರು

ಆರ್ ಸಿಬಿ ಪರ ಆರಂಭಿಕ ಆಟನಾಗಿ ಕಣಕ್ಕಿಳಿದ ನನಗೆ ಇನ್ನೊಂದು ತುದಿಯಲ್ಲಿದ್ದ ಅರೋನ್ ಫಿಂಚ್ ಆತ್ಮ ವಿಶ್ವಾಸ ತುಂಬಿದರು. ನಾನು ರನ್ ಸ್ಕೋರ್ ಮಾಡುತ್ತಿದ್ದಾಗ ನನಗೆ ನೆರವಾಗುತ್ತಾ ಸ್ಟ್ರೈಕ್ ನೀಡಿದರು. ಒಂದೆರಡು ಎಸೆತಗಳನ್ನು ಸರಿಯಾಗಿ ಕನೆಕ್ಟ್ ಮಾಡುತ್ತಿದ್ದಂತೆ ದೀರ್ಘ ಇನ್ನಿಂಗ್ಸ್ ಆಡುವ ಆತ್ಮವಿಶ್ವಾಸ ಬೆಳೆಯಿತು. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಹೆಚ್ಚಿನ ಕೊಡುಗೆಯನ್ನು ನೀಡಲು ಶ್ರಮಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳಿಂದ ಹೊಗಳಿಕೆ

ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳಿಂದ ಹೊಗಳಿಕೆ

ದೇವದತ್ ಪಡಿಕ್ಕಲ್ ನಿಲ್ಲುವ ಶೈಲಿ, ಬ್ಯಾಟ್ ಎತ್ತಿ ಲೀಲಾಜಾಲವಾಗಿ ಬೀಸುವ ರೀತಿಯನ್ನು ನೋಡಿದ ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು ಮನ ಸೋತಿದ್ದಾರೆ. ಹಲವಾರು ಮಂದಿ ಅಭಿನವ ಯುವರಾಜ್ ಸಿಂಗ್ ಎಂದರೆ ಕೆಲವರು ಸೌರವ್ ಗಂಗೂಲಿ ಹಾಗೂ ಯುವರಾಜ್ ಆಟವನ್ನು ನೆನಪಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ. ಆದರೆ, ಸೌಮ್ಯ ಸ್ವಭಾವದ ಕೂಲ್ ನೆಸ್ ನಲ್ಲಿ ಧೋನಿಗೆ ಪೈಪೋಟಿ ನೀಡಬಲ್ಲ ಪಡಿಕ್ಕಲ್ ಹೊಗಳಿಕೆಗೆ ಹಿಗ್ಗುವುದಿಲ್ಲ ಎಂದು ಆಪ್ತರ ಅಭಿಪ್ರಾಯ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

Story first published: Wednesday, September 23, 2020, 10:27 [IST]
Other articles published on Sep 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X