ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ತಂಡದಲ್ಲಿ ಪ್ರತಿಯೊಬ್ಬರೂ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ: ರಹಾನೆ

IPL 2020: Every Individual player Capable Of Winning Game For Our Team, Says Rahane

ಆರಂಭದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಗೆಲುವಿನ ಮೇಲೆ ಗೆಲುವಿ ಸಾಧಿಸಿಕೊಂಡು ಮುನ್ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ ಅಂತಿಮ ಹಂತದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಸೋತು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ತಂಡದ ಪ್ರದರ್ಶನದ ಬಗ್ಗೆ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆಟಗಾರರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದು ಗೆಲ್ಲಲು ಸಹಕಾರಿಯಾಗಲಿದೆ ಎಂದಿದ್ದಾರೆ. ಮತ್ತೆ ಗೆಲುವಿನ ಹಾದಿ ಕಂಡುಕೊಳ್ಲುವ ಬಗ್ಗೆ ರಹಾನೆ ವಿಶ್ವಾಸವನ್ನು ವ್ಯಕ್ತಡಿಸಿದ್ದಾರೆ.

ಐಪಿಎಲ್ 2020ರಲ್ಲಿ KKR ಇನ್ನೂ ಉಸಿರಾಡುತ್ತಿದೆ: ಡೇವಿಡ್ ಹಸ್ಸಿಐಪಿಎಲ್ 2020ರಲ್ಲಿ KKR ಇನ್ನೂ ಉಸಿರಾಡುತ್ತಿದೆ: ಡೇವಿಡ್ ಹಸ್ಸಿ

ನಮ್ಮ ತಂಡದಲ್ಲಿನ ಪ್ರತಿಯೊಬ್ಬರೂ ಕೂಡ ಅತ್ಯುತ್ತಮ ಆಟಗಾರರಾಗಿದ್ದಾರೆ. ಏಕಾಂಗಿಯಾಗಿ ನಿಂತು ಒಬ್ಬರೇ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಪ್ರತಿಯೊಬ್ಬ ಆಟಗಾರನೂ ಹೊಂದಿದ್ದಾರೆ ಎಂದು ಅಜಿಂಕ್ಯ ರಹಾನೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಸತತ ಮೂರು ಗೆಲುವುಗಳು ನಮ್ಮ ತಂಡವನ್ನು ಕೆಟ್ಟ ತಂಡವನ್ನಾಗಿ ಮಾಡಲಾರದು. ಐಪಿಎಲ್‌ನಂತಾ ದೊಡ್ಡ ಟೂರ್ನಿಗಳಲ್ಲಿ ಈ ತರಹದ್ದು ನಡೆಯುತ್ತದೆ ಎಂದು ಡೆಲ್ಲಿ ತಮಡದ ಆರಮಭಿಕ ಆಟಗಾರ ರಹಾನೆ ಹೇಳಿದ್ದಾರೆ. ನಾವು ಉತ್ತಮ ಆರಂಭವನ್ನು ಪಡೆದೆವು. ಆರಂಭದ 9 ಪಂದ್ಯಗಳಲ್ಲಿ 7ಗೆಲುವು ಸಾಧಿಸಿದೆವು. ಆದರೆ ಕಳೆದ ಮೂರು ಪಂದ್ಯಗಳಲ್ಲಿ ನಾವು ಬಯಸಿದ್ದು ನಡೆಯಲಿಲ್ಲ ಎಂದು ರಹಾನೆ ತಿಳಿಸಿದ್ದಾರೆ.

ಐಪಿಎಲ್ 2020: ರಾಜಸ್ಥಾನ್ ಬೌಲಿಂಗ್ ವಿಭಾಗದ ಬಗ್ಗೆ ಸೆಹ್ವಾಗ್ ಖಡಕ್ ಹೇಳಿಕೆಐಪಿಎಲ್ 2020: ರಾಜಸ್ಥಾನ್ ಬೌಲಿಂಗ್ ವಿಭಾಗದ ಬಗ್ಗೆ ಸೆಹ್ವಾಗ್ ಖಡಕ್ ಹೇಳಿಕೆ

'ಇಷ್ಟು ಸುದೀರ್ಘ ಟೂರ್ನಿಯಲ್ಲಿ ನಾವು ಪ್ರತಿ ಪಂದ್ಯಗಳಲ್ಲೂ ಕಲಿಯುತ್ತೇವೆ. ಮುಂದಿನ ಎರಡು ಪಂದ್ಯಗಳು ನಮಗೆ ಬಹಳ ಮುಖ್ಯ. ಇದು ನಮ್ಮ ಬಲದೊಂದಿಗೆ ಆಡುವುದು ಮತ್ತು ಒಬ್ಬರಿಗೊಬ್ಬರು ಬೆಂಬಲಿಸುವುದು ಬಹಳ ಮುಖ್ಯವಾಗುತ್ತದೆ' ಎಂದು ಹೇಳಿಕೆಯನ್ನು ನೀಡಿದ್ದಾರೆ ಅಜಿಂಕ್ಯ ರಹಾನೆ.

Story first published: Saturday, October 31, 2020, 9:47 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X