ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸಿಎಸ್‌ಕೆ ತಂಡದ ರಣತಂತ್ರದ ಬಗ್ಗೆ ಸುಳಿವು ನೀಡಿದ ಡ್ವೇಯ್ನ್ ಬ್ರಾವೋ

IPL 2020: Dwayne Bravo reveale the game plane of CSK

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಸನ್‌ರೈಸರ್ಸ್ ಹೈದರಬಾದ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲೂ ಭರ್ಜರಿ ಆಟವನ್ನು ಮುಂದುವರಿಸುವ ಸುಳಿವು ನೀಡಿದೆ.

ಈ ಮಧ್ಯೆ ಚೆನ್ನೈ ತಂಡದ ಅನುಭವಿ ಆಲೌಂಡರ್ ಆಟಗಾರ ಡ್ವೆಯ್ನ್ ಬ್ರಾವೋ ತಂಡದ ರಣತಂತ್ರದ ಬಗ್ಗೆ ಸುಳಿವನ್ನು ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸಿಎಸ್‌ಕೆ ಖಂಡಿತಾ ತಿರುಗಿ ಬೀಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್

ಟೂರ್ನಿಯಲ್ಲಿ ಎರಡು ವಿಭಾಗ

ಟೂರ್ನಿಯಲ್ಲಿ ಎರಡು ವಿಭಾಗ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ಮಾತನಾಡುದ ಬ್ರಾವೋ, ನಾವು ಈ ಬಾರಿಯ ಟೂರ್ನಿಯನ್ನು ಎರಡು ಭಾಗಗಳಾಗಿ ವಿಭಾಗಿಸಿಕೊಳ್ಳಲು ಬಯಸಿದ್ದೇವೆ. ಮುಂದಿನ ಉಳಿದಾರ್ಧ ಭಾಗದಲ್ಲಿ ಗೆಲುವನ್ನು ಸಾಧಿಸುತ್ತಾ ಸಾಗಲು ನಮ್ಮ ಚಿತ್ತವನ್ನು ನೆಟ್ಟದ್ದೇವೆ ಎಂದು ಬ್ರಾವೋ ಹೇಳಿಕೆಯನ್ನು ನೀಡಿದ್ದಾರೆ.

ತಂಡದ ಪ್ರಯತ್ನ

ತಂಡದ ಪ್ರಯತ್ನ

ನಾನು ಈ ಕ್ಷಣವನ್ನು ತುಂಬಾ ಆನಂದಿಸುತ್ತೇನೆ. ಇದಕ್ಕೆ ಶಾರ್ದೂಲ್ ಠಾಕೂರ್‌ ಪ್ರಯತ್ನವನ್ನು ಅಭಿನಂದಿಸಲೇ ಬೇಕು. 19ನೇ ಓವರ್ ಎಸೆದ ಶಾರ್ದೂಲ್ ನನಗೆ ಅಂತಿಮ ಓವರ್‌ಅನ್ನು ಸುಲಭವಾಗಿಸಿದರು. ಇಲ್ಲವಾದಲ್ಲಿ ರಶೀದ್ ಖಾನ್ ತುಂಬಾ ಅಪಾಯಕಾರಿಯಾಗಿರುತ್ತಿದ್ದರು. 167 ರನ್‌ಗಳನ್ನು ರಕ್ಷಿಸಿಕೊಳ್ಳುವುದು ಕಠಿಣ. ಆದರೆ ಇದೊಂದು ಸಂಪೂರ್ಣ ತಂಡದ ಪ್ರಯತ್ನವಾಗಿತ್ತು. ಎಂದು ಡ್ವೇಯ್ನ್ ಬ್ರಾವೋ ಹೇಳಿದ್ದಾರೆ.

ಮುಂದೆ ಗೆಲುವು ನಿಶ್ವಿತ

ಮುಂದೆ ಗೆಲುವು ನಿಶ್ವಿತ

"ಸಿಎಸ್‌ಕೆ ಈ ರೀತಿಯ ಹಂತದಲ್ಲಿ 2010ಕ್ಕೂ ಮೊದಲು ಇತ್ತು. ನಾವು ಈ ಟೂರ್ನಿಯನ್ನು ಎರಡು ಮಿನಿ ಟೂರ್ನಮೆಂಟ್ ರೀತಿ ವಿಭಾಗಿಸಲು ಬಯಸುತ್ತೇವೆ. ದ್ವಿತೀಯಾರ್ಧದಲ್ಲಿ ನಾವು ಎಷ್ಟು ಪಂದ್ಯಗಳನ್ನು ಗೆಲ್ಲಲಿದ್ದೇವೆ ನೀವು ನೋಡಲಿದ್ದೀರಿ" ಎಂದು ಬ್ರಾವೋ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಬದಲಾವಣೆ ಮಾಡಿಕೊಂಡ ಸಿಎಸ್‌ಕೆ

ಬದಲಾವಣೆ ಮಾಡಿಕೊಂಡ ಸಿಎಸ್‌ಕೆ

ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 167/6 ರನ್‌ಗಳಿಸಿತು. 42 ರನ್ ಗಳಿಸಿದ ಶೇನ್ ವಾಟ್ಸನ್ ಟಾಪ್ ಸ್ಕೋರರ್ ಎನಿಸಿದರು. ಸಿಎಸ್‌ಕೆ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿತ್ತು. ಕೆಲ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಸ್ಯಾಮ್ ಕರ್ರನ್ ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸಿದ್ದರು.

Story first published: Wednesday, October 14, 2020, 12:29 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X