ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್‌ ನೂತನ ನಾಯಕ

IPL 2020: Eoin Morgan appointed as the new captain of Kolkata Knight Riders

ಕೊಲ್ಕತಾ ನೈಟ್ ರೈಡರ್ಸ್ ಟೂರ್ನಿಯ ಮಧ್ಯ ಭಾಗದಲ್ಲಿ ಪ್ರಮುಖ ಬದಲಾವಣೆಯಾಗಿದೆ. ದಿನೇಶ್ ಕಾರ್ತಿಕ್ ಹೆಗಲಿನಲ್ಲಿದ್ದ ನಾಯಕತ್ವದ ಜವಾಬ್ಧಾರಿ ಈಗ ಇಯಾನ್ ಮಾರ್ಗನ್ ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಈವರೆಗೆ ಮುನ್ನಡೆಸಿದ್ದ ದಿನೇಶ್ ಕಾರ್ತಿಕ್ ಸ್ವತಃ ತಾವೇ ನಾಯಕತ್ವವನ್ನು ಇಯಾನ್ ಮಾರ್ಗನ್‌ಗೆ ನೀಡಲು ಬಯಸಿದ್ದಾರೆ ಎಂದು ಕೆಕೆಆರ್ ತಿಳಿಸಿದೆ. ತಂಡದ ಹಿತದೃಷ್ಠಿಯಿಂದ ಬ್ಯಾಟಿಂಗ್‌ ಕಡೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸಲಿ ಎಂದು ಸ್ವತಃ ದಿನೇಶ್ ಕಾರ್ತಿಕ್ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಕೆಕೆಆರ್ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಐಪಿಎಲ್ 2020: ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಕಿಂಗ್ಸ್ XI ಪಂಜಾಬ್ಐಪಿಎಲ್ 2020: ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಕಿಂಗ್ಸ್ XI ಪಂಜಾಬ್

ಡಿಕೆಯಂತಾ ನಾಯಕ ಸಿಕ್ಕಿದ್ದು ಅದೃಷ್ಠ

ಡಿಕೆಯಂತಾ ನಾಯಕ ಸಿಕ್ಕಿದ್ದು ಅದೃಷ್ಠ

ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ಕೊಲ್ಕತಾ ನೈಟ್ ರೈಡರ್ಸ್ ವೆಬ್‌ಸೈಟ್ ಉಲ್ಲೇಖಿಸಿದೆ. " ತಂಡವೇ ಮೊದಲು ಎಂಬ ಭಾವನೆಯನ್ನು ಹೊಂದಿರುವ ದಿನೇಶ್ ಕಾರ್ತಿಕ್ ಅವರಂತಾ ನಾಯಕನನ್ನು ಪಡೆಯಲು ನಾವು ಅದೃಷ್ಠ ಮಾಡಿದ್ದೇವೆ. ಈ ರೀತಿಯ ನಿರ್ಧಾರವನ್ನು ಯಾರೇ ತೆಗೆದುಕೊಳ್ಳುವುದಿದ್ದರೂ ಅದಕ್ಕೆ ಸಾಕಷ್ಟು ಧೈರ್ಯ ಬೇಕು" ಎಂದು ವೆಂಕಿ ಮೈಸೂರ್ ತಿಳಿಸಿದ್ದಾರೆ.

ದಿನೇಶ್ ಕಾರ್ತಿಕ್ ನಿರ್ಧಾರಕ್ಕೆ ಆಶ್ಚರ್ಯ

ದಿನೇಶ್ ಕಾರ್ತಿಕ್ ನಿರ್ಧಾರಕ್ಕೆ ಆಶ್ಚರ್ಯ

"ದಿನೇಶ್ ಕಾರ್ತಿಕ್ ಅವರ ನಿರ್ಧಾರಕ್ಕೆ ನಾವು ಆಶ್ಚರ್ಯಗೊಂಡಿದ್ದೇವೆ. ಅದರ ಜೊತೆಗೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. 2019ರ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ತಂಡದಲ್ಲಿ ಹೊಂದಿರುವುದಕ್ಕೆ ನಾವು ಅದೃಷ್ಠಹೊಂದಿದ್ದೇವೆ. ಉಪನಾಯಕನಾಗಿದ್ದ ಅವರು ಮುಂದಿನ ಹಂತದಲ್ಲಿ ತಂಡವನ್ನು ಸಂಪೂರ್ಣವಾಗಿ ಮುನ್ನಡೆಸಲಿದ್ದಾರೆ" ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ನೀಡಿರುವುದನ್ನು ಕೆಕೆಆರ್ ವೆಬ್‌ಸೈಟ್ ಉಲ್ಲೇಖ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಯಕನ ಬದಲಾವಣೆ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಕೇಳಿ ಬಂದಿತ್ತು. ಇಯಾನ್ ಮಾರ್ಗನ್ ಅವರಂತಾ ವಿಶ್ವಕಪ್ ವಿಜೇತ ತಂಡದ ನಾಯಕ ತಂಡದಲ್ಲಿರುವಾಗ ದಿನೇಶ್ ಕಾರ್ತಿಕ್‌ಗೆ ಆ ಜವಾಬ್ಧಾರಿ ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ಕಾರ್ತಿಕ್ ಹೆಚ್ಚಿನ ಪಂದ್ಯಗಳಲ್ಲಿ ಮಿಂಚಲು ಕೂಡ ವಿಫಲರಾಗಿದ್ದರು. ಈಗ ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನವೇ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ನಾಯಕನಾಗಿ ದಿನೇಶ್ ಕಾರ್ತಿಕ್

ನಾಯಕನಾಗಿ ದಿನೇಶ್ ಕಾರ್ತಿಕ್

2018ರ ಆವೃತ್ತಿಯ ನಂತರ ದಿನೇಶ್ ಕಾರ್ತಿಕ್ ಕೆಕೆಆರ್ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. 37 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಕೆಕೆಆರ್ ತಂಡವನ್ನು ಮುನ್ನಡೆಸಿದ್ದು 19ರಲ್ಲಿ ಗೆಲುವು ಸಾಧಿಸಿದ್ದರೆ 17 ಪಂದ್ಯಗಳಲ್ಲಿ ಸೋಲು ಕಂಡಿದೆ. 2018ರ ಆವೃತ್ತಿಯ ಟೂರ್ನಿಯಲ್ಲಿ ಕೆಕೆಆರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ ಕಳೆದ 2019ರ ಆವೃತ್ತಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

Story first published: Friday, October 16, 2020, 15:28 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X